ಕನ್ನಡ ಶಾಲೆ ಉಳಿಸುವ ಕೆಲಸಕ್ಕೆ ಕೈ ಜೋಡಿಸಿದ ನಟಿ

ಕರ್ನಾಟಕದ ಕೆಲವು ಭಾಗಗಳಲ್ಲಿ ಕನ್ನಡ ಉಳಿಸಿ ಕನ್ನಡದ ಬೆಳೆಸಿ ಚಳುವಳಿ ನಡೆಯುತ್ತಿದೆ. ಕರ್ನಾಟಕದಲ್ಲಿಯೇ ವಾಸಿಸುತ್ತಿದ್ದರೂ ಕೂಡ ಕನ್ನಡದ ಬಳಕೆ ಕಡಿಮೆಯಾಗುತ್ತಿದೆ. ಸಾವಿರಾರು ವರ್ಷಗಳ ಇತಿಹಾಸವಿರುವ ನಮ್ಮ ಕನ್ನಡದ ಭಾಷೆಯು, ಬಳಕೆಯ ಕೊರತೆಯಿಂದ ಮುಂದೊಂದು ದಿನ ಮಾಯವಾಗಬಹುದು. ದ್ರಾವಿಡ ಭಾಷೆಗಳಲ್ಲಿ ಕನ್ನಡದ ಭಾಷೆಯು ಕೂಡ ಪ್ರಮುಖವಾದುದು. ಅತೀ ಹೆಚ್ಚು ಜ್ಞಾನಪೀಠ ಪ್ರಶಸ್ತಿಗಳನ್ನು ಹೊಂದಿರುವ ಭಾಷೆ ಕನ್ನಡ. ಸುಧೀರ್ಘ ಇತಿಹಾಸವಿರುವ ಭಾಷೆ ಕನ್ನಡ. ಇಷ್ಟೆಲ್ಲ ಹಿರಿಮೆಯಿರುವ ನಮ್ಮ ಕನ್ನಡದ ಭಾಷೆ ಇಂದು ನಮ್ಮ ನೆಲದಲ್ಲಿಯೇ ಕಾಣಸಿಗುತ್ತಿಲ್ಲ. ಇದಕ್ಕೆ ಮುಖ್ಯ ಕಾರಣ ಕನ್ನಡವನ್ನು ಬಳಸದೆ ಇರುವುದು ಮತ್ತು ಕನ್ನಡಕ್ಕೆ ಬೇಕಾಗಿರುವ ಸ್ಥಾನಮಾನ ಸಿಗದೇ ಇರುವುದು. ಅನೇಕ ಖಾಸಗಿ ಶಾಲೆಗಳಲ್ಲಿ ಪ್ರಥಮ ಭಾಷೆಯಾಗಿ ಕನ್ನಡವನ್ನು ಆಯ್ದುಕೊಳ್ಳಲು ಅವಕಾಶವಿಲ್ಲ.

ಹೀಗಾಗಿ ಅನೇಕ ಕನ್ನಡಪರ ಹೋರಾಟಗಾರರು ಸರಕಾರಿ ಶಾಲೆಗಳನ್ನು ಉಳಿಸಿ ಅಭಿಯಾನ ನಡೆಸುತ್ತಿದ್ದಾರೆ. ಕನ್ನಡದ ಅನೇಕ ನಟ ನಟಿಯರು ಕೂಡ ಸರ್ಕಾರಿ ಶಾಲೆಗಳನ್ನು ಉಳಿಸಿ ಅಭಿಯಾನಕ್ಕೆ ಕೈಜೋಡಿಸುತ್ತಿದ್ದಾರೆ. ಗಾಳಿಪಟ ಸಿನಿಮಾ ಖ್ಯಾತಿಯ ನಟಿ ನೀತು ಕೂಡ ಈ ಅಭಿಯಾನಕ್ಕೆ ಕೈಜೋಡಿಸಿದ್ದಾರೆ. ಇದರ ಬಗ್ಗೆ ಮಾತನಾಡಿರುವ ನಟಿ ನೀತು. ಸರಕಾರಿ ಶಾಲೆ ಉಳಿಸಿ ಅಭಿಯಾನದ ಹನ್ನೊಂದನೇ ಶಾಲೆಯಲ್ಲಿ ನಾವಿಂದು ಕೆಲಸ ಮಾಡುತ್ತಿದ್ದೇವೆ. ಕುಂದಾಪುರ ಬಳಿಯ ಕರ್ಕುಂಜೆ ಗ್ರಾಮದ ಸರಕಾರಿ ಶಾಲೆಗೆ 60ಕ್ಕೂ ಹೆಚ್ಚು ಸ್ವಯಂಸೇವಕರು ಬೆಳಿಗ್ಗೆ 7ಗಂಟೆಯಿಂದ ಬಣ್ಣಹಚ್ಚುತ್ತಿದ್ದಾರೆ. ಅವರೊಂದಿಗೆ ನನ್ನದೊಂದು ಅಳಿಲು ಸೇವೆ. ಕನ್ನಡ ಮನಸ್ಸುಗಳು, ಪ್ರತಿಷ್ಠೆ ಯಾವುದೇ ಸ್ವಾರ್ಥವಿಲ್ಲದೆ ಸರ್ಕಾರಿ ಶಾಲೆಗಳಿಗೆ ಬಣ್ಣಹಚ್ಚುತ್ತಿದ್ದಾರೆ. ಕನ್ನಡ ಉಳಿಯಬೇಕಾದರೆ ಮೊದಲು ಮಕ್ಕಳು ಸರ್ಕಾರಿ ಶಾಲೆಗೆ ಬರಬೇಕು ಎಂಬ ಉದ್ದೇಶ ಅವರದು. ನಾನು ಇತ್ತೀಚೆಗೆ ಈ ಕಾರ್ಯದಲ್ಲಿ ಕೈ ಜೋಡಿಸಿದ್ದೇನೆ ಎಂದು ನೀತು ಹೇಳಿದ್ದಾರೆ.

%d bloggers like this: