ಕನ್ನಡ ಚಿತ್ರರಂಗದಲ್ಲಿ ಇತಿಹಾಸ ಸೃಷ್ಟಿಸಿದ ಜೇಮ್ಸ್ ಚಿತ್ರ, ಮೊದಲ ದಿನ ಗಳಿಸಿದ್ದೆಷ್ಟು ಗೊತ್ತೇ

ನಮ್ಮ ಸ್ಯಾಂಡಲ್ ವುಡ್ ನ ಬಹು ನಿರೀಕ್ಷಿತ ಸಿನಿಮಾ ಮತ್ತು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಕೊನೆಯ ಸಿನಿಮಾ ನಿನ್ನೆ ಮಾರ್ಚ್ 17ರಂದು ಪುನೀತ್ ರಾಜಕುಮಾರ್ ಅವರ ಹುಟ್ಟು ಹಬ್ಬದ ಪ್ರಯುಕ್ತ ಭಾರತದಾದ್ಯಂತ ರಿಲೀಸ್ ಆಗಿದೆ. ಕರ್ನಾಟಕದಾದ್ಯಂತ ಅಪ್ಪು ಅಭಿಮಾನಿಗಳು ಜೇಮ್ಸ್ ಚಿತ್ರವನ್ನು ಬಿಗಿದಪ್ಪಿಕೊಂಡಿದ್ದಾರೆ. ಅಪ್ಪು ಅವರ ಚಿತ್ರ ಎನ್ನುವುದಕ್ಕಿಂತ ಅಪ್ಪು ಅಭಿನಯಿಸಿರುವ ಕೊನೆಯ ಸಿನಿಮಾ ಎನ್ನುವ ಕಾರಣಕ್ಕಾಗಿ ಬಹಳ ಭಾರವಾದ ಮನಸ್ಸಿನಿಂದ ಎಲ್ಲಾ ಅಭಿಮಾನಿಗಳು ಈ ಚಿತ್ರವನ್ನು ಕಣ್ತುಂಬಿಕೊಂಡಿದ್ದಾರೆ. ವಿಶೇಷವೆಂದರೆ ಕೆಜಿಎಫ್ ಸಿನಿಮಾ ನಮ್ಮ ಭಾರತದ ಸಿನಿರಂಗದಲ್ಲಿ ಅತಿ ಹೆಚ್ಚು ದಾಖಲೆಗಳನ್ನು ಬರೆದಿತ್ತು. ಆದರೆ ಇದೀಗ ನಮ್ಮ ಸ್ಯಾಂಡಲ್ವುಡ್ ನ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ಜೇಮ್ಸ್ ಚಿತ್ರ ಕೆಜಿಎಫ್ ದಾಖಲೆಗಳನ್ನು ಹಿಂದೆ ಹಾಕಿದೆ.

ಮಾರ್ಚ್ 17 ರಂದು ಬೆಳಿಗ್ಗೆ 6ಗಂಟೆಗೆ ಫಸ್ಟ್ ಶೋ ಶುರುವಾಗಿದ್ದು, ಇನ್ನು ಒಂದು ವಾರದ ಟಿಕೆಟ್ ಗಳು ಈಗಾಗಲೇ ಬುಕ್ ಆಗಿವೆ ಎನ್ನಲಾಗುತ್ತಿದೆ. ತಮ್ಮ ನೆಚ್ಚಿನ ನಟನ ಸಿನಿಮಾವನ್ನು ಕಣ್ತುಂಬಿಕೊಳ್ಳಲು ಜನಸಾಗರವೇ ಹರಿದು ಬರುತ್ತಿದೆ. ನಿನ್ನೆ ಒಂದೇ ದಿನಕ್ಕೆ ಬೆಂಗಳೂರಿನಲ್ಲಿ ಜೇಮ್ಸ್ ಚಿತ್ರವು ಬರೋಬ್ಬರಿ 8ಕೋಟಿಗೂ ಅಧಿಕ ಮೊತ್ತವನ್ನು ಗಳಿಸಿದೆ. ಮತ್ತು ಜೇಮ್ಸ್ ಸಿನಿಮಾ ಕರ್ನಾಟಕದಾದ್ಯಂತ 400 ಸಿನಿಮಾ ಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಬೆಂಗಳೂರಿನ ಥಿಯೇಟರ್, ಮಲ್ಟಿಪ್ಲೆಕ್ಸ್ ಸೇರಿದಂತೆ ಹಲವಾರು ಕಡೆ ಈ ಚಿತ್ರ ರಿಲೀಸ್ ಆಗಿತ್ತು. ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲದೆ, ಜೇಮ್ಸ್ ಸಿನಿಮಾ ಚೆನ್ನೈ, ತೆಲಂಗಾಣ, ಹೈದರಾಬಾದ್ ಗಳಲ್ಲೂ ಕೂಡ ರಿಲೀಸ್ ಆಗಿದ್ದು.

ಅಲ್ಲಿಯೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇನ್ನೂ ಭಾರತ ಬಿಟ್ಟು 15 ಬೇರೆ ದೇಶಗಳಲ್ಲೂ ರಿಲೀಸ್ ಆದ ಜೇಮ್ಸ್ ಚಿತ್ರ ಹೊರದೇಶಗಳಲ್ಲೂ ಸುದ್ದಿ ಮಾಡುತ್ತಿದೆ. ಆಸ್ಟ್ರೇಲಿಯಾದಲ್ಲಿ 150 ಸ್ಕ್ರೀನ್ ಗಳಲ್ಲಿ ಚಿತ್ರ ಪ್ರದರ್ಶನಗೊಂಡಿದ್ದು, ಅಮೆರಿಕಾದಲ್ಲಿ ನೂರಕ್ಕೂ ಹೆಚ್ಚು ಸ್ಕ್ರೀನ್ ಗಳಲ್ಲಿ ತೆರೆಕಂಡಿದೆ. ಮೊದಲ ದಿನದ ಬಾಕ್ಸ್ ಆಫೀಸ್ ಗಳಿಕೆ ವಿಚಾರದಲ್ಲಿ ಜೇಮ್ಸ್ ಚಿತ್ರವು ಕೆಜಿಎಫ್ ಚಿತ್ರವನ್ನು ಮೀರಿಸಿದೆ. ಕೆಜಿಎಫ್ ಸಿನಿಮಾ ರಿಲೀಸ್ ಆದ ಮೊದಲ ದಿನ 18.1 ಕೋಟಿ ರೂಪಾಯಿ ಗಳಿಸಿತ್ತು. ಜೇಮ್ಸ್ ಚಿತ್ರ ಮೊದಲ ದಿನವೇ 28 ಕೋಟಿ ರೂಪಾಯಿಯನ್ನು ಗಳಿಸಿ ಕೆಜಿಎಫ್ ದಾಖಲೆಯನ್ನು ಮುರಿದಿದೆ.

%d bloggers like this: