ಕನ್ನಡ ಚಿತ್ರಕ್ಕೆ ತಲೆ ನೋವಾಗಿದೆ ಈ ಹೊಸ ವೈರಸ್

ಸ್ಯಾಂಡಲ್ ವುಡ್ ನಲ್ಲಿ ಕಡಿಮೆ ಬಜೆಟ್ ನಲ್ಲಿ ಸಿನಿಮಾ ಮಾಡಿ ಸಿಂಪಲ್ ಆಗಿಯೇ ನಿರ್ಮಾಪಕರಿಗೆ ಲಾಭ ಮಾಡಿಕೊಡುವ ನಿರ್ದೇಶಕ ಅಂದರೆ ಅದು ಸಿಂಪಲ್ ಸುನಿ. ಆಗಂತಾ ಸಿಂಪಲ್ ಸುನಿ ಮಾಡಿರುವ ಸಿನಿಮಾಗಳೆಲ್ಲಾ ಕಡಿಮೆ ಬಜೆಟ್ ಚಿತ್ರಗಳು ಅಂತಲ್ಲ. ಸಿಂಪಲ್ ಸುನಿ ಅವರ ಸಿನಿಮಾ ಬಜೆಟ್ ಸ್ಟ್ರಾಟಜಿಗಳೇ ಅಷ್ಟು ಸರಳವಾಗಿರುತ್ತವೆ. ಇದೀಗ ಅವರ ನಿರ್ದೇಶನದ ಅವತಾರ್ ಪುರುಷ ಸಿನಿಮಾ ಕೊಂಚ ಬಿಗ್ ಬಜೆಟ್ ಹೊಂದಿರುವ ಸಿನಿಮಾ ಆಗಿದೆ. ಈ ಚಿತ್ರ ಇದೇ ಡಿಸೆಂಬರ್ 10ರಂದು ಚಿತ್ರಮಂದಿರಕ್ಕೆ ಬರಬೇಕಾಗಿತ್ತು. ಸಿನಿ ಪ್ರೇಕ್ಷಕರು ಕೂಡ ಶರಣ್ ಮತ್ತು ಆಶಿಕಾ ರಂಗನಾಥ್ ಕಾಂಬಿನೇಶನ್ ನಲ್ಲಿ ಮೂಡಿ ಬಂದಿರುವ ಈ ಚಿತ್ರ ನೋಡಲು ಕಾತುರದಿಂದ ಕಾಯುತ್ತಿದ್ದರು. ಇದಕ್ಕೆಲ್ಲಾ ಒಮ್ಮೆಲೆ ತಣ್ಣೀರೆರಚಿದ್ದು ಓಮಿಕ್ರಾನ್ ವೈರಸ್.

ಹೌದು ಕೋವಿಡ್ ಮೂರನೇ ಅಲೆಯ ಆತಂಕದ ನಡುವೆ ರೂಪಾಂತರಿ ವೈರಸ್ ಆಗಿ ಓಮಿಕ್ರಾನ್ ವೈರಸ್ ಕಳೆದ ವಾರ ರಾಜ್ಯದಲ್ಲಿ ಕಾಣಿಸಿಕೊಂಡು ಆತಂಕ ಮೂಡಿಸಿತು. ತಜ್ಞರು ಈ ಓಮಿಕ್ರಾನ್ ವೈರಸ್ ಅಪಾಯಕಾರಿಯಲ್ಲ ಎಂದು ತಿಳಿಸಿದರು ಕೂಡ ರಾಜ್ಯ ಸರ್ಕಾರ ಮುನ್ನೆಚ್ಚರಿಕಾ ಕ್ರಮವಾಗಿ ಮಾಲ್ ಮತ್ತು ಸಿನಿಮಾಗಳಿಗೆ ಬರುವ ಎಲ್ಲರು ಕೂಡ ಡಬಲ್ ಡೋಸ್ ಆಗಿರಬೇಕು ಎಂಬ ನಿಯಮ ಜಾರಿಗೆ ಮಾಡಿದೆ. ಇದು ಬಿಡುಗಡೆಗೆ ಸಿದ್ದವಾಗಿದ್ದ ಕನ್ನಡ ಸಿನಿಮಾಗಳಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಣದ ಈ ಅವತಾರ್ ಪುರುಷ ಸಿನಿಮಾ ಇದೇ ಡಿಸೆಂಬರ್ 10ರಂದು ರಾಜ್ಯದ್ಯಂತ ಬಿಡುಗಡೆ ಆಗಬೇಕಿತ್ತು.

ಆದರೆ ಸರ್ಕಾರದ ಡಬಲ್ ಡೋಸ್ ಕಡ್ಡಾಯ ನಿಯಮದಿಂದಾಗಿ ಚಿತ್ರತಂಡ ಅವತಾರ್ ಪುರುಷ ಸಿನಿಮಾವನ್ನು ಮುಂದಿನ ವರ್ಷ 2022 ಜನವರಿ 14ಕ್ಕೆ ರಿಲೀಸ್ ಮಾಡಲು ಯೋಜನೆ ಹಾಕಿಕೊಂಡಿತ್ತು. ಇದೀಗ ಜನವರಿ 14ಕ್ಕೂ ಕೂಡ ಅವತಾರ್ ಪುರುಷ ಚಿತ್ರ ರಿಲೀಸ್ ಆಗೋದ್ ಡೌಟ್ ಎನ್ನಲಾಗುತ್ತಿದೆ. ಏಕೆಂದರೆ ಜನವರಿ ತಿಂಗಳಿನಲ್ಲಿ ಪರಭಾಷೆಯ ಬಿಗ್ ಸ್ಟಾರ್ ಸಿನಿಮಾಗಳಾದ ಆರ್.ಆರ್.ಆರ್ ಹಿಂದಿಯ ರಾಧೇ ಶ್ಯಾಮ್ ಸಿನಿಮಾಗಳು ಬಿಡುಗಡೆಗೊಳ್ಳುತ್ತಿದೆ. ಇದರಿಂದ ರಾಜ್ಯದ ಬಹುತೇಕ ಸಿನಿಮಾ ಮಂದಿರಗಳು ಪರಭಾಷೆ ಚಿತ್ರಗಳಿಗೇನೇ ಪ್ರಾಶಸ್ಥ್ಯ ನೀಡುತ್ತಿವೆಯಂತೆ.

ಹೀಗಾಗಿ ಶರಣ್ ಅಭಿನಯದ ಅವತಾರ್ ಪುರುಷ ಸಿನಿಮಾಗೆ ಚಿತ್ರಮಂದಿರದ ಕೊರತೆ ಎದುರಾಗಲಿದೆ ಎಂದು ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಕನ್ನಡ ಸಿನಿಮಾಗಳಿಗೆ ಕರ್ನಾಟಕದಲ್ಲೇ ಅವಕಾಶ ಸಿಗುತ್ತಿಲ್ಲವಲ್ಲ ಎಂದು ಕನ್ನಡ ಸಿನಿ ಪ್ರೇಕ್ಷಕರ ಎದುರೇ ತಮ್ಮ ಅಸಹಾಯಕತೆಯ ನೋವನ್ನು ತೋಡಿಕೊಂಡಿದ್ದಾರೆ. ಒಟ್ಟಾರೆಯಾಗಿ ಅವತಾರ್ ಪುರುಷ ಸಿವಿಮಾ ಎರಡು ಭಾಗಗಳಾಗಿ ಬರಲು ಸಿದ್ದವಾಗಿದ್ದು, ಈಗಾಗಲೇ ಮೊದಲ ಭಾಗ ಬಿಡುಗಡೆಗೂ ಸಿದ್ದವಾಗಿದೆ. ಆದರೆ ಕಳೆದ ಎರಡು ವರ್ಷಗಳಿಂದ ಅವತಾರ್ ಪುರುಷ ಮೊದಲ ಭಾಗವನ್ನು ರಿಲೀಸ್ ಮಾಡಲು ನಿರ್ಮಾಪಕರು ಒದ್ದಾಡುತ್ತಿದ್ದಾರೆ. ಈ ತಿಂಗಳಲ್ಲಿ ಆದರು ಬಿಡುಗಡೆ ಮಾಡಬೇಕು ಎಂಬ ಆಸೆ ಇಟ್ಟುಕೊಂಡಿದ್ದ ಅವತಾರ್ ಪುರುಷ್ ಚಿತ್ರತಂಡಕ್ಕೆ ನಿರಾಸೆಯಾಗಿದೆ.

%d bloggers like this: