ಕನ್ನಡ ಚಿತ್ರ ನೋಡಿ ನಿರ್ದೇಶಕರಿಗೆ ಪೋನ್ ಮಾಡಿ ಮೆಚ್ಚುಗೆ ವ್ಯಕ್ತ ಪಡಿಸಿದ ಬಾಲಿವುಡ್ ಸುಪ್ರಸಿದ್ಧ ನಿರ್ದೇಶಕ

ಸ್ಯಾಂಡಲ್ ವುಡ್ ನ ವಿಭಿನ್ನ ನಟ, ನಿರ್ದೇಶಕರಾಗಿ ಶೈನ್ ಆಗುತ್ತಿರುವ ರಾಜ್.ಬಿ.ಶೆಟ್ಟಿ ಅವರ ಗರುಡ ಗಮನ ವೃಷಭ ವಾಹನ ಸಿನಿಮಾಗೆ ಬಾಲಿವುಡ್ ಸುಪ್ರಸಿದ್ದ ನಿರ್ದೇಶಕ ಕ್ಲೀನ್ ಬೋಲ್ಡ್ , ಇತ್ತೀಚೆಗೆ ಕನ್ನಡದಲ್ಲಿ ಬರುತ್ತಿರುವ ಹೊಸ ಹೊಸ ಬಗೆಯ ಸಿನಿಮಾಗಳು ಉತ್ತರ ಭಾರತದ ಸಿನಿಮಾ ಮಂದಿಗಳನ್ನ ಗಮನ ಸೆಳೆಯುತ್ತಿವೆ. ಚಂದನವನದಲ್ಲಿ ಇದೀಗ ಹೊಸ ಪ್ರತಿಭೆಗಳದ್ದೇ ಸದ್ದು ಜೋರಾಗಿದೆ. ಅಂತೆಯೇ ಒಂದು ಮೊಟ್ಟೆಯ ಕಥೆ ಸಿನಿಮಾದ ಮೂಲಕ ಗಮನ ಸೆಳೆದ ನಟ, ನಿರ್ದೇಶಕ ರಾಜ್.‌ಬಿ.ಶೆಟ್ಟಿ ಮತ್ತೆ ಗರುಡ ಗಮನ ವೃಷಭವಾಹನ ಎಂಬ ವಿಶೇಷ ಟೈಟಲ್ ಮೂಲಕವೇ ಕುತೂಹಲ ಮೂಡಿಸಿ ಆ ಕುತೂಹಲಕ್ಕೆ ತಕ್ಕಂತೆ ಈ ಸಿನಿಮಾವನ್ನು ಕೂಡ ಮೆಚ್ಚಿಸುವಲ್ಲಿ ಯಶಸ್ವಿಯಾಗಿದ್ದಾರೆ.

ರಾಜ್.ಬಿ.ಶೆಟ್ಟಿ ಮತ್ತು ರಿಷಭ್ ಶೆಟ್ಟಿ ಮುಖ್ಯಭೂಮಿಕೆಯ ಈ ಚಿತ್ರಕ್ಕೆ ಸಿನಿಮಾ ವಿಮರ್ಶಕರಿಂದ ಮತ್ತು ಚಿತ್ರ ನೋಡಿದ ಪ್ರೇಕ್ಷಕರಿಂದ ಉತ್ತಮ ಮೆಚ್ಚುಗೆ ಪಡೆದುಕೊಂಡಿದ್ದಾರೆ. ಅಷ್ಟೇ ಅಲ್ಲದೆ ಇದೀಗ ಬಾಲಿವುಡ್ ಖ್ಯಾತ ನಿರ್ದೇಶಕರಾದ ಅನುರಾಗ್ ಕಶ್ಯಪ್ ಗಮನವನ್ನು ಕೂಡ ಸೆಳೆದಿದ್ದಾರೆ. ಹೌದು ಹಿಂದಿ ಚಿತ್ರರಂಗದ ಪ್ರಯೋಗಾತ್ಮಕ ಸಿನಿಮಾ ನಿರ್ದೇಶಕ ಅನುರಾಗ್ ಕಶ್ಯಪ್ ಹೊಸ ವಿಭಿನ್ನ ಬಗೆಯ ಸಿನಿಮಾ ಮಾಡುವುದರಲ್ಲಿ ಎತ್ತಿದ ಕೈ ಎನ್ನಬಹುದು. ಅವರ ನಿರ್ದೇಶನದ ಸಿನಿಮಾಗಳಿಗೆ ಫಿಲ್ಮ್ ಫೇರ್ ಪ್ರಶಸ್ತಿಗಳು ಸೇರಿದಂತೆ ಅನೇಕ ಪ್ರತಿಷ್ಟಿತ ಪ್ರಶಸ್ತಿಗಳು ಲಭಿಸಿವೆ.

ಅನುರಾಗ್ ಕಶ್ಯಪ್ ಕೇವಲ ನಿರ್ದೇಶಕ ಮಾತ್ರವಲ್ಲ ಅವರೊಬ್ಬ ಬರಹಗಾರ, ಸಂಕಲನಕಾರ, ನಿರ್ಮಾಪಕರಾಗಿಯೂ ಕೂಡ ಯಶಸ್ವಿಯಾಗಿದ್ದಾರೆ. ಹೊಸ ಪ್ರತಿಭೆಗಳಿಗೆ ಪ್ರೋತ್ಸಾಹಿಸುವ ಅನುರಾಗ್ ಕಶ್ಯಪ್ ಕನ್ನಡದ ವಿಭಿನ್ನ ನಟ ನಿರ್ದೇಶಕ ರಾಜ್.ಬಿ.ಶೆಟ್ಟಿ ಅವರ ಗರುಡ ಗಮನ ವೃಷಭ ವಾಹನ ಸಿನಿಮಾ ನೋಡಿ ಸಂತೋಷ ಪಟ್ಟು ಮೆಚ್ಚುಗೆ ವ್ಯಕ್ತ ಪಡಿಸಿ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಗರುಡಗಮನ ವೃಷಭವಾಹನ ಸಿನಿಮಾದ ಪೋಸ್ಟರ್ ವೊಂದನ್ನ ಶೇರ್ ಮಾಡಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ರಾಜ್.ಬಿ.ಶೆಟ್ಟಿ ಅವರಿಗೆ ಕರೆ ಮಾಡಿ ಮುಂಬೈನಲ್ಲಿ ಭೇಟಿ ಮಾಡುವಂತೆ ಹೇಳಿದ್ದಾರೆ. ಅನುರಾಗ್ ಕಶ್ಯಪ್ ಅವರು ಅಚ್ಚರಿ ಪಡಿಸಿದ್ದು ಈ ಗರುಡಗಮನ ವೃಷಭವಾಹನ ಚಿತ್ರವನ್ನು ಕೇವಲ ಮೂವತ್ತೆರಡು ದಿನಗಳಲ್ಲಿ ಮಾತ್ರ ಚಿತ್ರೀಕರಣ ಮಾಡಿದ್ದಾರೆ ಎಂಬುದನ್ನ ತಿಳಿದಂತೆ.

ಅತ್ಯಂತ ಸಹಜವಾಗಿ ಚಿತ್ರೀಕರಿಸಿರುವ ಈ ಚಿತ್ರಕ್ಕೆ ಇದೀಗ ಎಲ್ಲೆಡೆ ಭಾರಿ ಪ್ರಶಂಸೆ ವ್ಯಕ್ತವಾಗುತ್ತಿದೆ. ಜೊತೆಗೆ ರಾಜ್.ಬಿ ಶೆಟ್ಟಿ ಅವರು ಅನುರಾಗ್ ಕಶ್ಯಪ್ ಅವರ ವಾಲ್ ಶೇರ್ ಮಾಡಿಕೊಂಡು ಕನ್ನಡ ಸಿನಿಮಾವೊಂದು ನಮ್ಮ ಸ್ಪೂರ್ತಿಯಾದ ಚಿತ್ರ ನಿರ್ಮಾತೃನ ಮನ ಗೆದ್ದಿರುವುದು ನಮಗೆ ಸಂತಸಕ್ಕೆ ಕಾರಣರಾದ ನಿಮಗೆ ಅಭಿನಂದನೆಗಳು ಎಂದು ಬರೆದುಕೊಂಡಿದ್ದಾರೆ. ಸಿನಿಮಾ ನೋಡಿದ ಅನುರಾಗ್ ಕಶ್ಯಪ್ ಅವರೇ ಸ್ವತಃ ರಾಜ್ ಬಿ.ಶೆಟ್ಟಿ ಅವರಿಗೆ ಕರೆ ಮಾಡಿ ಗರುಡ ಗಮನ ವೃಷಭ ವಾಹನ ಸಿನಿಮಾ ಸುಬ್ರಮಣ್ಯಪುರಂ, ಅಂಗಮಾಲಿ ಡೈರೀಸ್ ಮತ್ತು ತಮ್ಮದೇ ಗ್ಯಾಂಗ್ಸ್ ಆಫ್ ವಸೇಪುರ್ ಚಿತ್ರಗಳಿಗಿಂತ ವಿಭಿನ್ನವಾದದು ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರಂತೆ.

ಸುಬ್ರಮಣ್ಯಪುರಂ, ಅಂಗಮಾಲಿ ಡೈರೀಸ್ ಮತ್ತು ತಮ್ಮದೇ ಗ್ಯಾಂಗ್ಸ್ ಆಫ್ ವಸೇಪುರ್ ಸಿನಿಮಾಗಳಿಗಿಂತ ಭಿನ್ನವಾದುದು ಎಂದು ಅನುರಾಗ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಗರುಡ ಗಮನ ವೃಷಭ ವಾಹನ ಸಿನಿಮಾವನ್ನು ರಕ್ಷಿತ್ ಶೆಟ್ಟಿ ಅವರ ಪರಮ್ವಾ ಸ್ಟುಡಿಯೋ ಬ್ಯಾನರಡಿ ಕೆ.ಆರ್.ಜಿ ಪ್ರೊಡಕ್ಷನ್ ಮಾಡಿದ್ದು, ರಾಜ್.ಬಿ ಶೆಟ್ಟಿ, ರಿಷಬ್ ಶೆಟ್ಟಿ, ಗೋಪಾಲಕೃಷ್ಣ ದೇಶಪಾಂಡೆ, ವಿನೀತ್ ಕುಮಾರ್, ದೀಪಕ್ ರೈ ಪಾಣಾಜೆ ಮುಂತಾದವರು ಪ್ರಧಾನ ಪಾತ್ರದಲ್ಲಿ ನಟಿಸಿದ್ದಾರೆ. ಮಿದುನ್ ಮುಕುಂದನ್ ರಾಗ ಸಂಯೋಜನೆ ಮತ್ತು ಪ್ರವೀಣ್ ಶ್ರೀಯಾನ್ವರ ಅವರ ಕ್ಯಾಮೆರ ವರ್ಕ್ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ.

%d bloggers like this: