ಕನ್ನಡದ ಪ್ರಮುಖ ನಟನೊಬ್ಬನ ಚಿತ್ರಕ್ಕೆ ಬಂದ್ರು ಮಲೇಷಿಯಾ ದೇಶದ rapper

ನಮ್ಮ ಕನ್ನಡ ಚಿತ್ರರಂಗದಲ್ಲಿ ಇತ್ತೀಚಿಗೆ ದೊಡ್ಡ ನಟರ ಸಿನಿಮಾಗಳಿಗೆಲ್ಲಾ ಬೇರೆ ಭಾಷೆಯ ಸೂಪರ್ ಸಿಂಗರ್ ಗಳನ್ನ ಕರೆತಂದು ಒಂದು ವಿಶೇಷ ಹಾಡಿಗೆ ಧ್ವನಿ ಕೊಡಿಸಲಾಗುತ್ತದೆ, ಇದೇ ಟ್ರೆಂಡ್ ಈಗ ಸೃಷ್ಟಿಯಾಗಿ ಬಿಟ್ಟಿದೆ. 2018ರ ಬ್ಲಾಕ್ಬಸ್ಟರ್ ಸಿನಿಮಾ ಟಗರು ಚಿತ್ರದಲ್ಲಿ ಟೈಟಲ್ ಟ್ರ್ಯಾಕ್ ಅನ್ನು ತಮಿಳಿನ ವಿಭಿನ್ನ ಧ್ವನಿಯ ಗಾಯಕನನ್ನು ಕರೆತಂದು ಹಾಡಿಸಲಾಗಿತ್ತು ಆ ಪ್ರಯತ್ನ ಯಶಸ್ವಿ ಕೂಡ ಆಗಿತ್ತು. ಟಗರು ಬಂತು ಟಗರು ಎಂಬ ಒಂದು ಹಾಡು ಎಲ್ಲರ ಬಾಯಲ್ಲೂ ಗುನುಗುವಂತ ಹಾಡಾಯಿತು. ಈಗ ಸಲಗ ಚಿತ್ರತಂಡ ಅದಕ್ಕೂ ಒಂದು ಕೈ ಮೇಲೆ ಹೋಗಿ ಬೇರೆ ದೇಶದ ಹೆಸರಾಂತ ರ್ಯಪರ್ ಒಬ್ಬರನ್ನು ಕರೆತಂದು ಹಾಡನ್ನು ಹಾಡಿಸುತ್ತಿದೆ.

ದುನಿಯಾ ವಿಜಯ್ ಅಭಿನಯದ ಸಲಗ ಚಿತ್ರ ಚಿತ್ರೀಕರಣ ಪ್ರಾರಂಭವಾದಾಗಿನಿಂದಲೂ ಒಂದಲ್ಲ ಒಂದು ರೀತಿಯಲ್ಲಿ ಸದ್ದು ಮಾಡುತ್ತಿದೆ. ದುನಿಯಾ ವಿಜಯ ಮತ್ತು ಟಗರು ಖ್ಯಾತಿಯ ಡಾಲಿ ಧನಂಜಯ್ ಅವರು ಮೊದಲ ಬಾರಿ ಅಭಿನಯಿಸುತ್ತಿದ್ದು ಸಲಗ ಚಿತ್ರಕ್ಕೆ ಮತ್ತಷ್ಟು ಮೆರುಗು ಬಂದಿದೆ. ಕೋರೋಣ ಹೆಮ್ಮಾರಿ ಅಟ್ಟಹಾಸದ ಕಾರಣ ಚಿತ್ರೀಕರಣ ತಡವಾಗಿದ್ದು ಈಗ ಚಿತ್ರತಂಡ ಎಲ್ಲಾ ಕೆಲಸಗಳನ್ನು ಮುಗಿಸುವ ಭರದಲ್ಲಿ ಇದೆ. ಎಲ್ಲಾ ಅಂದುಕೊಂಡಂತೆ ಆದರೆ ಫೆಬ್ರುವರಿ ತಿಂಗಳಲ್ಲಿ ಸಲಗ ಚಿತ್ರ ಸಿನಿಮಾ ಮಂದಿರಗಳಲ್ಲಿ ಸದ್ದು ಮಾಡಲಿದೆ.

ಹಿಪ್ ಹಾಪ್ ಶೈಲಿಯ ಹಾಡುಗಳಿಗಾಗಿ ಹೆಸರುವಾಸಿಯಾಗಿರುವ ಮಲೇಶಿಯಾ ದೇಶದ ಸಿಂಗರ್ ಕಮ್ ರ್ಯಪರ ಯೋಗಿಯವರನ್ನು ಸಲಗ ಚಿತ್ರತಂಡ ಚಿತ್ರದ ವಿಶೇಷ ಹಾಡಿಗಾಗಿ ಆಯ್ಕೆ ಮಾಡಿದೆ. ಈ ಮೂಲಕ ಮಲೇಶಿಯಾ ದೇಶದ ರ್ಯಪಾರ್ ಒಬ್ಬರು ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಾಯ್ತು. ಈ ಚಿತ್ರದ ಮುಖ್ಯ ವಿಶೇಷವೇನೆಂದರೆ ದುನಿಯಾ ವಿಜಯ್ ಮೊದಲ ಬಾರಿ ಒಂದು ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದು ಆ ಚಿತ್ರದಲ್ಲಿ ಸ್ವತಃ ತಾವೆ ನಾಯಕನಟನಾಗಿ ಅಭಿನಯಿಸುತ್ತಿದ್ದಾರೆ. ಕೆ ಪಿ ಶ್ರೀಕಾಂತ್ ಅವರ ನಿರ್ಮಾಣದಲ್ಲಿ ಸಲಗ ಚಿತ್ರ ಅದ್ದೂರಿಯಾಗಿ ಮೂಡಿ ಬರುವ ಎಲ್ಲ ಲಕ್ಷಣಗಳು ಈಗಾಗಲೇ ಸಿಕ್ಕಿವೆ.

%d bloggers like this: