ಕನ್ನಡ ನಟನ ಮಗನಿಗೆ ವಿಶೇಷ ಉಡುಗೊರೆ ಕೊಟ್ಟ ಚಾಲೆಂಜಿಂಗ್ ಸ್ಟಾರ್ ದರ್ಶನ್

ಕನ್ನಡ ಚಿತ್ರರಂಗದಲ್ಲಿ ಅತೀ ಹೆಚ್ಚು ಅಭಿಮಾನಿ ಹೊಂದಿರುವ ಮಾಸ್, ಕ್ಲಾಸ್ ನಟ ಅಂದರೆ ಅದು ಚಾಲೇಂಜಿಂಗ್ ಸ್ಟಾರ್ ದರ್ಶನ್. ದರ್ಶನ್ ಅಂದಾಕ್ಷಣ ಮೊದಲು ನೆನಪಿಗೆ ಬರುವುದು ಅವರ ಮಾನವೀಯ ಗುಣ, ದಾನ ಧರ್ಮ, ಅಸಹಾಯಕರಿಗೆ ಸಹಾಯ, ಅಭಿಮಾನಿಗಳನ್ನು ತನ್ನ ಅನ್ನದಾತರು ಎಂದು ಅಭಿಮಾನಿಗಳ ಆರಾಧ್ಯದೈವ ಆಗಿರುವ ದರ್ಶನ್ ತಮ್ಮ ಪುಟಾಣಿ ಅಭಿಮಾನಿಯ ಹುಟ್ಟು ಹಬ್ಬಕ್ಕೆ ಗಿಫ್ಟ್ ನೀಡಿದ್ದಾರೆ. ಕಾಮಿಡಿ ಕಿಲಾಡಿಗಳು ಖ್ಯಾತಿಯ ಶಿವರಾಜ್ ಕೆ.ಆರ್.ಪೇಟೆ ಅವರ ಪುತ್ರನಿಗೆ ಡಿಬಾಸ್ ಅಂದರೆ ಅಚ್ಚುಮೆಚ್ಚು ಅವರನ್ನು ಭೇಟಿ ಮಾಡಬೇಕು ಎಂಬ ಆಸೆಯನ್ನು ವಂಶಿಕ್ ವ್ಯಕ್ತಪಡಿಸಿದ್ದಾನೆ. ತನ್ನ ಮಗನ ಆಸೆಯನ್ನು ಪೂರೈಸಲು ಶಿವರಾಜ್ ಕೆ.ಆರ್.ಪೇಟೆ ಅವರ ಪುತ್ರನ ಹುಟ್ಟುಹಬ್ಬ ದಿನದಂದು ದರ್ಶನ್ ಅವರ ಮನೆಗೆ ಭೇಟಿಕೊಟ್ಟು ತನ್ನ ಮಗನಿಗೆ ಸರ್ಪ್ರೈಸ್ ನೀಡಿದ್ದಾರೆ.

ಚಾಲೇಂಜಿಂಗ್ ಸ್ಟಾರ್ ದರ್ಶನ್ ಕೂಡ ಪ್ರೀತಿಯಿಂದ ಬರಮಾಡಿಕೊಂಡು ಶಿವರಾಜ್ ಪುತ್ರ ವಂಶಿಕ್ ನನ್ನು ಪ್ರೀತಿಯಿಂದ ಮುದ್ದಾಡಿ, ಮಾತಾಡಿಸಿ ತಾವೇ ಕ್ಲಿಕ್ಕಿಸಿದ ವನ್ಯಜೀವಿ ಚಿತ್ರವೊಂದಕ್ಕೆ ಫ್ರೇಮ್ ಹಾಕಿಸಿಕೊಟ್ಟು ವಂಶಿಕ್ ಗೆ ಹುಟ್ಟುಹಬ್ಬದ ಉಡುಗೊರೆಯಾಗಿ ನೀಡಿದ್ದಾರೆ. ದರ್ಶನ್ ಅವರ ಈ ಪ್ರೀತಿ, ಗುಣಕ್ಕೆ ಮನಸೋತ ಶಿವರಾಜ್ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ದರ್ಶನ್ ಅವರ ಜೊತೆಯಲ್ಲಿರುವ ಪೋಟೋ ಹಂಚಿಕೊಂಡು ದರ್ಶನ್ ಅವರ ಪ್ರೀತಿ, ವಾತ್ಸಲ್ಯದ ಗುಣದ ಬಗ್ಗೆ ಬರೆದುಕೊಂಡಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

%d bloggers like this: