ಕನ್ನಡ ಕಿರುತೆರೆಯಲ್ಲಿ ಮತ್ತೊಂದು ದೊಡ್ಡ ಮೈಲುಗಲ್ಲು ಸಾಧಿಸಿದ ಸುಪ್ರಸಿದ್ಧ ಮಾಹಾನಾಯಕ ಧಾರಾವಾಹಿ

ಕೋವಿಡ್ ಸಮಯದಲ್ಲಿ ಎಲ್ಲ ಸೀರಿಯಲ್ ಗಳ ಶೂಟಿಂಗ್ ನಿಂತು ಹೋಗಿದ್ದವು. ಲಾಕಡೌನ್ ಕಾರಣದಿಂದ ದೇಶದ ಸಮಸ್ತ ಜನತೆ ಮನೆಯಲ್ಲಿತ್ತು. ಈ ಸಮಯದಲ್ಲಿ ಜನರಿಗೆ ಎಂಟರ್ಟೈನ್ಮೆಂಟ್ ಮಾಡುವಲ್ಲಿ ಯಶಸ್ವಿಯಾದವುಗಳೆಂದರೆ ಸೀರಿಯಲ್ ಗಳು. ಆದರೆ ಧಾರವಾಹಿಯ ಕಥೆಗಳನ್ನು ಮುಂದುವರೆಸಿಕೊಂಡು ಹೋಗಲು ಶೂಟಿಂಗ್ ಮಾಡಲು ಆಗದ ಕಾರಣ, ಬೇರೆ ಭಾಷೆಯ ಧಾರಾವಾಹಿಗಳು ಕನ್ನಡಕ್ಕೆ ಡಬ್ಬಿಂಗ್ ಆಗಿದ್ದವು. ಈ ರೀತಿ ಡಬ್ಬಿಂಗ್ ಆದ ಧಾರಾವಾಹಿಗಳಲ್ಲಿ ಮಹಾಭಾರತ, ರಾಮಾಯಣ, ಡಾಕ್ಟರ್ ಬಿ ಆರ್ ಅಂಬೇಡ್ಕರ್, ಕೃಷ್ಣ ಸುಂದರಿ ಪ್ರಮುಖವಾದವು. ವಿಶೇಷವೆಂದರೆ ಇವೆಲ್ಲ ಜೀ ಕನ್ನಡದ ವಾಹಿನಿಯಲ್ಲಿ ಪ್ರಸಾರವಾದ ಸೀರಿಯಲ್ ಗಳು. ಇದೀಗ ಜೀಕನ್ನಡದ ವಾಹಿನಿಯಲ್ಲಿ ಹಬ್ಬದ ವಾತಾವರಣ ಮನೆ ಮಾಡಿದೆ.

ಅದಕ್ಕೆ ಕಾರಣವೆಂದರೆ ಜೀ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಎಲ್ಲಾ ಧಾರವಾಹಿಗಳು ಜನರ ಮನ ಗೆದ್ದು ಯಶಸ್ವಿಯಾಗಿ ಮುನ್ನುಗ್ಗುತ್ತಿದೆ. ಇನ್ನೂ ವಿಶೇಷವೆಂದರೆ ಅವುಗಳಲ್ಲಿ ಕನ್ನಡಕ್ಕೆ ಬೇರೆ ಭಾಷೆಯಿಂದ ಡಬ್ಬಿಂಗ್ ಆದ ಸೀರಿಯಲ್ ಗಳು ಜನರನ್ನು ರಂಜಿಸುವಲ್ಲಿ ಮೊದಲ ಸ್ಥಾನದಲ್ಲಿವೆ. ಸ್ವಮೇಕ್ ಸೀರಿಯಲ್ ಗಳಿಗಿಂತ ಡಬ್ಬಿಂಗ್ ಸೀರಿಯಲ್ ಗಳು ಹೆಚ್ಚು ಸದ್ದು ಮಾಡುತ್ತಿವೆ. ಸಂವಿಧಾನ ಶಿಲ್ಪಿ ಡಾಕ್ಟರ್ ಬಿಆರ್ ಅಂಬೇಡ್ಕರ್ ಅವರ ಜೀವನ ಕುರಿತು ಮೂಡಿಬರುತ್ತಿರುವ ಮಹಾನಾಯಕ ಸೀರಿಯಲ್, ಇಡೀ ದೇಶದಲ್ಲಿಯೇ ಸಂಚಲನ ಮೂಡಿಸಿದ ಧಾರಾವಾಹಿ ಎಂದರೆ ತಪ್ಪಾಗಲಾರದು. ಎಲ್ಲಾ ಭಾಷೆಗಳಲ್ಲೂ ಯಶಸ್ಸು ಪಡೆದುಕೊಂಡಿರುವ ಮಹಾನಾಯಕ ಧಾರಾವಾಹಿ, ಕನ್ನಡದಲ್ಲಿ 300 ಸಂಚಿಕೆಗಳನ್ನು ಪೂರೈಸಿದೆ. ಉತ್ತಮ ರೇಟಿಂಗ್ ನೊಂದಿಗೆ ಜನರ ಪ್ರೀತಿ ಅಭಿಮಾನವನ್ನು ಪಡೆದು ಈ ಸೀರಿಯಲ್ ಮುನ್ನುಗ್ಗುತ್ತಿದೆ.

ಇನ್ನೂ ತೆಲುಗು ಭಾಷೆಯಿಂದ ಕನ್ನಡಕ್ಕೆ ಡಬ್ಬಿಂಗ್ ಆದರೂ ಕೂಡ ಟಾಪ್ ಸೀರಿಯಲ್ ಗಳಲ್ಲಿ ಕೃಷ್ಣಸುಂದರಿ ಧಾರಾವಾಹಿ ಕೂಡ ಸ್ಥಾನ ಪಡೆದಿದೆ. ಈ ಧಾರಾವಾಹಿಯ ಕಥಾನಾಯಕಿ ಅಪ್ಪಟ ಕೃಷ್ಣ ಭಕ್ತೆಯಾಗಿ, ವರ್ಣಭೇದದ ವಿರುದ್ಧ ಹೋರಾಡುತ್ತಾ ತನ್ನ ಬದುಕು ಕಟ್ಟಿಕೊಳ್ಳುವ ಕಥೆಯೇ ಕೃಷ್ಣ ಸುಂದರಿ. ಇದು ಟಾಪ್ 20 ಸೀರಿಯಲ್ ಗಳಲ್ಲಿ ಸ್ಥಾನ ಪಡೆದು ವೀಕ್ಷಕರ ಮನಗೆದ್ದಿದೆ. ಇನ್ನು ಕನ್ನಡದ ಸ್ವಮೇಕ್ ಧಾರವಾಹಿಗಳಾದ ಕಮಲಿ ಮತ್ತು ಸತ್ಯ ಕೂಡ ಯಶಸ್ವಿ ಪ್ರದರ್ಶನದೊಂದಿಗೆ ಮುನ್ನುಗ್ಗುತ್ತಿವೆ. ಹಳ್ಳಿಯ ಮುಗ್ಧ ಹುಡುಗಿಯ ಸುತ್ತ ಹೆಣೆಯಲಾದ ಕಮಲಿ ಧಾರಾವಾಹಿ ಹಲವು ಟ್ವಿಸ್ಟ್ ಗಳೊಂದಿಗೆ ಜನರ ಮನಗೆದ್ದು 1000 ಸಂಚಿಕೆಗಳನ್ನು ಪೂರೈಸುವ ಖುಷಿಯಲ್ಲಿದೆ. ಇನ್ನು ಕಳೆದ ವರ್ಷದಿಂದ ಪ್ರಸಾರವಾಗುತ್ತಿರುವ ಲೆಡಿ ರಾಕ್ ಸ್ಟಾರ್ ಸತ್ಯ ಧಾರಾವಾಹಿ ಕೂಡ 300 ಸಂಚಿಕೆಗಳನ್ನು ಪೂರೈಸುವ ಖುಷಿಯಲ್ಲಿದ್ದಾಳೆ.

%d bloggers like this: