ಕನ್ನಡ ಬಿಗ್ ಬಾಸ್ 8ನೇ ಆವೃತ್ತಿಗಾಗಿ ಎಲ್ಲರೂ ತಯಾರಾಗಿ

ಕಿರುತೆರೆಯಲ್ಲಿ ಸಾಕಷ್ಟು ರಿಯಾಲಿಟಿ ಶೋಗಳು ಇಲ್ಲಿಯವರೆಗೆ ಪ್ರಸಾರಗೊಂಡಿವೆ, ಆದರೆ ಬಿಗ್ ಬಾಸ್ ಸ್ಪರ್ಧೆಗೆ ಇರುವಷ್ಟು ಕ್ರೇಜ್ ಬೇರಾವುದಕ್ಕೂ ದೊರಕಿಲ್ಲ. ಹೌದು ಅಷ್ಟು ದೊಡ್ಡ ಮಟ್ಟದ ಅಭಿಮಾನಿ ಬಳಗ ವನ್ನು ಹೊಂದಿದೆ ಈ ಬಿಗ್ ಬಾಸ್ ಮನೆ. ಪ್ರತಿವರ್ಷ ಅಕ್ಟೋಬರ್ ಮಧ್ಯಭಾಗದಲ್ಲಿ ಶುರುವಾಗುತ್ತಿದ್ದ ಆಟ ಈಗ ಕರುಣ ಕಾರಣಕ್ಕೆ ಸೈಲೆಂಟಾಗಿತ್ತು. ಆದರೆ ಈಗ ಎಲ್ಲ ತೊಂದರೆಗಳನ್ನು ದಾಟಿ ಸ್ಪರ್ಧೆ ಶುರುವಾಗುವ ಮುನ್ಸೂಚನೆಗಳು ಸಿಗುತ್ತಿವೆ. ಈ ಸ್ಪರ್ಧೆ ಶುರುವಾಗುತ್ತದೆ ಎಂದರೆ ಸಾಕು ಎಲ್ಲರ ಮನಸ್ಸಿನಲ್ಲಿ ಈ ಸಲದ ಸ್ಪರ್ಧಿಗಳು ಯಾರ್ಯಾರು ಎಂಬ ಕುತೂಹಲ ಹುಟ್ಟಿಕೊಳ್ಳುತ್ತದೆ, ಆದರೆ ಅದರ ಮಾಹಿತಿ ಇನ್ನೂ ದೊರಕಿಲ್ಲ. ಮನರಂಜನೆಯ ಭರಪೂರ ಒದಗಿಸುವ ಸ್ಪರ್ಧೆಗೆ ಸುದೀಪ್ ಅಭಿಮಾನಿಗಳು ಮತ್ತು ಬಿಗ್ ಬಾಸ್ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

ಈ ನಡುವೆ ಪರಭಾಷೆಗಳಲ್ಲಿ ಬಿಗ್ ಬಾಸ್ ಪರದೆಯ ಶುರುವಾಗಿದ್ದು ನಮ್ಮಲ್ಲಿ ಯಾವಾಗ ಎಂಬ ಪ್ರಶ್ನೆಗಳು ಮೂಡಿವೆ. ಆದರೆ ಕನ್ನಡ ಬಿಗ್ ಬಾಸ್ನ ಮುಖ್ಯಸ್ಥರಾದ ಪರಮೇಶ್ವರ್ ಅವರು ಕಿಚ್ಚ ಸುದೀಪ್ ಅವರನ್ನು ಇತ್ತೀಚಿಗೆ ಭೇಟಿಯಾಗಿ ಅವರ ಜೊತೆಗಿನ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದ ಎಲ್ಲೆಡೆ ಈಗ ಚರ್ಚೆಗೆ ಗ್ರಾಸವಾಗಿದೆ. ಹಲೋ ಇದನ್ನು ಸ್ಪರ್ಧೆಯಾದ ಆರಂಭವಾಗುವ ಮುನ್ಸೂಚನೆ ಎನ್ನುತ್ತಿದ್ದಾರೆ. ಇಲ್ಲಿಯವರೆಗೆ ಬಂದ ಮಾಹಿತಿ ಪ್ರಕಾರ ಈ ಸೀಸನ್ನಿನ ಎಲ್ಲಾ 15 ಸ್ಪರ್ಧಿಗಳು ಸೆಲೆಬ್ರಿಟಿಗಳಿಗೆ ಇರಲಿದ್ದಾರೆ. ಈಗಾಗಲೇ ಬಿಗ್ ಬಾಸ್ ಮನೆಯನ್ನು ಸಿದ್ಧಗೊಳಿಸುವ ಕಾರ್ಯಗಳು ಕೂಡ ಭರದಿಂದ ಸಾಗಿದೆ. ಎಲ್ಲಾ ಅಂದುಕೊಂಡಂತೆ ಆದರೆ ಜನವರಿ ಮಧ್ಯಭಾಗದಲ್ಲಿ ಸೀಸನ್8 ಶುರುವಾಗುವುದು ಬಹುತೇಕ ಖಚಿತ.

%d bloggers like this: