ಯಡಿಯೂರಪ್ಪ ಒಬ್ಬ ಅವಿವೇಕಿ ಅವರೊಬ್ಬ ಅವಿವೇಕಿ ಮುಖ್ಯಮಂತ್ರಿ ಎಂದ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್! ರಾಜ್ಯ ಸರ್ಕಾರ ಹೊರಡಿಸಿದ ಮರಾಠ ಅಭಿವೃದ್ದಿ ಪ್ರಾಧಿಕಾರ ನಿಗಮ ಸ್ಥಾಪನೆಯ ಆದೇಶ ಕನ್ನಡಪರ ಸಂಘಟನೆಗಳ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದೆ. ಇದು ಮರಾಠ ಸಮುದಾಯದ ಓಲೈಕೆಗಾಗಿ ಮಾಡಿದ ಉದ್ದೇಶವೋ, ಸಮಾನತೆಯೋ, ಗೊಂದಲದ ಗೂಡಾಗಿದೆ. ಇದ್ದಕಿದ್ದಂತೆ ಏಕಾಏಕಿಯಾಗಿ ಸರ್ಕಾರ ಈ ನಿರ್ಧಾರ ತೆಗೆದುಕೊಳ್ಳುವ ಬಗ್ಗೆ ಪೂರ್ವ ನಿಯೋಜಿತವಾಗಿತ್ತೇ ಅಥವಾ ಬಸವಕಲ್ಯಾಣ ಮತ್ತು ಮಸ್ಕಿ ಕ್ಷೇತ್ರದಲ್ಲಿ ನಡೆಯುತ್ತಿರುವ ಉಪಚುನಾವಣೆಯ ದೃಷ್ಠಿ ಇಟ್ಟುಕೊಂಡು ಈ ಕ್ಷೇತ್ರದಲ್ಲಿ ಮರಾಠ ಸಮುದಾಯದ ಮತಗಳು ಹೆಚ್ಚು ಇರುವುದರಿಂದ ಈ ಸಮುದಾಯದ ಜನರನ್ನೆಲ್ಲಾ ತನ್ನತ್ತ ಸೆಳೆಯುವ ಉದ್ದೇಶದಿಂದ ಈ ಕಾರ್ಯಕ್ಕೆ ಕೈಹಾಕಿದ್ದಾರಾ? ಎಂಬ ಇತ್ಯಾದಿ ಪ್ರಶ್ನೆಗಳಿಗೆ ಉತ್ತರವಿಲ್ಲ. ಮರಾಠ ಸಮುದಾಯ ಅಭಿವೃದ್ದಿ ಪ್ರಾಧಿಕಾರ ಇದಕ್ಕೆ ಅಗತ್ಯವೇನಿತ್ತು? ಯಾರಾದರೂ ಕೇಳಿದ್ದರಾ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದ್ದು ಈ ವಿಚಾರವಾಗಿ ಪರ ವಿರೋಧ ಅಭಿಪ್ರಾಯಗಳು ಬರುತ್ತಿವೆ.
ಇದೇ ವಿಚಾರವಾಗಿ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ನಗರದ ಮೈಸೂರು ಬ್ಯಾಂಕ್ ಸರ್ಕಲ್ ನಲ್ಲಿ ಪ್ರತಿಭಟನೆ ಮಾಡಿ ಸಿಎಂ ಯಡಿಯೂರಪ್ಪ ವಿರುದ್ದ ಹರಿಹಾಯ್ದಿದ್ದಾರೆ. ಈ ನಿರ್ಧಾರವನ್ನು ತಕ್ಷಣ ವಾಪಸ್ ಪಡೆಯದಿದ್ದಲ್ಲಿ ನೀವು ರಾಜೀನಾಮೆ ಕೊಡಬೇಕು ಇಲ್ಲ ಡಿಸೆಂಬರ್ 5ರಂದು ನಾವು ಕರ್ನಾಟಕದಾದ್ಯಂತ ಎಲ್ಲಾ ಕನ್ನಡಪರ ಸಂಘಟನೆಗಳು ಸೇರಿ ಬಂದ್ ಮಾಡಲಿದ್ದೇವೆ ಎಂದು ಕರೆ ಕೊಟ್ಟಿದ್ದಾರೆ. ಈ ಮರಾಠ ಅಭಿವೃದ್ದಿ ಪ್ರಾಧಿಕಾರ ನಿಗಮ ಸ್ಥಾಪನೆಯ ಬೆನ್ನಲ್ಲೆ ಒತ್ತಾಯದ ಮೇರೆಗೆ ವೀರಶೈವ ಲಿಂಗಾಯತ ಅಭಿವೃದ್ದಿ ನಿಗಮ ಸ್ಥಾಪನೆಗೆ ಮುಖ್ಯಮಂತ್ರಿ ಯಡಿಯೂರಪ್ಪನವರು ಸಹಿ ಹಾಕಿ ಆದೇಶ ಹೊರಡಿಸಿದ್ದಾರೆ. ಇದು ಸಾಮಾಜಿಕ ಜಾಲತಾಣದಲ್ಲಿ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದ್ದು ಜಾತಿ, ಧರ್ಮ ಓಲೈಕೆ ರಾಜಕಾರಣ ತಕ್ಕುದ್ದಲ್ಲ ಮನೆಗೆ ಮಾರಿ ಊರಿಗೆ ಉಪಕಾರಿ ಎಂಬಂತೆ ಈ ನಿಗಮ ಸ್ಥಾಪನೆ ಆದೇಶ ಮಾಡಿದ್ದೀರಿ ಎಂದು ನೆಟ್ಟಿಗರು ಸರ್ಕಾರದ ಆದೇಶದ ವಿರುದ್ದ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.