ಕನ್ನಡಿಗರು ಶುರು ಮಾಡಿದ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ, ಕಡಿಮೆ ಬೆಲೆ, ಹೆಚ್ಚು ಮೈಲೇಜ್ ಕೊಡುವ ಅದ್ಬುತ ಸ್ಕೂಟರ್

ಆಟೋಮೊಬೈಲ್ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಿದೆ ಬೆಂಗಳೂರು ಮೂಲಕ ಈ ಎಲೆಕ್ಟ್ರಿಕ್ ಸ್ಕೂಟರ್! ಹೌದು ಇತ್ತೀಚೆಗೆ ಇಂಧನದ ಬೆಲೆ ಗಗನಕ್ಕೇರುತ್ತಿದ್ದು ವಾಹನ ಸವಾರರು ಇಂಧನ ರಹಿತ ಎಲೆಕ್ಟ್ರಿಕ್ ಸ್ಕೂಟರ್ ನತ್ತ ಮುಖ ಮಾಡಿದ್ದಾರೆ. ಇಂತಹ ಸಂಧರ್ಭದಲ್ಲಿ ಬೆಂಗಳೂರು ಮೂಲದ ಬೌನ್ಸ್ ಎಲೆಕ್ಟ್ರಿಕ್ ಸ್ಕೂಟರ್ ತನ್ನ ಸಂಸ್ಥೆಯಿಂದ ಲಾಂಚ್ ಆಗಿರುವ ಐದು ರೀತಿಯ ಬಣ್ಣ ಬಣ್ಣ ಹೊಂದಿರುವ ಬೌನ್ಸ್ ಇನ್ಫಿನಿಟಿ ಈ ಒನ್ ಎಲೆಕ್ಟ್ರಿಕ್ ಸ್ಕೂಟರ್ ಗ್ರಾಹಕರನ್ನ ತನ್ನತ್ತ ಸೆಳೆಯುತ್ತಿದೆ. ವಾಯು ಮಾಲಿನ್ಯ ತಡೆಗಟ್ಟಿ ಪರಿಸರ ಸಂರಕ್ಷಣೆಯ ದೃಷ್ಟಿಯಿಂದಾಗಿ ದೇಶದಲ್ಲಿ ಇಂಧನ ರಹಿತ ಎಲೆಕ್ಟ್ರಿಕ್ ವಾಹನಗಳಿಗೆ ಹೆಚ್ಚು ಒತ್ತು ನೀಡಲಾಗುತ್ತಿದೆ.

ಅದಕ್ಕಾಗಿಯೇ ಕೇಂದ್ರ ಮತ್ತು ರಾಜ್ಯ ಸರ್ಕಾರ ಎಲೆಕ್ಟ್ರಿಕ್ ವಾಹನಗಳಿಗೆ ಸಹಾಯಧನವನ್ನು ಕೂಡ ನೀಡುತ್ತಿದೆ. ಇನ್ನು ಪರಿಚಯವಾಗಿರುವ ಈ ಬೌನ್ಸ್ ಇನ್ಫಿನಿಟಿ ಇಒನ್ ಸ್ಟ್ಯಾಂಡರ್ಡ್ ಲಿಥಿಯಂ ಐಯಾನ್ ಸ್ಕೂಟರ್ ಎಕ್ಸ್ ಚೇಂಜ್ ಮಾಡಬಹುದಾದ ಬ್ಯಾಟರಿ ಹೊಂದಿರುವ 68,999 ರೂಪಾಯಿಗಳಿಗೆ ಮಾರಟದ ಬೆಲೆ ನಿಗದಿ ಮಾಡಲಾಗಿದೆ. ಜೊತೆಗೆ ಬ್ಯಾಟರಿ ಆಯ್ಕೆ ಸೇವೆಯನ್ನು ಹೊಂದಿರುವ ಬೌನ್ಸ್ ಸ್ಕೂಟರ್ನ ಎಕ್ಸ್ ಶೋ ರೂಂ ಬೆಲೆ 45,099 ರೂಪಾಯಿಗಳದ್ದಾಗಿದೆ. ಈ ಹೊಸ ಬೌನ್ಸ್ ಇನ್ಫಿನಿಟಿ ಎಲೆಕ್ಟ್ರಿಕ್ ಸ್ಕೂಟರ್ ಬ್ಯಾಟರಿ ಬಾಡಿಗೆ ಆಧಾರದ ಮೇಲೆ ಪಡೆಯಲು ಕೂಡ ಅವಕಾಶವಿದೆ ಎಂದು ತಿಳಿದು ಬಂದಿದೆ. ಈಗಾಗಲೇ ಕಳೆದ ಡಿಸೆಂಬರ್ 2ರಿಂದ ಈ ಬೌನ್ಸ್ ಇನ್ಫಿನಿಟಿ ಸ್ಕೂಟರ್ ಅಡ್ವಾನ್ಸ್ ಬುಕ್ಕಿಂಗ್ ಆರಂಭವಾಗಿದೆ.

ಇನ್ನು ಈ ತಿಂಗಳನಲ್ಲಿ ಬುಕ್ಕಿಂಗ್ ಮಾಡಿದರೆ ಮುಂದಿನ ವರ್ಷದ ಮಾರ್ಚ್ ತಿಂಗಳನಲ್ಲಿ ಈ ಬೌನ್ಸ್ ಇನ್ಫಿನಿಟಿ ಸ್ಕೂಟರ್ ನಿಮ್ಮ ಕೈ ಸೇರಲಿದೆ, ಜೊತೆಗೆ ಇದರ ಬೆಲೆಯು ಕೂಡ ಅತ್ಯಂತ ಕಡಿಮೆ ದರದಲ್ಲಿ ಗ್ರಾಹಕರಿಗೆ ಸಿಗಲಿದೆ ಎಂದು ಸಂಸ್ಥೆ ತಿಳಿಸಿದೆ. ಬೌನ್ಸ್ ಇನ್ಫಿನಿಟಿ ಇಒನ್ ಎಲೆಕ್ಟಿಕ್ ಸ್ಕೂಟರ್ ಅನ್ನು ನಿಮ್ಮ ಮನೆ ಅಥವಾ ಕಛೇರಿಗಳಲ್ಲಿ ಸುಲಭವಾಗಿ ಚಾರ್ಜಿಂಗ್ ಮಾಡಿಕೊಳ್ಳಬಹುದಾಗಿರುತ್ತದೆ. ಬೌನ್ಸ್ ಇನ್ಫಿನಿಟಿ ಇಒನ್ ಎಲೆಕ್ಟ್ರಿಕ್ ಸ್ಕೂಟರ್ ಗಳು ಸ್ಪೋರ್ಟಿ ರೆಡ್, ಸ್ಪಾರ್ಕಲ್ ಬ್ಲಾಕ್, ಪರ್ಲ್ ವೈಟ್, ಡೆಸಾರ್ಟ್ ಸಿಲ್ವರ್, ಕಾಮೆಡ್ ಗ್ರೇ ಸೇರಿದಂತೆ ಐದು ಬಣ್ಣಗಳಲ್ಲಿ ಲಭ್ಯವಿದೆ. ಇನ್ನು ಈ ಬೌನ್ಸ್ ಇನ್ಫಿನಿಟಿ ಬ್ಯಾಟರಿಯು ಐವತ್ತು ಸಾವಿರ ಕಿಮೀ ದೂರ ಕ್ರಮಿಸಬಹುದಾಗಿದ್ದು, ಮೂರು ವರ್ಷಗಳ ಕಾಲ ವ್ಯಾರಂಟಿ ನೀಡುಲಾಗುತ್ತದೆ ಎಂದು ಕಂಪನಿ ತಿಳಿಸಿದೆ.

%d bloggers like this: