ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡ್ತಿದ್ದಾರೆ ಕರ್ನಾಟಕದ ಶಾಸಕನ ಮಗ

ಕರ್ನಾಟಕ ರಾಜ್ಯ ರಾಜಕೀಯದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರಲ್ಲಿ ಒಬ್ಬರಾದ ಚಾಮರಾಜಪೇಟದ ಶಾಸಕರಾಗಿರುವ ಜಮೀರ್ ಅಹ್ಮದ್ ಖಾನ್ ನಮ್ಮೆಲ್ಲರಿಗೂ ಚಿರಪರಿಚಿತ. ಆದರೆ ಈಗ ನಾವು ಹೇಳುತ್ತಿರುವುದು ಅವರ ಬಗೆಗಿನ ಸುದ್ದಿಯಲ್ಲ. ನಮ್ಮ ಕನ್ನಡ ಚಿತ್ರರಂಗದಲ್ಲಿ ರಾಜಕೀಯ ವ್ಯಕ್ತಿಗಳ ಮಕ್ಕಳು ಸಿನಿಮಾಕ್ಕೆ ಬಂದ ಉದಾಹರಣೆಗಳು ಒಂದೆರಡನ್ನು ಕಾಣಬಹುದು. ಅದೇ ಸಾಲಿಗೆ ಈಗ ಮತ್ತೊಬ್ಬ ವ್ಯಕ್ತಿ ಸೇರಿಕೊಳ್ಳಲಿದ್ದಾರೆ, ಹೌದು ಶಾಸಕ ಜಮೀರ್ ಅಹಮದ್ ಖಾನ್ ಅವರ ಪುತ್ರ ಜೈದ್ ಖಾನ್ ಸ್ಯಾಂಡಲ್ ವುಡ್ಗೆ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ.

ಹೌದು ಜಮೀರ್ ಖಾನ್ ಅವರ ಪುತ್ರ ಜೈದ್ ಮತ್ತು ನಟಿ ಸೋನಲ್ ಮೊಂಟೀರೋ ಜೊತೆಯಾಗಿ ಬನಾರಸ್ ಎಂಬ ಚಿತ್ರದಲ್ಲಿ ಅಭಿನಯಿಸುತ್ತಿದ್ದು ಈಗಾಗಲೇ ಚಿತ್ರೀಕರಣ ಕೂಡ ಪೂರ್ಣಗೊಂಡಿದೆ. ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ, ನಿನ್ನೆ ಬಸವನಗುಡಿಯ ದೊಡ್ಡ ಗಣಪತಿ ದೇವಸ್ಥಾನದಲ್ಲಿ ಚಿತ್ರೀಕರಣ ಪೂರ್ಣಗೊಳಿಸಿದ ಸಂದರ್ಭಕ್ಕಾಗಿ ಸಾಂಕೇತಿಕವಾಗಿ ಚಿತ್ರತಂಡ ಕುಂಬಳ ಕಾಯಿಯನ್ನು ಒಡೆದು ಪೂಜೆ ಸಲ್ಲಿಸಲಾಯಿತು. ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕರುಗಳಲ್ಲಿ ಒಬ್ಬರಾದ ಜಯತೀರ್ಥ ಅವರು ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.

ಚಿತ್ರದ ಹೆಸರನ್ನು ನೋಡಿ ಈ ಚಿತ್ರಕ್ಕೆ ಮತ್ತು ವಾರಣಾಸಿಗೆ ಸಂಬಂಧವಿದೆ ಎಂದು ನಮಗೆ ಅನಿಸುವುದು ಸಹಜ. ಹೌದು ವಿಭಿನ್ನ ರೀತಿಯ ಪ್ರೇಮಕಥೆಯಾಗಿರುವ ಬನಾರಸ್ ಚಿತ್ರದ ಬಹುತೇಕ ಚಿತ್ರೀಕರಣ ವಾರಣಾಸಿಯಲ್ಲಿ ನಡೆದಿದೆ. ಅದರ ಜೊತೆಗೆ ಬೆಂಗಳೂರು ಮೈಸೂರು ಮತ್ತು ಬೆಂಗಳೂರಿನ ಹೊರವಲಯಗಳಲ್ಲಿ ಚಿತ್ರೀಕರಣವನ್ನು ನಡೆಸಲಾಗಿದೆ ಎಂದು ಚಿತ್ರದ ನಿರ್ದೇಶಕ ಜಯತೀರ್ಥ ಅವರು ಹೇಳಿದರು. ಚಿತ್ರದಲ್ಲಿ ದೇವರಾಜ್ ಅಚ್ಯುತಕುಮಾರ್, ಸ್ವಪ್ನ ರಾಜ್ ಮುಂತಾದ ಕನ್ನಡದ ಖ್ಯಾತ ನಟ ನಟಿಯರು ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದಾರೆ.

ಈ ಚಿತ್ರಕ್ಕೆ ಅಜನೀಶ್ ಲೋಕನಾಥ್ ಮ್ಯೂಸಿಕ್ ಡೈರೆಕ್ಟರ್ ಆಗಿ ಕೆಲಸ ಮಾಡಿದ್ದು ನ್ಯಾಷನಲ್ ಖಾನ್ಸ್ ಪ್ರೊಡಕ್ಷನ್ ನಲ್ಲಿ ಈ ಚಿತ್ರ ನಿರ್ಮಾಣವಾಗಿದೆ. ತಿಲಕ್ ರಾಜ್ ಬಲ್ಲಾಳ್ ಅವರು ಬನಾರಸ್ ಚಿತ್ರಕ್ಕೆ ಬಂಡವಾಳ ಹೂಡಿದ್ದು ಜೈದ್ ಖಾನ್ ಅವರ ಚೊಚ್ಚಲ ಚಿತ್ರ ಅದ್ದೂರಿಯಾಗಿ ಮೂಡಿಬರುವ ಲಕ್ಷಣಗಳು ಎದ್ದು ಕಾಣುತ್ತಿವೆ. ತಂದೆಯ ನಂತರ ರಾಜಕೀಯಕ್ಕೆ ಬರುವ ಜನರೇ ಬಹಳ ಆದರೆ ಜಮೀರ್ ಖಾನ್ ಅವರ ಪುತ್ರ ಜೈದ್ ಅವರು ಚಿತ್ರೋದ್ಯಮವನ್ನು ಆಯ್ದುಕೊಂಡು ವಿಭಿನ್ನ ಪ್ರಯತ್ನಕ್ಕೆ ಕೈ ಹಾಕಿ ಯಶಸ್ಸನ್ನು ಕಾಣಲು ಸಿದ್ದರಾಗಿದ್ದಾರೆ.

%d bloggers like this: