ಕನ್ನಡ ಕಿರುತೆರೆ ಲೋಕದಲ್ಲಿ ಇದೀಗೊಂದು ಹೊಸ ಬೆಳವಣಿಗೆಯೊಂದು ಆರಂಭವಾಗಿದೆ. ಕನ್ನಡ ಕಿರುತೆರೆ ಧಾರಾವಾಹಿಗಳಲ್ಲಿ ನಟಿಸಿ ಕೊಂಚ ಜನಪ್ರಿಯತೆ ಬರುತ್ತಿದ್ದಂತೆ ಅವರಿಗೆ ಪರಭಾಷೆಯ ನಿರ್ದೇಶಕರು ಮತ್ತು ಪ್ರೊಡಕ್ಷನ್ ಹೌಸ್ ಗಳು ಉತ್ತಮ ಆಫರ್ ನೀಡುತ್ತಿವೆ. ಅದರಲ್ಲಿಯೂ ಕೆಲವು ತಿಂಗಳುಗಳ ಹಿಂದೀಚೆಗೆ ತೆಲುಗು ಕಿರುತೆರೆ ರಂಗವೇ ಹೆಚ್ಚು ಕನ್ನಡ ನಟಿಯರನ್ನೇ ಆಯ್ಕೆ ಮಾಡಿಕೊಳ್ಳುತ್ತಿವೆ. ಅಂತೆಯೇ ಇದೀಗ ಕನ್ನಡದ ಮತ್ತೊಬ್ಬ ಜನಪ್ರಿಯ ಕಿರುತೆರೆ ನಟಿ ಧಾರಾವಾಹಿಗೆ ಎಂಟ್ರಿ ಕೊಟ್ಟಿದ್ದಾರೆ. ಹೌದು ಕಳೆದೊಂದು ವರ್ಷದಲ್ಲಿ ಕನ್ನಡ ಸಿನಿಮಾ ಮತ್ತು ಧಾರಾವಾಹಿಯ ಹಲವಾರು ನಟ ನಟಿಯರು ಪರಭಾಷೆಗಳಲ್ಲಿ ಅವಕಾಶ ಪಡೆದುಕೊಂಡು ಮಿಂಚುತ್ತಿದ್ದಾರೆ. ಇತ್ತೀಚೆಗೆ ಗೀತಾ ಧಾರಾವಾಹಿಯ ನಟಿ ಭವ್ಯಾಗೌಡ, ಜೊತೆ ಜೊತೆಯಲಿ ಧಾರಾವಾಹಿಯ ನಟಿ ಮೇಘಾ ಶೆಟ್ಟಿ ಸೇರಿದಂತೆ ಇನ್ನೊಂದಷ್ಟು ನಟಿಯರು ಪರಭಾಷೆಯ ಧಾರಾವಾಹಿಯಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.

ಇವರ ಸಾಲಿಗೆ ಇದೀಗ ಜೀ಼ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಜನ ಮೆಚ್ಚುಗೆ ಪಡೆದ ಗಟ್ಟಿಮೇಳ ಧಾರಾವಾಹಿಯಲ್ಲಿ ಕಥಾ ನಾಯಕಿ ಸೋದರಿ ಅಧಿತಿ ಪಾತ್ರದ ಮೂಲಕ ಖ್ಯಾತಿ ಪಡೆದಿರುವ ನಟಿ ಪ್ರಿಯಾ ಆಚಾರ್ ಅವರು ಕೂಡ ತೆಲುಗು ಧಾರಾವಾಹಿಯೊಂದರಲ್ಲಿ ಅವಕಾಶ ಪಡೆದುಕೊಂಡಿದ್ದಾರೆ. ಗಟ್ಟಿಮೇಳ ಧಾರಾವಾಹಿಯಲ್ಲಿ ತಂಗಿ ಪಾತ್ರದಲ್ಲಿ ನಟಿಸುತ್ತಿದ್ದ ನಟಿ ಪ್ರಿಯಾ ಆಚಾರ್ ಇದೇ ಮೊದಲ ಬಾರಿಗೆ ಅವರು ತೆಲುಗಿನ ಆನಂದರಾಗಂ ಧಾರಾವಾಹಿಯಲ್ಲಿ ಕಥಾ ನಾಯಕಿಯಾಗಿ ಲೀಡ್ ರೋಲ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಈ ಆನಂದರಾಗಂ ಧಾರಾವಾಹಿ ಪ್ರಸಾರವಾಗುತ್ತಿದೆ. ತೆಲುಗಿನ ಪ್ರಸಿದ್ದ ಕಿರುತೆರೆ ವಾಹಿನಿಗಳಲ್ಲಿ ಒಂದಾಗಿರುವ ಜೆಮಿನಿ ವಾಹಿನಿಯಲ್ಲಿ ಈ ಆನಂದರಾಗಂ ಧಾರಾವಾಹಿ ಕಳೆದ ಡಿಸೆಂಬರ್ ಆರರಿಂದ ಪ್ರಸಾರವಾಗುತ್ತಿದ್ದು, ಆಸಕ್ತಿಕರವಾಗಿ ಮೂಡಿ ಬರುತ್ತಿದೆ.



ಈ ಆನಂದರಾಗಂ ಧಾರಾವಾಹಿಯ ಕಥಾವಸ್ತುವೇ ಸಂಪೂರ್ಣ ಹೊಸತು ಎಂದು ಹೇಳಬಹುದು. ಏಕೆಂದರೆ ಇದು ಮಂಗಳಮುಖಿ ಒಬ್ಬರ ಸುತ್ತಾ ಎಣೆದಿರುವ ಕಥಾವಸ್ತುವಾಗಿದೆ. ಈ ರೀತಿಯ ಮಂಗಳಮುಖಿ ಪಾತ್ರವನ್ನೇ ಪ್ರಧಾನವಾಗಿಟ್ಟುಕೊಂಡು ಧಾರಾವಾಹಿ ಮಾಡಿರಲಿಲ್ಲ. ಹೀಗಾಗಿ ಈ ಆನಂದರಾಗಂ ಧಾರಾವಾಹಿಯು ಸಂಪೂರ್ಣ ವಿಭಿನ್ನ ನೆಲೆಗಟ್ಟಿನಲ್ಲಿ ನಿಂತಿದೆ ಎನ್ನಬಹುದು. ಆನಂದರಾಗಂ ಧಾರಾವಾಹಿ ಕಥೆಯು ಶ್ರೀಮಂತ ಕುಟುಂಬವೊಂದರ ಹುಡುಗ ಟ್ರಾನ್ಸ್ ಜೆಂಡರ್ ಆಗಿ ಬದಲಾವಣೆಗೊಂಡಾಗ ಅವನನ್ನ ಅವರ ಮನೆಯವರು ಹೊರಗಡೆ ಹಾಕುತ್ತಾರೆ. ತದ ನಂತರ ಮನನೊಂದು ತನ್ನದೇ ಒಂದು ಸ್ವತಂತ್ರ ಬದುಕನ್ನ ಕಟ್ಟಿಕೊಳ್ಳಲು ಸಾಗುತ್ತಿದ್ದಾಗ ಆಕಸ್ಮಿಕವಾಗಿ ಒಂದು ಹೆಣ್ಣು ಮಗುವೊಂದು ಸಿಗುತ್ತದೆ.



ಈ ಹೆಣ್ಣು ಮಗುವನ್ನು ತಾನೇ ಬೆಳೆಸುವ ಜವಾಬ್ದಾರಿ ತೆಗೆದುಕೊಳ್ಳುವ ಮಂಗಳಮುಖಿ ತನ್ನ ಮಗಳೆಂದು ಭಾವಿಸಿ ಆ ಹೆಣ್ಣು ಮಗುವಿಗೆ ಐಶ್ವರ್ಯ ಎಂದು ಹೆಸರಿಡುತ್ತಾರೆ. ಐಶ್ವರ್ಯ ಯೌವ್ವನಕ್ಕೆ ಬಂದಾಗ ಹುಡುಗನೊಬ್ಬ ಐಶ್ವರ್ಯಳನ್ನು ಪ್ರೀತಿಸುತ್ತಾನೆ. ಐಶ್ವರ್ಯರ ತಾಯಿ ಒಬ್ಬ ಮಂಗಳಮುಖಿ ಎಂದು ತಿಳಿದಾಗ ಹುಡುಗನ ಮತ್ತು ಅವರ ಕುಟುಂಬದ ರಿಯಾಕ್ಷನ್ ಹೇಗಿರುತ್ತದೆ ಎಂಬ ರೋಚಕ ಕಥೆಯನ್ನ ಹೊತ್ತು ಈ ಆನಂದರಾಗಂ ಸೀರಿಯಲ್ ಮೂಡಿಬರುತ್ತಿದೆ. ಐಶ್ವರ್ಯ ಪಾತ್ರದಲ್ಲಿ ಕನ್ನಡ ನಟಿ ಪ್ರಿಯಾ ಆಚಾರ್ ನಟಿಸುತ್ತಿದ್ದಾರೆ. ಇನ್ನು ಮಂಗಳ ಮುಖಿ ಪಾತ್ರಕ್ಕೆ ನೈಜ ಮಂಗಳಮುಖಿಯೊಬ್ಬರನ್ನ ಕರೆ ತಂದು ಅವಕಾಶ ನೀಡಿದ್ದರಂತೆ. ಆದರೆ ಕಾರಣಾಂತರಗಳಿಂದ ಅವರ ಜಾಗಕ್ಕೆ ಇದೀಗ ನಟ ಶ್ರೀ ಕೃಷ್ಣ ಕೌಶಿಕ್ ಅವರನ್ನ ತಂದಿದ್ದಾರೆ. ಕಥಾ ನಾಯಕನಾಗಿ ರವಿ ಶಂಕರ್ ರಾಥೋಡ್ ಅಭಿನಯಿಸುತ್ತಿದ್ದಾರೆ.