ಕನ್ನಡವನ್ನೇ ತೆಗೆದು ಹಾಕಿದ ಉಡುಪಿ ಶ್ರೀ ಕೃಷ್ಣ ಮಠ

ಕರ್ನಾಟಕದಲ್ಲಿಯೇ ಕನ್ನಡಕ್ಕೆ ಸಿಗಬೇಕಾದ ಗೌರವ ಸಿಗುತ್ತಿಲ್ಲ, ನಮ್ಮ ಕರ್ನಾಟಕದ ಪ್ರಸಿದ್ಧ ಕ್ಷೇತ್ರವಾದ ಉಡುಪಿಯ ಶ್ರೀಕೃಷ್ಣನ ಮಠದಲ್ಲಿ ಇಷ್ಟು ದಿನ ಇದ್ದ ಕನ್ನಡ ನಾಮಫಲಕ ಈಗ ಕಾಣೆಯಾಗಿದೆ. ಇದಕ್ಕೆ ಭಾರಿ ವಿರೋಧ ವ್ಯಕ್ತವಾಗಿದೆ, ಹೌದು ಇದಕ್ಕೆ ಕಾರಣ ಏನೆಂದು ತಿಳಿದಿಲ್ಲವಾದರೂ ಇದು ಕರ್ನಾಟಕ ಜನತೆಯ ಕೆಂಗಣ್ಣಿಗೆ ಗುರಿಯಾಗಿದೆ. ಇಂದು ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡ ಮಾಯವಾಗಿರುವ ಸುದ್ದಿ ವೈರಲ್ ಆಗಿದೆ. ಕನ್ನಡದ ಬದಲು ಈಗ ನಾಮಫಲಕದಲ್ಲಿ ಕೇವಲ ತುಳು ಹಾಗು ಸಂಸ್ಕೃತ ಭಾಷೆಗೆ ಜಾಗ ಸಿಕ್ಕಿದೆ. ಅಲ್ಲ ಉಡುಪಿಯ ಆಡಳಿತ ಭಾಷೆಯೇ ಕನ್ನಡ ಇರುವಾಗ ಕನ್ನಡಕ್ಕೆ ಈ ಸ್ಥಿತಿ ಬಂದಿರುವುದು ಬಹುದೊಡ್ಡ ವಿಪರ್ಯಾಸ.

ಕನ್ನಡವಷ್ಟೇ ಇರಬೇಕಾದ ಜಾಗದಲ್ಲಿ ಕನ್ನಡವೇ ಇಲ್ಲದಂತಾಗಿದೆ, ಈ ಬಗ್ಗೆ ದೇವಸ್ಥಾನದ ಹೇಳಿಕೆಗೆ ಜನರು ಕಾಯುತ್ತಿದ್ದಾರೆ. ಕನ್ನಡ ಮಾಯವಾಗಿದ್ದರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾವಿರಾರು ಜನರಿಂದ ವಿರೋಧ ಕೇಳಿ ಬರುತ್ತಿದೆ. ಅಲ್ಲಿಗೆ ಬರುವ ಭಕ್ತರೂ ಸಹ ಅಸಮಾಧಾನ ಹೊರಹಾಕಿದ್ದಾರೆ. ಈಕುರಿತು ಬೇಗ ಉಡುಪಿ ಮಠದ ಹಿರಿಯರು ಬೇಗ ಇದಕ್ಕೆ ಪ್ರತಿಕ್ರಿಯೆ ನೀಡಿ ಕನ್ನಡ ಫಲಕಗಳನ್ನು ಮತ್ತೆ ಹಾಕಬೇಕು ಹಾಗು ಕ್ಷಮೆ ಕೇಳಬೇಕು ಎಂದು ಹಲವಾರು ಕೇಳುತ್ತಿದ್ದಾರೆ.

%d bloggers like this: