ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಕನ್ನಡ ಕಿರುತೆರೆಯ ಜನಪ್ರಿಯ ನಟಿ

ಹಿಟ್ಲರ್ ಕಲ್ಯಾಣ ಸೀರಿಯಲ್ ನಲ್ಲಿ ಲೀಲಾ ಪಾತ್ರದ ಮೂಲಕ ಕನ್ನಡ ಕಿರುತೆರೆಯಲ್ಲಿ ಅಪಾರ ಜನಪ್ರಿಯತೆ ಗಳಿಸಿರುವ ನಟಿ ಮಲೈಕಾ ವಸುಪಾಲ್ ಅವರಿಗೆ ಇದೀಗ ಚಂದನವನದಲ್ಲಿ ನಾಯಕಿ ಆಗುವ ಅವಕಾಶ ಸಿಕ್ಕಿದೆ. ಹೌದು ಕಿರುತೆರೆಯ ಮೂಲಕ ಅನೇಕ ಮಂದಿ ಚಂದನವನಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಅದರಲ್ಲಿ ಕೆಲವರು ಸಕ್ಸಸ್ ಕಂಡಿದ್ದಾರೆ. ಇನ್ನೂ ಒಂದಷ್ಟು ಮಂದಿ ಸಕ್ಸಸ್ ಗಾಗಿ ಪ್ರಯತ್ನ ಮಾಡ್ತಿದ್ದಾರೆ. ಅದರಂತೆ ಇದೀಗ ಕನ್ನಡ ಕಿರುತೆರೆಯ ಪ್ರಸಿದ್ದ ವಾಹಿನಿ ಆಗಿರುವ ಜೀ಼ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ಜನಪ್ರಿಯ ಧಾರಾವಾಹಿ ಹಿಟ್ಲರ್ ಕಲ್ಯಾಣ ಧಾರಾವಾಹಿಯಲ್ಲಿ ಲೀಲಾ ಪಾತ್ರದ ಮೂಲಕ ಕನ್ನಡ ನಾಡಿನ ಮನೆ ಮನಗಳಲ್ಲಿ ಹೆಸರು ಮಾಡಿರುವ ನಟಿ ಮಲೈಕಾ ಕೂಡ ಬೆಳ್ಳಿಪರದೆಗೆ ಹೆಜ್ಜೆ ಇಟ್ಟಿದ್ದಾರೆ. ಮಲೈಕಾ ಅವರಿಗೆ ಮೊದಲಿನಿಂದಾಲೂ ತಾನು ಹೀರೋಯಿನ್ ಆಗಬೇಕು ಎಂಬ ಕನಸು ಹೊತ್ತಿದ್ದರಂತೆ. ಆದರೆ ಪೋಷಕರಿಗೆ ಮಗಳು ಮೊದಲು ಪದವಿ ಮಾಡಬೇಕು ಅಂತ ಹೇಳಿದ್ರಂತೆ. ಅದರಂತೆ ಸಿವಿಲ್ ಇಂಜಿನಿಯರಿಂಗ್ ಪದವಿ ಮಾಡದ ನಂತರ ಮಲೈಕಾ ವಸುಪಾಲ್ ಅವರು ಅನೇಕ ಸೀರಿಯಲ್, ಸಿನಿಮಾಗಳ ಅಡಿಶನ್ ಅಟೆಂಡ್ ಮಾಡ್ತಾರೆ.

ಆದರೆ ಹೋದಕಡೆ ಎಲ್ಲಾ ನಿರೀಕ್ಷೆ ಎಲ್ಲಾ ಹುಸಿಯಾಗಿ ಬೇಸರ ಆಗಿತ್ತಂತೆ. ದಾವಣಗೆರೆ ಮೂಲದ ಈ ಬೆಡಗಿಗೆ ಅಂತೂ ಇಂತೂ ಹಿಟ್ಲರ್ ಕಲ್ಯಾಣ ಧಾರಾವಾಹಿಯಲ್ಲ ಅವಕಾಶ ಸಿಗುತ್ತದೆ. ಈ ಧಾರಾವಾಹಿಯಲ್ಲಿ ಎಡವಟ್ಟು ಲೀಲಾಳ ಪಾತ್ರದ ಮುಖೇನ ವೀಕ್ಷಕರ ಮನ ಗೆದ್ದಿದ್ದಾರೆ. ಇದೀಗ ಸಿನಿಮಾದಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಹೌದು ಇದೇ ಮೊದಲ ಬಾರಿಗೆ ಚಿಕ್ಕಣ್ಣ ಅವರು ಸಂಪೂರ್ಣ ನಾಯಕ ನಟರಾಗಿ ನಟಿಸುತ್ತಿರುವ ಉಪಾಧ್ಯಕ್ಷ ಚಿತ್ರದಲ್ಲಿ ಮಲೈಕಾ ವಸುಪಾಲ್ ಅವರು ನಾಯಕಿಯಾಗಿ ನಟಿಸುತ್ತಿದ್ದಾರೆ. ನಟಿ ಮಲೈಕಾ ವಸುಪಾಲ್ ಅವರಿಗೆ ನಟನೆಯ ಜೊತೆಗೆ ನೃತ್ಯದಲ್ಲಿಯೂ ಕೂಡ ವಿಶೇಷ ಆಸಕ್ತಿ ಹೊಂದಿದ್ದು, ನೃತ್ಯವನ್ನು ಕೂಡ ಚೆನ್ನಾಗಿ ಮಾಡ್ತಾರಂತೆ. ಇನ್ನು ಈ ಉಪಾಧ್ಯಕ್ಷ ಸಿನಿಮಾಗೆ ಖ್ಯಾತ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ಅವರ ಪತ್ನಿ ನಿರ್ಮಾಪಕಿಯಾಗಿದ್ದಾರೆ. ಮೊದಲ ಚಿತ್ರವೇ ದೊಡ್ಡ ನಿರ್ಮಾಣ ಸಂಸ್ಥೆಯಲ್ಲಿ ಅವಕಾಶ ಸಿಕ್ಕಿರುವುದಕ್ಕೆ ನಟಿ ಮಲೈಕಾ ವಸುಪಾಲ್ ಅವರು ಸಂತಸವಾಗಿದ್ದಾರೆ. ಜೊತೆಗೆ ತಮ್ಮ ಪಾತ್ರದ ಬಗ್ಗೆ ಕುತೂಹಲ ಇಟ್ಟುಕೊಂಡಿದ್ದಾರಂತೆ. ಈ ಚಿತ್ರವನ್ನ ಅನಿಲ್ ನಿರ್ದೇಶನ ಮಾಡುತ್ತಿದ್ದಾರೆ.

%d bloggers like this: