ಕನ್ನಡದಲ್ಲಿ ಶುರುವಾಗುತ್ತಿದೆ ಹೊಚ್ಚ ಹೊಸ ಕಾಮಿಡಿ ರಿಯಾಲಿಟಿ ಶೋ

ನಮ್ಮ ಕನ್ನಡದ ಕಿರುತೆರೆಯಲ್ಲಿ ವಾರಾಂತ್ಯಗಳು ಬಂದರೆ ಸಾಕು ರಿಯಾಲಿಟಿ ಶೋಗಳದ್ದೇ ಕಾರುಬಾರು. ಟಿಆರ್ಪಿ ಗೋಸ್ಕರ ನಾಮುಂದು ತಾಮುಂದು ಎಂದು ಹಲವಾರು ವಾಹಿನಿಗಳು ಹೊಸ ಹೊಸ ರಿಯಾಲಿಟಿ ಶೋಗಳ ಪ್ರಯೋಗಗಳನ್ನು ಮಾಡುತ್ತಲೇ ಇರುತ್ತಾರೆ. ಆದರೆ ಇವುಗಳಲ್ಲಿ ಸಕ್ಸಸ್ ಆಗುವುದು ಕೆಲವು ಮಾತ್ರ. ರಿಯಾಲಿಟಿ ಶೋಗಳಲ್ಲಿ ಸದ್ಯಕ್ಕೆ ಟ್ರೆಂಡಿಂಗ್ ನಲ್ಲಿರುವುದು ಡ್ಯಾನ್ಸ್ ರಿಯಾಲಿಟಿ ಶೋ, ಕಾಮಿಡಿ ರಿಯಾಲಿಟಿ ಶೋ ಹಾಗೂ ಸಂಗೀತದ ರಿಯಾಲಿಟಿ ಶೋಗಳು. ಈ ಮೂರು ತರಹದ ರಿಯಾಲಿಟಿ ಶೋಗಳು ಫ್ಲಾಪ್ ಆಗುವುದು ತುಂಬಾ ಕಡಿಮೆ. ಅದಕ್ಕಾಗಿ ಎಲ್ಲಾ ಸುದ್ದಿವಾಹಿನಿಗಳು ಹೊಸಹೊಸ ಪ್ರಯೋಗಗಳನ್ನು ಮಾಡಿ ಜನರನ್ನು ಆಕರ್ಷಿಸಲು ಹೊಸ ರಿಯಾಲಿಟಿ ಶೋಗಳನ್ನು ತರುತ್ತಲೇ ಇದ್ದಾರೆ. ಹಾಗೆಯೇ ಸದ್ಯಕ್ಕೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ನನ್ನಮ್ಮ ಸೂಪರ್ಸ್ಟಾರ್ ರಿಯಾಲಿಟಿ ಶೋ ಭಾರಿ ಸದ್ದು ಮಾಡುತ್ತಿದೆ.

ನನ್ನಮ್ಮ ಸೂಪರ್ ಸ್ಟಾರ್ ರಿಯಾಲಿಟಿ ಶೋ ಆರಂಭವಾಗಿ ಹಲವು ತಿಂಗಳುಗಳೇ ಕಳೆದಿವೆ. ಹೀಗಾಗಿ ಸದ್ಯಕ್ಕೆ ಈ ರಿಯಾಲಿಟಿ ಶೋವನ್ನು ಮುಕ್ತಾಯ ಮಾಡುವ ಸಮಯ ಬಂದಿದೆ. ಒಂದು ರಿಯಾಲಿಟಿ ಶೋ ಮುಕ್ತಾಯಗೊಂಡರೆ ಮತ್ತೊಂದು ಹೊಸ ರಿಯಾಲಿಟಿ ಶೋ ಬರಲೇಬೇಕು. ಹಾಗಿದ್ದರೆ ನನ್ನಮ್ಮ ಸೂಪರ್ ಸ್ಟಾರ್ ರಿಯಾಲಿಟಿ ಶೋ ಮುಗಿದ ನಂತರ ಯಾವ ಹೊಸ ಕಾನ್ಸೆಪ್ಟ್ ನೊಂದಿಗೆ ಕಲರ್ಸ್ ವಾಹಿನಿಯವರು ಮುಂದೆ ಬರುತ್ತಾರೆ ಎಂದು ಯೋಚಿಸುತ್ತಿದ್ದೀರಾ, ಈ ಪ್ರಶ್ನೆಗೆ ಈಗಾಗಲೇ ಉತ್ತರ ಸಿಕ್ಕಿದೆ. ಇನ್ನೊಂದು ವಾರದಲ್ಲಿ ನನ್ನಮ್ಮ ಸೂಪರ್ಸ್ಟಾರ್ ರಿಯಾಲಿಟಿ ಶೋ ಮುಕ್ತಾಯಗೊಳ್ಳುತ್ತದೆ. ಇದೀಗ ಅದರ ಟೈಮ್ ಸ್ಲಾಟ್ ಗೆ ಹೊಚ್ಚ ಹೊಸ ಕಾಮಿಡಿ ರಿಯಾಲಿಟಿ ಶೋವನ್ನು ತರುವ ಪ್ರಯತ್ನವನ್ನು ಕಲರ್ಸ್ ಕನ್ನಡ ಮಾಡುತ್ತಿದೆ. ಹೌದು ಗಿಚ್ಚ ಗಿಲಿಗಿಲಿ ಎಂಬ ಶೀರ್ಷಿಕೆಯೊಂದಿಗೆ ಕಾಮಿಡಿ ರಿಯಾಲಿಟಿ ಶೋ ಒಂದು ಆರಂಭಗೊಳ್ಳಲಿದೆ.

ತನ್ನ ಶೀರ್ಷಿಕೆಯಿಂದಲೇ ನಗು ಬರಿಸುವಂತಹ ಟೈಟಲನ್ನು ಇಟ್ಟುಕೊಂಡಿರುವ ಈ ತಂಡ ಇನ್ನೂ ಇದರಲ್ಲಿ ಪ್ರಸಾರವಾಗುವ ಎಪಿಸೋಡ್ ಗಳು ಎಷ್ಟು ಕಾಮಿಡಿ ಆಗಿರಬಹುದು ಎಂದು ಎಲ್ಲೆಡೆ ಚರ್ಚೆ ನಡೆಯುತ್ತಿದೆ. ಶೀರ್ಷಿಕೆಯಿಂದಲೇ ಹೆಚ್ಚು ಸದ್ದು ಮಾಡುತ್ತಿರುವ ಈ ರಿಯಾಲಿಟಿ ಶೋನಲ್ಲಿ ಬಿಗ್ ಬಾಸ್ನ ಹಾಗೂ ರಾಜಾರಾಣಿ ರಿಯಾಲಿಟಿ ಶೋನ ಸ್ಪರ್ಧಿ ನಿವೇದಿತಾ ಗೌಡ, ಅಯ್ಯಪ್ಪ, ನಿರೂಪಕಿ ದಿವ್ಯ ವಸಂತ್, ರಾಜ ರಾಣಿ ಶೋ ಮೂಲಕ ಎಲ್ಲರಿಗೂ ಚಿರಪರಿಚಿತರಾಗಿರುವ ನಟಿ ಹರಿಣಿ ಅವರ ಪತಿ ಶ್ರೀಕಾಂತ್ ಅವರು ಕಾಣಿಸಿಕೊಳ್ಳಲಿದ್ದಾರೆ. ಈ ರಿಯಾಲಿಟಿ ಶೋನ ಪ್ರೊಮೋ ಈಗಾಗಲೆ ಬಿಡುಗಡೆಯಾಗಿದ್ದು, ಈ ನಾಲ್ಕು ಜನ ಪ್ರಮೋದಲ್ಲಿ ಮಿಂಚುತ್ತಿದ್ದಾರೆ. ಈ ಹಿಂದೆ ಕಲರ್ಸ್ ಕನ್ನಡದಲ್ಲಿ ಮಜಾಭಾರತ ಎಂಬ ಕಾಮಿಡಿ ಶೋ ಸಕ್ಕತ್ ಹೆಸರು ಮಾಡಿತ್ತು. ಇದೀಗ ಗಿಚ್ಚಿ ಗಿಲಿ ಗಿಲಿ ರಿಯಾಲಿಟಿ ಶೋ ಹೇಗೆ ಮೂಡಿ ಬರಲಿದೆ ಎಂಬುದನ್ನು ಕಾದುನೋಡಬೇಕು.

%d bloggers like this: