ಕಳೆದ ವರ್ಷ 9 ಕೋಟಿಗೆ ಖರೀದಿ ಆಗಿದ್ದ ಕನ್ನಡಿಗ ಈ ಸಲದ ಐಪಿಎಲ್ ಅಲ್ಲಿ ಕೇವಲ 90 ಲಕ್ಷಕ್ಕೆ ಖರೀದಿ

ಈ ಇಳಿಕೆ ಏರಿಕೆ ಎಂಬುದು ಷೇರು ಮಾರುಕಟ್ಟೆಯಲ್ಲಿ ನಡೆಯುತ್ತಿರುತ್ತದೆ. ಇದೀಗ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಹರಾಜಿನಲ್ಲಿಯೂ ಕೂಡ ಈ ರೀತಿಯ ಬೆಳವಣಿಗೆ ನಾಂದಿಯಾಗಿದೆ. ಹೌದು ದೇಶಿಯ ಕ್ರಿಕೆಟ್ ಆಗಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಹರಾಜು ಪ್ರಕ್ರಿಯೆ ಆರಂಭಗೊಂಡಿದ್ದು ವಿವಿಧ ಫ್ರಾಂಚೈಸಿಗಳು ಆಟಗಾರರನ್ನು ಖರೀದಿ ಮಾಡುತ್ತಿದ್ದಾರೆ. ಆಟಗಾರರ ಸಾಮರ್ಥ್ಯದ ಆಧಾರದ ಮೇಲೆ ಫ್ರಾಂಚೈಸಿಗಳು ಕೋಟಿ ಕೋಟಿ ರೂಗಳಿಗೆ ಆಟಗಾರರನ್ನ ತಮ್ಮ ತಂಡಕ್ಕೆ ಸೇರ್ಪಡೆ ಮಾಡಿಕೊಳ್ಳುತ್ತಿದ್ದಾರೆ. ಅದರಂತೆ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ 14ನೇ ಆವೃತ್ತಿಯಲ್ಲಿ ಖರೀದಿ ಮಾಡಿದಂತಹ ಆಟಗಾರರಲ್ಲಿ ಕೆಲವರನ್ನ ವಿವಿಧ ಫ್ರಾಂಚೈಸಿಗಳು ತಮ್ಮ ತಂಡದಿಂದ ಕೈ ಬಿಟ್ಟಿದ್ದಾರೆ. ಬಿಸಿಸಿಐ ಹೊಸದಾಗಿ ರೂಪಿಸಿದ ರಿಟೈನ್ ನಿಯಮದಡಿಯಲ್ಲಿ ಆಯಾಯ ಫ್ರಾಂಚೈಸಿಗಳು ತಮ್ಮ ತಂಡಕ್ಕೆ ಅಗತ್ಯವಾದ ನಾಲ್ವರು ಆಟಗಾರರನ್ನ ಉಳಿಸಿಕೊಂಡವು.

ಉಳಿದಂತಹ ಆಟಗಾರರು ಬಿಡ್ ನಲ್ಲಿ ತಮ್ಮ ಹೆಸರನ್ನ ನೋಂದಾಯಿಸಿಕೊಂಡಿದ್ದಾರೆ. ಅದರಂತೆ ಇದೀಗ ಹರಾಜು ಪ್ರಕ್ರಿಯೆ ಆರಂಭಗೊಂಡಿದ್ದು ವಿವಿಧ ಫ್ರಾಂಚೈಸಿಗಳು ತಮ್ಮ ತಂಡಕ್ಕೆ ಅಗತ್ಯವಾದ ಸೂಕ್ತ ಆಟಗಾರರನ್ನು ಆಯ್ಕೆ ಮಾಡಿಕೊಳ್ಳುತ್ತಿದೆ. ಅದರಲ್ಲಿ ಕರ್ನಾಟಕದ ಆಲ್ ರೌಂಡರ್ ಅಂಡ್ ಬೌಲರ್ ಕೃಷ್ಣಪ್ಪ ಗೌತಮ್ ಅವರು ಲಕ್ನೋ ತಂಡಕ್ಕೆ ಕೇವಲ ತೊಂಭತ್ತು ಲಕ್ಷಕ್ಕೆ ಹರಾಜಾಗಿದ್ದಾರೆ. ಕಳೆದ 14ನೇ ಆವೃತ್ತಿಯಲ್ಲಿ ಇದೇ ಕೃಷ್ಣಪ್ಪ ಗೌತಮ್ ಅವರು ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಬರೋಬ್ಬರಿ 9.25 ಕೋಟಿಗೆ ಹರಾಜಾಗಿದ್ದರು. ಆದರೆ ಈ 15ನೇ ಸೀಸನ್ ನಲ್ಲಿ ಲಕ್ನೋ ಸೂಪರ್ ಜಯಂಟ್ಸ್ ತಂಡ ಕೃಷ್ಣಪ್ಪ ಗೌತಮ್ ಅವರನ್ನ ಕೇವಲ ತೊಂಭತ್ತು ಲಕ್ಷಕ್ಕೆ ತನ್ನ ತಂಡಕ್ಕೆ ಸೇರ್ಪಡೆ ಮಾಡಿಕೊಂಡಿದೆ.

ಅಂತರಾಷ್ಟ್ರೀಯ ಪಂದ್ಯಗಳನ್ನ ಆಡದಂತಹ ಕೃಷ್ಣಪ್ಪ ಗೌತಮ್ ಅವರು ಕಳೆದ ಸೀಸನ್ ನಲ್ಲಿ ಗರಿಷ್ಟ ಮೊತ್ತಕ್ಕೆ ಹರಾಜಾದ ಅನ್ ಕ್ಯಾಪ್ಡ್ ಆಟಗಾರ ಎಂಬ ಕೀರ್ತಿಗೆ ಪಾತ್ರರಾಗಿದ್ದರು. 2017 ರಲ್ಲಿ ಈ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಗೆ ಪ್ರವೇಶ ಪಡೆದುಕೊಂಡ ಕನ್ನಡಿಗ ಕೃಷ್ಣಪ್ಪ ಗೌತಮ್ ಅವರು 2017ರಲ್ಲಿ ಮುಂಬೈ ಇಂಡಿಯನ್ಸ್ ತಂಡದ ಪರ, 2018ರಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಪರ ಮತ್ತು 2020ರಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಪರ ಆಟವಾಡಿದ್ದರು. ಒಟ್ಟು ಮೂರು ಸೀಸನ್ ಗಳಲ್ಲಿ ಕೆ.ಗೌತಮ್ ಅವರು ಇಪ್ಪತ್ನಾಲ್ಕು ಪಂದ್ಯಗಳನ್ನಾಡಿದ್ದು 186 ರನ್ ಗಳಿಸಿದ್ದಾರೆ ಮತ್ತು 13 ವಿಕೆಟ್ ಗಳಿಸಿದ್ದಾರೆ. ಹಾಲಿ ಚಾಂಪಿಯನ್ ಆಗಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಕಳೆದ ಸೀಸನ್ ನಲ್ಲಿ ಒಂಬತ್ತು ಕೋಟಿ ಇಪ್ಪತ್ತೈದು ಲಕ್ಷಕ್ಕೆ ಹರಾಜಾಗಿದ್ದ ಕೆ.ಗೌತಮ್ ಇದೀಗ ಹೊಸ ಫ್ರಾಂಚೈಸಿ ತಂಡ ಲಖನೌ ಸೂಪರ್ ಜಯಂಟ್ಸ್ ತಂಡಕ್ಕೆ ಕೇವಲ ತೊಂಭತ್ತು ಲಕ್ಷಕ್ಕೆ ಹರಾಜಾಗಿರುವುದು ಅಚ್ಚರಿಯಾಗಿದೆ.

%d bloggers like this: