ಕನ್ನಡ ಚಿತ್ರರಂಗಕ್ಕೆ ಎಂಟ್ರಿ‌ ಕೊಡಲು ಸಜ್ಜಾಗಿದ್ದಾರೆ ಕರ್ನಾಟಕದ ದೊಡ್ಡ ರಾಜಕಾರಣಿಯ ಮಗ

ಚಿತ್ರರಂಗದಲ್ಲಿ ಸ್ಟಾರ್ ನಟ ಅಥವಾ ನಟಿಯರು ತಮ್ಮ ಮಕ್ಕಳನ್ನು ಸಿನಿ ಇಂಡಸ್ಟ್ರಿಗೆ ಪರಿಚಯಿಸುವುದು ಹೊಸದೇನಲ್ಲ. ಸ್ಟಾರ್ ನಟರ ಮಕ್ಕಳಿಗೆ ಸಿನಿ ಜಗತ್ತಿನ ಪ್ರವೇಶ ಕೂಡ ಕಠಿಣವಲ್ಲ. ಸ್ಟಾರ್ ನಟ ನಟಿಯರ ಮಕ್ಕಳು ಅವರ ತಂದೆ ತಾಯಿ ಮಾಡಿರುವ ಕ್ರೇಜ್ ನಿಂದಲೇ ತಮ್ಮ ಸಿನಿ ಪಯಣ ಶುರುಮಾಡಿರುತ್ತಾರೆ. ಆದರೆ ಸಿನಿ ಜಗತ್ತಿನಿಂದ ದೂರ ಇರುವ ಅಥವಾ ಸಿನಿ ಫ್ಯಾಮಿಲಿ ಅಲ್ಲದಿರುವ ಕುಟುಂಬದಿಂದ ಬಂದು ಸಿನಿ ಜಗತ್ತಿನ ಪ್ರಯಾಣ ಆರಂಭಿಸಿ ಅಲ್ಲಿಯೇ ನೆಲೆಯೂರುವುದು ಕಷ್ಟವೇ ಸರಿ. ಇಂತದ್ದೇ ಪಯಣವನ್ನು ಆರಂಭಿಸಲು ನಮ್ಮ ಕರ್ನಾಟಕದ ಪ್ರಸಿದ್ಧ ರಾಜಕಾರಣಿಯ ಮಗರೊಬ್ಬರು ರೆಡಿ ಆಗಿದ್ದಾರೆ. ಹೌದು ಜನಾರ್ಧನ್ ರೆಡ್ಡಿ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಬಳ್ಳಾರಿಯ ದೊಡ್ಡ ಬಿಸಿನೆಸ್ ಮ್ಯಾನ್ ಹಾಗೂ ರಾಜಕಾರಣಿ ಆಗಿರುವ ಜನಾರ್ದನ ರೆಡ್ಡಿ ಅವರು ತಮ್ಮ ಮಗನನ್ನು ಸಿನಿಮಾರಂಗಕ್ಕೆ ಪರಿಚಯಿಸಲು ಸಿದ್ಧರಾಗಿದ್ದಾರೆ.

ಜನಾರ್ಧನ್ ರೆಡ್ಡಿ ಅವರ ಪುತ್ರ ಕಿರೀಟಿ ರೆಡ್ಡಿ, ಒಂದೇ ಬಾರಿಗೆ ಸ್ಯಾಂಡಲ್ವುಡ್ ಹಾಗೂ ಟಾಲಿವುಡ್ ಗೆ ಎಂಟ್ರಿ ಕೊಡಲು ತಯಾರಿ ನಡೆಸುತ್ತಿದ್ದಾರೆ. ಈ ಬಗ್ಗೆ ಸ್ವತಹ ಜನಾರ್ಧನ್ ರೆಡ್ಡಿ ಅವರು ಅಧಿಕೃತವಾಗಿ ಮಾಹಿತಿ ನೀಡಿದ್ದಾರೆ. ಕನ್ನಡ ಮತ್ತು ತೆಲುಗು ಎರಡೂ ಭಾಷೆಯಲ್ಲಿ ರಿಲೀಸ್ ಆಗಲಿರುವ ಈ ಚಿತ್ರಕ್ಕೆ ಇನ್ನೂ ಹೆಸರಿಟ್ಟಿಲ್ಲ. ಈ ಚಿತ್ರದ ಶೂಟಿಂಗ್ ಇದೇ ತಿಂಗಳ 20ನೇ ತಾರೀಕಿನಂದು ಶುರುವಾಗಬೇಕಿತ್ತು. ಆದರೆ ಕೊರೋನಾ ಮೂರನೇ ಅಲೆಯ ಕಾರಣದಿಂದ ವಾರಾಂತ್ಯದ ಕರ್ಫ್ಯೂ ಜಾರಿಯಲ್ಲಿರುವ ಕಾರಣ, ಶೂಟಿಂಗ್ ಡೇಟ್ ಮುಂದಕ್ಕೆ ಹೋಗಿವೆ.

ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಜನಾರ್ಧನ್ ರೆಡ್ಡಿ ಅವರ ಪುತ್ರ ಕಿರೀಟಿ ರೆಡ್ಡಿ ಅವರು ಸಿನಿಮಾ ಶೂಟಿಂಗ್ ನಲ್ಲಿ ಪಾಲ್ಗೊಳ್ಳಬೇಕಿತ್ತು. ಕೊರೋನಾ ಕಾರಣದಿಂದ ಸದ್ಯಕ್ಕೆ ಶೂಟಿಂಗ್ ಮುಂದೂಡಲಾಗಿದೆ ಎಂದು ಜನಾರ್ದನ್ ರೆಡ್ಡಿ ಅವರು ಮಾಹಿತಿ ನೀಡಿದ್ದಾರೆ. ಈ ಸಿನೆಮಾದ ಇನ್ನೊಂದು ವಿಶೇಷತೆ ಏನೆಂದರೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಹೋಂ ಬ್ಯಾನರ್ ಆಗಿರುವ ಪಿ ಆರ್ ಕೆ ಪ್ರೊಡಕ್ಷನ್ ನಲ್ಲಿ ಕೆಲಸ ಮಾಡಿರುವ ನಿರ್ದೇಶಕ ರಾಧಾಕೃಷ್ಣ ಅವರು ಸಿನಿಮಾಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಕಿರೀಟಿ ರೆಡ್ಡಿ ಅವರ ಚೊಚ್ಚಲ ಸಿನಿಮಾವನ್ನು ಟಾಲಿವುಡ್ ಖ್ಯಾತ ಸಿನಿಮಾ ನಿರ್ಮಾಣ ಸಂಸ್ಥೆ ವರಾಹಿ ಮೂವೀಸ್ ನಿರ್ಮಾಣ ಮಾಡುತ್ತಿದೆ. ವರಾಹಿ ಸಂಸ್ಥೆಯ ಮುಖ್ಯಸ್ಥರು ಆಗಿರುವ ಸಾಯಿ ಅವರು ಜನಾರ್ಧನ್ ರೆಡ್ಡಿ ಅವರ ಸ್ನೇಹಿತರು. ಇದೇ ಕಾರಣದಿಂದ ಸಾಯಿ ಅವರು ಜನಾರ್ಧನ್ ರೆಡ್ಡಿ ಅವರ ಮಗನ ಚೊಚ್ಚಲ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ.

%d bloggers like this: