ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಕನ್ನಡ ಕಿರುತೆರೆಯ ಮತ್ತೊಬ್ಬ ಪ್ರಸಿದ್ಧ ನಟಿ

ಕನ್ನಡ ಕಿರುತೆರೆಯ ಜನಪ್ರಿಯ ತಾರೆ ಬೆಳ್ಳಿ ತೆರೆಗೆ ಹಾರಲು ಸಜ್ಜಾಗುತ್ತಿದ್ದಾರೆ. ಈಗಾಗಲೇ ಕಿರುತೆರೆಯಲ್ಲಿ ಮಿಂಚುತ್ತಿರುವ ಅನೇಕ ನಟ-ನಟಿಯರು ಸಿನಿಮಾಗಳಲ್ಲಿ ಅವಕಾಶ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಅಂತೆಯೇ ಇದೀಗ ಕನ್ನಡ ಕಿರುತೆರೆಯ ಪ್ರಸಿದ್ದ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ವಾಗುತ್ತಿರುವ ನಮ್ಮನೆ ಯುವರಾಣಿ ಧಾರಾವಾಹಿಯಲ್ಲಿ ಮೀರಾ ಪಾತ್ರದಲ್ಲಿ ನಟಿಸುತ್ತಿದ್ದ ನಟಿ ಅಂಕಿತಾ ಅಮರ್ ಕೂಡ ಚಂದನವನಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಹೌದು ನಟಿ ಅಂಕಿತಾ ಅಮರ್ ಕೇವಲ ಧಾರಾವಾಹಿಯಲ್ಲಿ ನಟಿಸುವುದಲ್ಲದೆ ರಿಯಾಲಿಟಿ ಸಿಂಗಿಂಗ್ ಶೋ ವೊಂದರ ನಿರೂಪಕಿಯಾಗಿಯೂ ಕೂಡ ಗುರುತಿಸಿಕೊಂಡಿದ್ದಾರೆ. ಹೌದು ಸಂಗೀತ ಸಾಮ್ರಾಟ ಎಸ್.ಪಿ ಬಾಲ ಸುಬ್ರಮಣ್ಯಂ ಅವರ ಸವಿ ನೆನಪಿಗಾಗಿ ಹೊಸ ರೂಪದಲ್ಲಿ ಪುನರ್ ಆರಂಭವಾಗಿರುವ ಎದೆ ತುಂಬಿ ಹಾಡುವೆನು ಕಾರ್ಯಕ್ರಮಕ್ಕೆ ನಟಿ ಅಂಕಿತಾ ಅಮರ್ ಅವರೇ ನಿರೂಪಣೆ ಮಾಡುತ್ತಿದ್ದಾರೆ.

ಕೆಲವು ದಿನಗಳ ಹಿಂದೆಯಷ್ಟೇ ನಟಿ ಕಮ್ ನಿರೂಪಕಿ ಅಂಕಿತಾ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ನಮ್ಮನೆ ಯುವರಾಣಿ ಧಾರಾವಾಹಿಯಿಂದ ಹೊರ ನಡೆಯುತ್ತಿರುವ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು. ಇದೀಗ ಇವರು ನಮ್ಮನೆ ಯುವರಾಣಿ ಧಾರಾವಾಹಿಯಿಂದ ಹೊರ ನಡೆದಿರುವುದಕ್ಕೆ ಉತ್ತರ ಸಿಕ್ಕಿದೆ. ಹೌದು ನಟಿ ಅಂಕಿತಾ ಅಮರ್ ಅವರಿಗೆ ‘ಅಬ ಜಬ ದಬ’ ಎಂಬ ಚಿತ್ರದಲ್ಲಿ ನಾಯಕಿಯಾಗಿ ನಟಿಸುವ ಅವಕಾಶ ಸಿಕ್ಕಿದೆ. ಈ ಅಬ ಜಬ ದಬ ಚಿತ್ರವನ್ನು ನಿರ್ದೇಶಕ ಆರ್‌.ಜೆ.ಆಗಿದ್ದ ಮಯೂರ ರಾಘವೇಂದ್ರ ಅವರು ನಿರ್ದೇಶನ ಮಾಡುತ್ತಿದ್ದಾರೆ. ಈ ಹಿಂದೆ ಮಯೂರ ರಾಘವೇಂದ್ರ ಅವರು ಕನ್ನಡ್ ಗೊತ್ತಿಲ್ಲ ಎಂಬ ಸಿನಿಮಾ ನಿರ್ದೇಶನ ಮಾಡಿದ್ದರು. ಈ ಚಿತ್ರಕ್ಕಾಗಿ ಬೆಸ್ಟ್ ಡೆಬ್ಯೂ ಡೈರೆಕ್ಟರ್ ಅವಾರ್ಡ್ ಕೂಡ ಪಡೆದುಕೊಂಡಿದ್ದರು.

ಇನ್ನು ಈ ಅಬ ಜಬ ದಬ ಸಿನಿಮಾ ಕಂಪ್ಲೀಟ್ ಕಾಮಿಡಿ ಜಾನರ್ ಸಿನಿಮಾ ಆಗಿದೆಯಂತೆ. ಎಸ್.ರಾಮ್ ಪ್ರೊಡಕ್ಷನ್ ಅಡಿಯಲ್ಲಿ ತಯಾರಾಗುತ್ತಿರುವ ಈ ಅಬ ಜಬ ದಬ ಚಿತ್ರಕ್ಕೆ ಗಿರಿಧರ್ ದಿವಾನ್ ಕ್ಯಾಮೆರಾ ಕೆಲಸ ಮಾಡುತ್ತಿದ್ದು, ಸತೀಶ್ ರಘುನಾಥನ್ ರಾಗ ಸಂಯೋಜನೆ ಮಾಡುತ್ತಿದ್ದಾರೆ. ಇನ್ನು ಈ ಅಬ ಜಬ ದಬ ಚಿತ್ರಕ್ಕೆ ದಿಯಾ ಸಿನಿಮಾ ಖ್ಯಾತಿಯ ನಟ ಪೃಥ್ವಿ ಅಂಬಾರ್ ನಾಯಕ ನಟರಾಗಿ ಅಭಿನಯಿಸುತ್ತಿದ್ದು, ಅಂಕಿತಾ ಅಮರ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಹಾಗೇ ಇನ್ನಿತರ ಮುಖ್ಯ ಭೂಮಿಕೆಯಲ್ಲಿ ಅಚ್ಯೂತ್ ಕುಮಾರ್, ನಿಧಿ ಸುಬ್ಬಯ್ಯ, ಊರ್ವಶಿ, ವಿಶ್ವ ಕಿರಣ್, ಅನಂತ ಕೃಷ್ಣ, ಪಿ.ಡಿ.ಸತೀಶ್ ಚಂದ್ರ, ಸುಧಾರಾಣಿ, ಬಿಗ್ ಬಾಸ್ ಖ್ಯಾತಿಯ ರಘು ಜೊತೆಗೆ ನಿರ್ದೇಶಕರಾಗಿರುವ ಮಯೂರ ರಾಘವೇಂದ್ರ ಕೂಡ ಮುಖ್ಯ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ.

%d bloggers like this: