ಕನ್ನಡ ಬಿಗ್ ಬಾಸ್ ಗೆದ್ದವರಿಗೆ 50 ಲಕ್ಷ ಕೊಟ್ಟರೆ, ತೆಲುಗು ಬಿಗ್ ಬಾಸ್ ಅಲ್ಲಿ ಕೊಡುವ ಮೊತ್ತ ಇಷ್ಟು

ತಮಿಳಿನ ಬಿಗ್ ಬಾಸ್ ಸೀಸನ್ 4ರಲ್ಲಿ ಟ್ರೋಫಿ ಮುಡಿಗೇರಿಸಿಕೊಂಡ ಆರಿ ಅರ್ಜುನ್! ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಆಗಿರುವ ಬಿಗ್ ಬಾಸ್ ತಮಿಳಿನ ಬಿಗ್ ಬಾಸ್ ನಾಲ್ಕನೇ ಆವೃತ್ತಿಯು ನಿನ್ನೆ (ಜನವರಿ17) ಅಂತ್ಯಗೊಂಡಿದದೆ. ಇನ್ನು 106 ದಿನಗಳ ಬಿಗ್ ಬಾಸ್ ಮನೆಯ ಅವಧಿಯಲ್ಲಿ ಆರಿ ಅರ್ಜುನ್ ಯಾವುದೇ ರೀತಿಯ, ಗುಂಪುಗಾರಿಕೆ ಮಾಡದೇ ತನ್ನ ನೇರನುಡಿಯ ವ್ಯಕ್ತಿತ್ವ ಗುಣಗಳಿಂದ ಜನರ ಮೆಚ್ಚುಗೆ ಪಡೆದು ಈ ಬಿಗ್ ಬಾಸ್ ಸೀಸನ್ ನಾಲ್ಕರಲ್ಲಿ ವಿಜೇತರಾಗಿದ್ದಾರೆ. ಬಾಲಾಜಿ ಮುರುಗದಾಸ್ ಅವರಿಗೆ ಗೆಲ್ಲುವ ಅವಕಾಶ ಇತ್ತಾದರು ಫೈನಲ್ ಹಂತ ತಲುಪಿ ಟ್ರೋಫಿ ಗೆಲ್ಲುವಲ್ಲಿ ಸ್ವಲ್ಪ ಅಂತರದಲ್ಲಿ ಎಡವಿದ್ದಾರೆ. ಇದಕ್ಕೆ ಪ್ರಮುಖ ಕಾರಣ ಅವರ ಕೋಪ, ತಾಪ, ನಾಟಕ ವರ್ತನೆಯಿಂದ ರನ್ನರ್ ಅಪ್ ಗೆ ಸ್ಥಾನಕ್ಕೆ ಸೀಮಿತರಾಗಿದ್ದಾರೆ. ಇನ್ನು ಈ ಸೀಸನ್ ನಲ್ಲಿ ವಿಜೇತರಾದ ಆರಿ ಅರ್ಜುನ್ ಅವರಿಗೆ ಅತಿಹೆಚ್ಚು ಸಂಭಾವನೆ ನೀಡಲಾಗಿದೆ ಎನ್ನುವ ಮಾಹಿತಿ ಹೊರಬಿದ್ದಿದ್ದೆ.

ಆರಿ ಅರ್ಜುನ್ ಅವರಿಗೆ ವಾರದ ಸಂಭಾವನೆ ಎರಡರಿಂದ ಮೂರು ಲಕ್ಷ ನೀಡಲಾಗಿದೆ ಮತ್ತು ಬಾಲಾಜಿ ವಾರಕ್ಕೆ ಒಂದೂವರೆ ಲಕ್ಷ ಸಂಭಾವನೆ ಪಡೆದಿದ್ದಾರೆ. ಇನ್ನು ಬಿಗ್ ಬಾಸ್ ನಲ್ಲಿ ಗೆದ್ದ ಸ್ಪರ್ಧಿಗೆ ಐವತ್ತು ಲಕ್ಷ ರೂಪಾಯಿ ನೀಡಲಾಗುತ್ತದೆ. ಆರಿ ಅರ್ಜುನ್ ಅವರ ವಾರದ ಸಂಭಾವನೆ 28ರಿಂದ 30ಲಕ್ಷ ಆಗಿದ್ದು, ಬಹುಮಾನದ ಮೊತ್ತ ಐವತ್ತು ಲಕ್ಷ ಒಟ್ಟು 78 ಲಕ್ಷ ರೂಗಳನ್ನು ಆರಿ ಅರ್ಜುನ್ ಅವರು ಪಡೆಯಲಿದ್ದಾರೆ. ಹಾಗಾಗಿ ಆರಿ ಅರ್ಜುನ್ ತಮಿಳಿನ ಬಿಗ್ ಬಾಸ್ ಇತಿಹಾಸದಲ್ಲಿ ಹೆಚ್ಚು ಸಂಭಾವನೆ ಪಡೆದಿರುವ ಸ್ಪರ್ಧಿಯಾಗಿದ್ದಾರೆ. ಜೊತೆಗೆ ಕಳೆದ ಮೂರು ಸೀಸನ್ ಗಳಲ್ಲಿ ಯಾರೂ ಪಡೆದ ಅತ್ಯಂತ ಅಧಿಕ ಮತಗಳನ್ನು ಪಡೆದು ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ ಎನ್ನಲಾಗಿದೆ, ಆದರೆ ಇಲ್ಲಿ ಪ್ರಮುಖವಾಗಿ ಗಮನಿಸಬೇಕಾದ ವಿಚಾರ ಅಂದರೆ ತೆಲುಗಿನ ಬಿಗ್ ಬಾಸ್ ರಿಯಾಲಿಟಿಶೋ ಸೀಸನ್ 4ರಲ್ಲಿ ವಿಜೇತರಾಗಿದ್ದ ಅಭಿಜಿತ್ ಅವರಿಗೆ ಕೊರೋನ ಪರಿಣಾಮ ಅವರಿಗೆ ಎಲ್ಲಾ ರೀತಿಯ ತೆರಿಗೆಯನ್ನು ಕಡಿತ ಗೊಳಿಸಿ ಕೇವಲ ಇಪ್ಪತ್ತೈದು ಲಕ್ಷ ಮಾತ್ರ ನೀಡಲಾಗಿದೆ.

ಈಗ ಅದೇ ರೀತಿಯಾಗಿ ಕೋವಿಡ್ 19 ಕಾರಣವೊಡ್ಡಿ ತಮಿಳಿನ ಈ ಬಿಗ್ ಬಾಸ್ ಸೀಸನ್ 4ರಲ್ಲಿ ವಿನ್ನರ್ ಆಗಿರುವ ಆರಿ ಅರ್ಜುನ್ ಅವರಿಗೆ ನೀಡಬೇಕಾಗಿರುವ ಬಹುಮಾನ ಮೊತ್ತು ಮತ್ತು ಅವರ ವಾರದ ಸಂಭಾವನೆಯನ್ನು ಪೂರ್ಣವಾಗಿ ಕೊಡುತ್ತಾರೋ ಇಲ್ಲವೋ ಎಂಬ ಪ್ರಶ್ನೆ ಮೂಡಿದೆ. ಇನ್ನೂ ಕನ್ನಡದ ಬಿಗ್ ಬಾಸ್ ಸೀಸನ್ 7 ರಲ್ಲಿ ಕಿರುತೆರೆ ನಟ ಶೈನ್ ಶೆಟ್ಟಿ ಅವರು ವಿಜೇತರಾಗಿದ್ದರು. ಇವರಿಗೆ ಬಹುಮಾನವಾಗಿ 50 ಲಕ್ಷದ ಜೊತೆಯಾಗಿ ಹೆಚ್ಚುವರಿಯಾಗಿ 11 ಲಕ್ಷ ರೂಪಾಯಿ ಸಂಭಾವನೆ ನೀಡಿದ್ದರು. ಜೊತೆಗೆ ಒಂದು ಕಾರನ್ನು ಸಹ ಉಡುಗೊರೆಯಾಗಿ ಪಡೆದಿದ್ದರು. ಕನ್ನಡದ ಬಿಗ್ಬಾಸ್ ಸೀಸನ್8 ಅತಿ ಶೀಘ್ರದಲ್ಲಿ ಬರಲು ಸಿದ್ದತೆ ನಡೆಸುತ್ತಿದೆ ಎನ್ನಲಾಗಿದೆ. ಇನ್ನು ಕನ್ನಡದ ಬಿಗ್ ಬಾಸ್ ಅಲ್ಲಿ ಈ ಸಲ ಹಣದ ಮೊತ್ತವನ್ನು ಕಡಿಮೆ ಮಾಡುತ್ತಾರೋ ಇಲ್ಲ ಪೂರ್ತಿ ಐವತ್ತು ಲಕ್ಷ ಕೊಡುತ್ತಾರೋ ಕಾದು ನೋಡಬೇಕಾಗಿದೆ.

%d bloggers like this: