ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡ್ತಿದಾರೆ ಮತ್ತೊಬ್ಬ ಪ್ರಸಿದ್ದ ಬಿಗ್ ಬಾಸ್ ಸ್ಪರ್ಧಿ, ಈಡೇರಿತು 20 ವರ್ಷದ ಕನಸು

ಕನ್ನಡದ ಕಿರುತೆರೆಯಲ್ಲಿ ಇತಿಹಾಸ ಸೃಷ್ಟಿಸಿದ ಒಂದು ರಿಯಾಲಿಟಿ ಶೋ ಎಂದರೆ ಅದು ಬಿಗ್ ಬಾಸ್ ಎಂದರೆ ತಪ್ಪಾಗಲಿಕ್ಕಿಲ್ಲ. ಹೌದು ಬಿಗ್ ಬಾಸ್ ಎಂದ ಕೂಡಲೇ ನೆನಪಾಗುವುದು ಮನರಂಜನೆಯ ಮಹಾಪೂರ. ಒಂದು ಬಿಗ್ ಬಾಸ್ ಸೀಸನ್ ಶುರುವಾಗುತ್ತದೆ ಎಂದರೆ ಸಾಕು ಈ ಸಲ ಮನೆ ಒಳಗೆ ಯಾರು ಹೋಗುತ್ತಾರೆ ಅದರಲ್ಲಿ ಸೆಲೆಬ್ರಿಟಿಗಳು ಯಾರು ಇರುತ್ತಾರೆ, ಈ ಸಲದ ಮನೆ ಹೇಗಿದೆ ಮತ್ತು ಅದರ ವಿಶೇಷತೆಗಳೇನು ಹೀಗೆ ಅನೇಕ ವಿಷಯಗಳ ಬಗ್ಗೆ ಚರ್ಚೆಗಳು ಜನರ ನಡುವೆ ಶುರುವಾಗುತ್ತವೆ. ಅಷ್ಟರ ಮಟ್ಟಿನ ಖ್ಯಾತಿಯನ್ನು ಹೊಂದಿದೆ ಬಿಗ್ ಬಾಸ್ ಎಂಬ ಒಂದು ರಿಯಾಲಿಟಿಶೋ. ಕಳೆದ 7 ಆವೃತ್ತಿ ಗಳಿಂದ ಕಿಚ್ಚ ಸುದೀಪ್ ಅವರು ಅದ್ಭುತ ರೀತಿಯಲ್ಲಿ ಬಿಗ್ ಬಾಸ್ ರಿಯಾಲಿಟಿ ಶೋ ಅನ್ನು ನಡೆಸಿಕೊಂಡು ಬಂದಿದ್ದಾರೆ.

ಈಗಾಗಲೇ ಎಂಟನೇ ಆವೃತ್ತಿಗೆ ಸಿದ್ಧತೆಗಳು ಭರದಿಂದ ಸಾಗಿವೆ. ಈಗ ನಾವು ಹೇಳಹೊರಟಿರುವ ವಿಷಯವೇನೆಂದರೆ ಬಿಗ್ ಬಾಸ್ ಸೀಸನ್ 7ರ ಫೇಮಸ್ ಸ್ಪರ್ಧಿಗಳಲ್ಲಿ ಒಬ್ಬರಾದ ಕಿಶನ್ ಬೆಳಗಲಿ ಅವರ ಬಗ್ಗೆ. ಹೌದು ಬರೋಬ್ಬರಿ 98 ದಿನಗಳ ಕಾಲ ಬಿಗ್ ಬಾಸ್ ಮನೆಯಲ್ಲಿ ಎಲ್ಲರನ್ನು ಮನರಂಜಿಸಿ ಕೊನೆಯ ಹಂತದಲ್ಲಿ ಸ್ಪರ್ಧೆಯಿಂದ ಹೊರಬಿದ್ದರು ಕಿಶನ್ ಆದರೆ ಕನ್ನಡಿಗರೆಲ್ಲರ ಮನಸ್ಸನ್ನು ಅಷ್ಟು ಹೊತ್ತಿಗಾಗಲೇ ಅವರು ಗೆದ್ದಿದ್ದರು. ಕಿಶನ್ ಬೆಳಗಲಿ ದೇಶದ ಅತ್ಯುತ್ತಮ ಡ್ಯಾನ್ಸರ್ ಗಳಲ್ಲಿ ಒಬ್ಬರು. ಹೌದು ಡ್ಯಾನ್ಸ್ ದಿವಾನಿ ಎಂಬ ಹಿಂದಿಯ ಡ್ಯಾನ್ಸ ಸ್ಪರ್ಧೆಯಲ್ಲಿ ವಿಜೇತರಾಗಿ ಹೊರಹೊಮ್ಮಿದರು ಇದೇ ನಮ್ಮ ಕನ್ನಡದ ಚಿಕ್ಕಮಗಳೂರಿನ ಹುಡುಗ ಕಿಶನ್ ಬೆಳಗಲಿ.

ಆದರೆ ಬಹುತೇಕ ಅವರು 20ವರ್ಷಗಳ ಹಿಂದೆ ಕನ್ನಡ ಚಿತ್ರಗಳಲ್ಲಿ ಬಾಲನಟನಾಗಿ ಅಭಿನಯಿಸಿದ್ದರು ಎಂಬುದರ ಬಗ್ಗೆ ಯಾರೊಬ್ಬರಿಗೂ ತಿಳಿದೇ ಇಲ್ಲ. ಚಿಕ್ಕವಯಸ್ಸಿನಿಂದಲೂ ನಟನಾಗಬೇಕು ಎಂಬ ಆಸೆಯನ್ನು ಇಟ್ಟುಕೊಂಡಿದ್ದ ಕಿಶನ್ ಅವರಿಗೆ ಆ ಆಸೆ ಹುಟ್ಟಿಸಿದ್ದು ಬಾಲನಟನಾಗಿ ಅವರು ಅಭಿನಯಿಸಿದ್ದ ಅನುಭವದಿಂದ. ಕಿಶನ್ ಅವರು ಏಳನೆ ತರಗತಿಯಲ್ಲಿ ಓದುತ್ತಿರುವ ಬಾಲಕನಾಗಿದ್ದಾಗ ಕನ್ನಡದ ಕಿರುತೆರೆಯ ಅದ್ಭುತ ಧಾರವಾಹಿಗಳಾದ ಪರ್ವ ಮತ್ತು ಮಾರಿಕಣಿವೆ ರಹಸ್ಯಗಳಲ್ಲಿ ಅಭಿನಯಿಸಿದ್ದರು ಜೊತೆಗೆ ನಮ್ಮ ಪ್ರೀತಿಗೆ ಜಯ ಎಂಬ ಚಿತ್ರವೊಂದರಲ್ಲಿ ಕೂಡ ಬಾಲ ನಟನಾಗಿ ಮಿಂಚಿದವರು ಡ್ಯಾನ್ಸರ್ ಕಿಶನ್.

ಇದೀಗ ಅದಾಗಿ ಬರೋಬ್ಬರಿ 20ವರ್ಷದ ನಂತರ ಕಿಶನ್ ಅವರ ಕನಸು ನನಸಾಗುವ ಕಾಲ ಬಂದಿದೆ. ಹೌದು ನಿನ್ನೆ ಸ್ವತಃ ಕಿಶನ್ ಬೆಳಗಲಿ ಅವರೇ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ 20ವರ್ಷದ ನಂತರ ಮರಳಿ ಕ್ಯಾಮೆರಾ ಮುಂದೆ ಅಭಿನಯಿಸಲು ಕಾತುರನಾಗಿದ್ದೇನೆ ಎಂದು ಪೋಸ್ಟ್ ಮಾಡಿದ್ದಾರೆ. ತಮ್ಮ ಡ್ಯಾನ್ಸ್ ಕಲೆಯಿಂದ ಬಾಲಿವುಡ್ ಮಂದಿಗೆಲ್ಲಾ ಪರಿಚಿತವಿರುವ ಕಿಶನ್ ತಮ್ಮ ಹೊಸ ಪ್ರಯತ್ನದ ಮೂಲಕ ಕನ್ನಡದ ಕೀರ್ತಿಯನ್ನು ಮತ್ತಷ್ಟು ಪಸರಿಸಲಿ ಎಂದು ಹಾರೈಸೋಣ.

%d bloggers like this: