ಅಭಿನಯ ಚಕ್ರವರ್ತಿ, ನಟ ಕಿಚ್ಚ ಸುದೀಪ್ ಅವರ ಬಹುನಿರೀಕ್ಷಿತ ಸಿನಿಮಾ ವಿಕ್ರಾಂತ ರೋಣ ಚಿತ್ರವು ಯಾವಾಗ ಬಿಡುಗಡೆಯಗುತ್ತದೆ ಎಂದು ಕಿಚ್ಚನ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ನಮ್ಮ ಕನ್ನಡ ಇಂಡಸ್ಟ್ರಿಯ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ ಹಾಗೂ ಇಂಡಿಯನ್ ಸಿನಿಮಾ ಇಂಡಸ್ಟ್ರಿಯ ಮೋಸ್ಟ್ ಎಕ್ಸ್ಪೆಕ್ಟೆಡ್ ಚಿತ್ರಗಳಲ್ಲಿ ವಿಕ್ರಾಂತ್ ರೋಣ ಚಿತ್ರವೂ ಒಂದು. ನಟ ಸುದೀಪ್ ಅವರು ಕನ್ನಡದ ಚಿತ್ರರಂಗಕ್ಕೆ ಬಂದು 25 ವರ್ಷ ಪೂರೈಸಿದ ಬೆನ್ನಲ್ಲೇ ಜಗತ್ತಿನ ಅತೀ ಎತ್ತರದ ಕಟ್ಟಡ ಬುರ್ಜ್ ಖಲಿಫಾ ಮೇಲೆ ವಿಕ್ರಾಂತ್ ರೋಣ ಚಿತ್ರದ ಪೋಸ್ಟರ್ ನ್ನು ಬಿಡುಗಡೆ ಮಾಡಲಾಗಿತ್ತು. ಇಂತಹ ಪ್ರಯತ್ನ ನಮ್ಮ ಸಿನಿ ಇಂಡಸ್ಟ್ರಿ ಯಲ್ಲಿ ಮೊದಲ ಬಾರಿ.

ಇಷ್ಟೆಲ್ಲ ಕುತೂಹಲವನ್ನು ಹುಟ್ಟಿಸಿದ ವಿಕ್ರಾಂತ್ ರೋಣ ಚಿತ್ರದ ಬಿಡುಗಡೆ ಯಾವಾಗ ಎಂದು ಕಿಚ್ಚನ ಅಭಿಮಾನಿಗಳು ಸದಾ ಪ್ರಶ್ನಿಸುತ್ತಿದ್ದರು. ಪ್ರತಿದಿನ ಸೋಶಿಯಲ್ ಮೀಡಿಯಾಗಳಲ್ಲಿ ಕಿಚ್ಚನ ಸಿನಿಮಾದ ಅಪ್ಡೇಟ್ ಗಳು ಬಂತಾ ಎಂದು ಹುಡುಕಾಡುತ್ತಿದ್ದರು. ಇದೀಗ ಚಿತ್ರತಂಡದಿಂದ ಮತ್ತೊಂದು ಸುದ್ದಿ ಹೊರಬಿದ್ದಿದೆ. ಹೌದು ಇಂದು ಅನೂಪ್ ಭಂಡಾರಿ ಅವರ ಜನ್ಮ ದಿನದ ಪ್ರಯುಕ್ತ ಒಂದು ವಿಶೇಷ ಮಾಹಿತಿಯೊಂದನ್ನು ಅವರು ಹಂಚಿಕೊಂಡಿದ್ದಾರೆ. ವಿಕ್ರಾಂತ್ ರೋಣ ಚಿತ್ರವು ಭಾರತದ ಪಂಚ ಭಾಷೆಗಳಲ್ಲಿ ಮಾತ್ರವಲ್ಲದೆ, ಇಂಗ್ಲೀಷಿನಲ್ಲಿ ತೆರೆಕಾಣುತ್ತಿದೆ. ಹೌದು ಇನ್ನೊಂದು ವಿಶೇಷವೆಂದರೆ ಇಂಗ್ಲೀಷಿನಲ್ಲಿ ತಮ್ಮ ಪಾತ್ರಕ್ಕೆ ಸುದೀಪ್ ಅವರೇ ಧ್ವನಿ ನೀಡುತ್ತಿದ್ದಾರೆ.



ಈ ಮೂಲಕ ಕನ್ನಡದ ಸ್ಟಾರ್ ನಟರೊಬ್ಬರು ತಮ್ಮ ಇಂಗ್ಲಿಷ್ ಚಿತ್ರಕ್ಕೆ ತಾವೇ ದ್ವನಿ ನೀಡುತ್ತಿರುವುದು ಇದೇ ಮೊದಲು. ಕೇವಲ ಕನ್ನಡದಲ್ಲಿ ಮಾತ್ರವಲ್ಲ ಭಾರತದಲ್ಲಿ ಈ ರೀತಿ ನಾಯಕರು ತಾವೇ ಇಂಗ್ಲಿಷ್ ಡಬ್ಬಿಂಗ್ ಮಾಡಿದವರು ಬೆರಳೆಣಿಕೆಯಷ್ಟು ಮಾತ್ರ. ಈ ಬಗ್ಗೆ ಅನುಪ್ ಅವರು ಟ್ವೀಟ್ ಮಾಡಿ ಸಂಭ್ರಮ ಹಂಚಿಕೊಂಡಿದ್ದಾರೆ. ಅನೂಪ್ ಭಂಡಾರಿ ಅವರ ನಿರ್ದೇಶನದಲ್ಲಿ ತಯಾರಾಗಿರುವ ವಿಕ್ರಾಂತ್ ರೋಣ ಚಿತ್ರವು, ಈ ಹಿಂದೆ ನಿರ್ಧರಿಸಿದಂತೆ ಇದೇ ತಿಂಗಳು ಫೆಬ್ರುವರಿಯಲ್ಲಿ ತೆರೆಕಾಣಬೇಕಿತ್ತು. ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಇಷ್ಟೊತ್ತಿಗಾಗಲೇ ತೆರೆಯಮೇಲೆ ವಿಕ್ರಾಂತ್ ರೋಣ ಅಬ್ಬರಿಸಬೇಕಿತ್ತು. ಆದರೆ ಕೋವಿಡ್ ಹಾಗೂ ಇನ್ನಿತರ ಕೆಲಸದಿಂದ ಚಿತ್ರದ ಬಿಡುಗಡೆ ಪದೇಪದೇ ಮುಂದೂಡುತ್ತಿತ್ತು. ಆದರೆ ಈ ಸಲ ಹಾಗಾಗುವುದಿಲ್ಲ.



ಈ ಬಾರಿ ಪಕ್ಕಾ ಬಂದುಬಿಡುತ್ತೇವೆ ಎಂದು ಎಲ್ಲಾ ರೀತಿಯ ಪ್ರಿಪ್ರೇಶನ್ ಗಳನ್ನು ಚಿತ್ರತಂಡ ಮಾಡಿಕೊಳ್ಳುತ್ತಿದೆ. ವಿಕ್ರಾಂತ್ ರೋಣ ಚಿತ್ರದ ಕೊನೆಯ ಹಂತದ ಕೆಲಸಗಳು ನಡೆಯುತ್ತಿದ್ದು, ಸದ್ಯದ ಮಾಹಿತಿಯ ಪ್ರಕಾರ ಆಗಸ್ಟ್ ತಿಂಗಳಲ್ಲಿ ವಿಕ್ರಾಂತ್ ರೋಣ ತೆರೆಗೆ ಬರುವ ಸಂಭವವಿದೆ. ನಿರ್ಮಾಪಕ ಜಾಕ್ ಮಂಜು ಕೂಡ ರಿಲೀಸ್ ಗಾಗಿ ಕಾಯುತ್ತಿದ್ದು, ಈಗಾಗಲೇ ವಿದೇಶಿ ಕಂಪನಿಗಳಿಂದ ಸುದೀಪ್ ಅವರ ಚಿತ್ರಕ್ಕೆ ಭಾರಿ ಬೇಡಿಕೆ ಬರುತ್ತಿದೆ. ಹಬ್ಬಗಳನ್ನು ಟಾರ್ಗೆಟ್ ಮಾಡಿರುವ ನಿರ್ಮಾಪಕರು ಭರ್ಜರಿ ತಯಾರಿಯನ್ನು ನಡೆಸಿದ್ದಾರೆ ಎನ್ನಲಾಗಿದೆ. ಈಗಾಗಲೇ ವಿದೇಶಿ ಕಂಪನಿಗಳಿಂದ ಭಾರಿ ಬೇಡಿಕೆ ಬರುತ್ತಿರುವ ಈ ಚಿತ್ರ, ದುಬಾರಿ ಬೆಲೆಗೆ ಫಾರೀನ್ ಡಿಸ್ಟ್ರಿಬ್ಯೂಟ್ ರೈಟ್ ಸೇಲ್ ಆಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.



ಫಸ್ಟ್ ಟೈಮ್ ಫ್ಯಾಂಟಸಿ ಶೈಲಿಯಲ್ಲಿ ಕಿಚ್ಚ ಸುದೀಪ್ ಅವರು ಕಾಣಿಸಿಕೊಳ್ಳುತ್ತಿದ್ದು, ಚಿತ್ರದ ಅಪ್ಡೇಟ್ ಗಳನ್ನು ಈ ರೀತಿ ಟ್ವೀಟ್ ಮಾಡಿದ್ದಾರೆ. ವಿಕ್ರಾಂತ್ ರೋಣ ಫ್ಯಾಂಟಸಿಯಲ್ಲಿ ಮೂಡಿಬರಲಿದ್ದು, 3 ಡಿ ಯಲ್ಲಿ ನೋಡಬಹುದು. 3ಡಿ ಯಲ್ಲಿ ವಿಕ್ರಾಂತ್ ರೋಣ ನೋಡೋಕೆ ತುಂಬಾ ಚೆನ್ನಾಗಿದೆ. ರಿಲೀಸ್ ದಿನಾಂಕವನ್ನು ಕೆಲವೇ ಕೆಲವು ದಿನದಲ್ಲಿ ಅನೌನ್ಸ್ ಮಾಡುತ್ತೇವೆ. ಸ್ವಲ್ಪ ಸಮಾಧಾನದಿಂದ ಕಾಯಿರಿ ಎಂದು ಅಭಿಮಾನಿಗಳನ್ನು ಕಿಚ್ಚ ಸುದೀಪ್ ಟ್ವೀಟ್ ಮಾಡುವುದರ ಮೂಲಕ ಈ ಹಿಂದೆ ಸಮಾಧಾನಿಸಿದ್ದರು. ಇದಷ್ಟೇ ಅಲ್ಲದೆ ತಮ್ಮ ಮುಂದಿನ ಚಿತ್ರದ ಬಗ್ಗೆ ಅನೌನ್ಸ್ ಮಾಡುವುದಾಗಿ ಹೇಳಿ ಅಭಿಮಾನಿಗಳಿಗೆ ಇನ್ನೂ ಥ್ರಿಲ್ ಹೆಚ್ಚಿಸಿದ್ದರು.



ಹೌದು ಸುದೀಪ್ ಅವರು ತಮ್ಮ ಮುಂದಿನ ಚಿತ್ರವನ್ನು ನಿರ್ದೇಶಕ ಅನೂಪ್ ಭಂಡಾರಿ ಅವರ ಜೊತೆಯಲ್ಲಿಯೇ ಮಾಡುವುದಾಗಿ ಈ ಹಿಂದೆ ಹೇಳಿಕೊಂಡಿದ್ದರು. ಈ ಪ್ರಾಜೆಕ್ಟ್ ಬಗ್ಗೆ ಹೆಚ್ಚಿನ ಡೀಟೇಲ್ಸ್ ಅತಿಶೀಘ್ರದಲ್ಲಿ ಸಿಗಲಿದೆ. ಹೀಗಾಗಿ ಕಿಚ್ಚ ಸುದೀಪ್ ಅವರ ಅಭಿಮಾನಿಗಳು ಇನ್ನಷ್ಟು ದಿನ ಹೊಸ ಚಿತ್ರದ ಅಪ್ಡೇಟ್ ಗಳಿಗಾಗಿ ಕಾಯಬೇಕು. ಇನ್ನು ಈಗಾಗಲೇ ಇಂಗ್ಲಿಷ್ ಡಬ್ಬಿಂಗ್ ಅನ್ನು ಸುದೀಪ್ ಅವರು ಪೂರ್ಣಗೊಳಿಸಿದ್ದಾರೆ ಎಂದು ಹೇಳಿರುವ ನಿರ್ದೇಶಕರು, ಸುದೀಪ್ ಕಾಣಿಸಿಕೊಂಡ ದೃಶ್ಯದ ಸಣ್ಣ ಟೀಸರ್ ಒಂದನ್ನು ರಿಲೀಸ್ ಮಾಡಿದ್ದಾರೆ. ಇದನ್ನು ನೋಡಿದ ಅವರ ಅಭಿಮಾನಿಗಳು ಸಕ್ಕತ್ ಥ್ರಿಲ್ ಆಗಿದ್ದಾರೆ.