ಕನ್ನಡ ಚಿತ್ರರಂಗಕ್ಕೆ ಹೊಸ ನಟಿಯ ಆಗಮನ, ಕಿರಿಕ್ ಶಂಕರನಾದ ಲೂಸ್ ಮಾದಾ ಯೋಗಿ ಅವರು

ಸ್ಯಾಂಡಲ್ ವುಡ್ ನಲ್ಲಿ ಲೂಸ್ ಮಾದ ಎಂದೇ ಹೆಸರಾಗಿರುವ ನಟ ಯೋಗೀಶ್ ದುನಿಯಾ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡಿದ್ದರು. ದುನಿಯಾ ಸಿನಿಮಾದಲ್ಲಿ ಸೈಡ್ ರೋಲ್ ನಲ್ಲಿ ಕಾಣಿಸಿಕೊಂಡಿದ್ದ ಇವರಿಗೆ ನಂದ ಲವ್ಸ್ ನಂದಿತಾ ಚಿತ್ರದ ಮೂಲಕ ನಾಯಕನಟನಾಗುವ ಅವಕಾಶ ದೊರಕಿತ್ತು. ನಂದ ಲವ್ಸ್ ನಂದಿತಾ ಚಿತ್ರದ ಯಶಸ್ಸಿನ ನಂತರ ಹಲವಾರು ಸಿನಿಮಾಗಳು ಇವರನ್ನು ಹುಡುಕಿಕೊಂಡು ಬಂದವು. ಅವುಗಳಲ್ಲಿ ಅಂಬಾರಿ, ಸಿದ್ಲಿಂಗು ಅಲೆಮಾರಿ ಹೀಗೆ ಹಲವು ಚಿತ್ರಗಳು ಇವರಿಗೆ ಯಶಸ್ಸು ತಂದುಕೊಟ್ಟಿದ್ದವು. ಕಳೆದ ಮೂರು ನಾಲ್ಕು ವರ್ಷಗಳಿಂದ ನಟನೆಗೆ ಸ್ವಲ್ಪ ಬ್ರೇಕ್ ತೆಗೆದುಕೊಂಡಿದ್ದ ಇವರು, ಚಿತ್ರರಂಗದಿಂದ ದೂರ ಉಳಿಯುವ ಮಾತುಗಳನ್ನಾಡಿದ್ದರು. ಇದರ ಮಧ್ಯೆ ತಮ್ಮ ಗೆಳತಿಯೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ನಟ ಯೋಗೀಶ್ ಅವರು ಈಗ ಒಂದು ಮಗುವಿನ ತಂದೆ.

ಈಗ ಮತ್ತೆ ಸಿನಿಮಾಗಳತ್ತ ಮುಖಮಾಡಿರುವ ಲೂಸ್ ಮಾದ ಅವರ ಒಂಬತ್ತನೇ ದಿಕ್ಕು ಸಿನಿಮಾ ರಿಲೀಸ್ ಆಗಿದೆ. ಇದೀಗ ಲೂಸ್ ಮಾದ ಯೋಗಿ ನಾಯಕನಾಗಿ ನಟಿಸಿರುವ ಮತ್ತೊಂದು ಚಿತ್ರ ಕಿರಿಕ್ ಶಂಕರ್ ತೆರೆಗೆ ಬರಲು ಸಿದ್ಧವಾಗಿದೆ. ಕಿರಿಕ್ ಶಂಕರ್ ಚಿತ್ರ ಪಕ್ಕಾ ಕಮರ್ಷಿಯಲ್ ಚಿತ್ರವಾಗಿದ್ದು, ನಗರದ ಹೊರವಲಯದಲ್ಲಿ ನಡೆಯುವ ಕಥೆಯಾಗಿದೆ. ನಾಯಕನಿಗೆ ಇಬ್ಬರು ತಂಗಿಯರು. ಇವನದು ತುಂಬು ಕುಟುಂಬ. ಸಂಸಾರದ ಜವಾಬ್ದಾರಿ ಹೆಗಲಮೇಲಿದ್ದರೂ ಯಾವುದಕ್ಕೂ ತಲೆಕೆಡಿಸಿಕೊಳ್ಳಲ್ಲದಂತಹ ವ್ಯಕ್ತಿ. ಆತನ ಜೀವನದಲ್ಲಿ ನಾಯಕಿಯ ಆಗಮನವಾಗುತ್ತಿದ್ದಂತೆ ಏನೆಲ್ಲಾ ಬದಲಾವಣೆಗಳು ಆಗುತ್ತವೆ ಎಂಬುದು ಕಥೆಯ ಸಾರಾಂಶ. ಈ ಚಿತ್ರವನ್ನು ಚಿತ್ರರಂಗಕ್ಕೆ ಸಾಕಷ್ಟು ಯಶಸ್ವಿ ಚಿತ್ರಗಳನ್ನು ನೀಡಿರುವ ಎಮ್ ಎನ್ ಕುಮಾರ್ ನಿರ್ಮಿಸಿದ್ದು, ಆರ್ ಅನಂತರಾಜು ನಿರ್ದೇಶನ ಮಾಡಿದ್ದಾರೆ.

ಇತ್ತೀಚೆಗೆ ಈ ಚಿತ್ರದ ಪತ್ರಿಕಾಗೋಷ್ಠಿ ನಡೆದಿತ್ತು. ತುಂಬಾ ದಿನಗಳ ನಂತರ ನಮ್ಮ ಭೇಟಿಯಾಗುತ್ತಿದ್ದೆ. ಕೋರೋಣ ಕಾರ್ಮೋಡ ಕಳೆದು ಸಂಭ್ರಮದ ವಾತಾವರಣ ಮರಳಿ ಬಂದಿದೆ. ಇದೇ ಏಪ್ರಿಲ್ ನಲ್ಲಿ ಈ ಚಿತ್ರವನ್ನು ಬಿಡುಗಡೆ ಮಾಡುತ್ತಿದ್ದೇವೆ. ಚಿತ್ರ ಚೆನ್ನಾಗಿ ಮೂಡಿಬಂದಿದೆ. ಚಿತ್ರ ತಂಡಕ್ಕೆ ಧನ್ಯವಾದಗಳು ಎಂದು ನಿರ್ಮಾಪಕ ಎಮ್ ಎನ್ ಕುಮಾರ್ ಪತ್ರಿಕಾಗೋಷ್ಟಿಯಲ್ಲಿ ಹೇಳಿದರು. ಇನ್ನು ಈ ಚಿತ್ರದ ಬಗ್ಗೆ ಮಾತನಾಡಿದ ನಿರ್ದೇಶಕರು ಕಥೆ ಎಲ್ಲರಿಗೂ ಹಿಡಿಸಿದರೆ ಅದರ ಕ್ರೆಡಿಟ್ ಸಂಪೂರ್ಣವಾಗಿ ಯೋಗೀಶ್ ಹುಣಸೂರು ಅವರಿಗೆ ಹೋಗಬೇಕು. ಅವರೇ ಈ ಚಿತ್ರದ ಕಥೆಗಾರರು. ತಾಂತ್ರಿಕ ವರ್ಗದವರ ಹಾಗೂ ಕಲಾವಿದರ ಸಹಕಾರದಿಂದ ನಮ್ಮ ಚಿತ್ರ ಚೆನ್ನಾಗಿ ಮೂಡಿಬಂದಿದೆ ನಿಮ್ಮ ಪ್ರೋತ್ಸಾಹ ಸದಾಕಾಲ ಇರಲಿ ಎಂದರು.

ಕಥೆ ಚಿತ್ರಕಥೆ ಸಂಭಾಷಣೆ ಬರೆದಿರುವ ಯೋಗೀಶ್ ಹುಣಸೂರು ಹಾಗೂ ಅಭಿನಯಿಸಿರುವ ರಿತೇಶ್ ಅನುಭವದ ಮಾತುಗಳನ್ನಾಡಿದರು. ಆನಂದ್ ಆಡಿಯೋ, ಶ್ಯಾಮ ಹಾಗೂ ಗೀತೆರಚನೆಕಾರರ ಕಿನ್ನಾಳ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು. ಕನ್ನಡದಲ್ಲಿ ತೆರೆಕಂಡು ಹಿಟ್ ಎನಿಸಿಕೊಂಡಿದ್ದ ಲಂಕೆ ಸಿನಿಮಾ ಇದೀಗ ತೆಲುಗುಗೆ ರಿಮೇಕ್ ಆಗುತ್ತಿದೆ. ಈ ವಿಚಾರವನ್ನು ಲಂಕೆ ಸಿನಿಮಾದ ನಿರ್ದೇಶಕರು ತಿಳಿಸಿದ್ದಾರೆ. ಇನ್ನು ಲಂಕೆ ಚಿತ್ರ 175 ದಿನಗಳನ್ನು ಪೂರೈಸಿದ ಸಂಭ್ರಮಾಚರಣೆಯನ್ನು ಶೀಘ್ರದಲ್ಲೇ ಚಿತ್ರತಂಡ ಮಾಡಲಿದೆ. ಇನ್ನು ಈ ಚಿತ್ರದಲ್ಲಿ ನಾಯಕ ನಟನಾಗಿ ಅಭಿನಯಿಸುತ್ತಿರುವ ನಟ ಯೋಗೀಶ್ ಅವರು, ಅನಂತರಾಜು ಅವರ ಜೊತೆ ಕೆಲಸ ಮಾಡಿದ್ದು ಸಂತಸ ತಂದಿದೆ. ಪ್ರತಿಯೊಂದು ಸಿನಿಮಾದಲ್ಲೂ ಕಲಿಯುವುದು ಇದ್ದೇ ಇರುತ್ತದೆ.

ಹಾಗೆಯೇ ಈ ಚಿತ್ರದಲ್ಲೂ ನಾನು ಸಾಕಷ್ಟು ಕಲಿತಿದ್ದೇನೆ. ನನ್ನ ಜೊತೆ ನಟಿಸಿರುವ ಎಲ್ಲಾ ಕಲಾವಿದರು ಚೆನ್ನಾಗಿ ಅಭಿನಯಿಸಿದ್ದಾರೆ ಎಂದು ಯೋಗಿ ಹೇಳಿದರು. ಇನ್ನು ಈ ಸಿನಿಮಾಗೆ ನಾಯಕಿಯಾಗಿ ನೂತನ ಪ್ರತಿಭೆ ಚಿತ್ರರಂಗಕ್ಕೆ ಪ್ರವೇಶ ಮಾಡಿದ್ದಾರೆ. ಹೌದು ನಟಿ ಅದ್ವಿಕ ಅವರು ಈ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸುತ್ತಿದ್ದು ಇದು ಅವರ ಮೊದಲ ಚಿತ್ರವಾಗಿದೆ. ಮೂಲತಹ ರಂಗಭೂಮಿ ಕಲಾವಿದೆ ನಿರ್ದೇಶಕ ಗಿರಿರಾಜ್ ಅವರು ನನ್ನ ಗುರುಗಳು. ಅವರ ಸಾಕಷ್ಟು ನಾಟಕಗಳಲ್ಲಿ ನಾನು ನಟಿಸಿದ್ದೇನೆ. ಹಿರಿತೆರೆಯಲ್ಲಿ ಇದು ನನ್ನ ಮೊದಲ ಚಿತ್ರ. ನನ್ನ ಪಾತ್ರ ತುಂಬಾ ಚೆನ್ನಾಗಿ ಮೂಡಿಬಂದಿದೆ. ನನಗೆ ಅವಕಾಶ ಕೊಟ್ಟ ನಿರ್ಮಾಪಕ ಹಾಗೂ ನಿರ್ದೇಶಕರಿಗೆ ನನ್ನ ವಂದನೆಗಳು ಎಂದು ನಾಯಕಿ ಅದ್ವಿಕಾ ಮಾತುಗಳನ್ನಾಡಿದರು.

%d bloggers like this: