ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಇಬ್ಬರು ಬಾಲಿವುಡ್ ನಟರು

ಎಲ್ಲೆಡೆ ಡಬ್ಬಿಂಗ್ ಹವಾ ಜೋರಾಗಿದೆ. ಪ್ಯಾನ್ ಇಂಡಿಯಾ ಸಿನಿಮಾಗಳು ಎಲ್ಲ ಭಾಷೆಗಳಲ್ಲಿ ರಿಲೀಸ್ ಆಗಿ, ಕ್ರಿಯೇಟ್ ಮಾಡುತ್ತಿರುವ ಕ್ರೇಜ್ಗೆ ಎಲ್ಲ ನಟರು ತಮ್ಮ ಚಿತ್ರಗಳನ್ನು ಬೇರೆ ಬೇರೆ ಭಾಷೆಗಳಲ್ಲೂ ಡಬ್ಬಿಂಗ್ ಮಾಡಿ ರಿಲೀಸ್ ಮಾಡಲು ಶುರುಮಾಡಿದ್ದಾರೆ. ಪ್ಯಾನ್ ಇಂಡಿಯಾ ಸಿನಿಮಾ ಒಂದು ಚಿತ್ರತಂಡದ ದೃಷ್ಟಿಯಿಂದ ಒಳ್ಳೆಯ ಕಾನ್ಸೆಪ್ಟ್ ಎನ್ನಬಹುದು. ಕಷ್ಟಪಟ್ಟು ನಿರ್ದೇಶಿಸಿ, ನಟಿಸಿರುವ ಚಿತ್ರವು ಕೆವಲ ಒಂದೇ ಭಾಷೆಯಲ್ಲಿ ರಿಲೀಸ್ ಆಗುವುದಕ್ಕಿಂತ ಎಲ್ಲ ಭಾಷೆಗಳಲ್ಲಿ ರಿಲೀಸ್ ಆದರೆ, ದೇಶದಾದ್ಯಂತ ವೀಕ್ಷಕರು ತಮ್ಮ ಭಾಷೆಗಳಲ್ಲಿ ಆ ಚಿತ್ರಗಳನ್ನು ನೋಡಬಹುದು. ಇದರಿಂದ ಸಿನಿಮಾದ ಗಳಿಕೆಯೂ ಹೆಚ್ಚಾಗುತ್ತದೆ. ಅಲ್ಲದೇ ರಿಮೆಕ್ ಸಮಸ್ಯೆಗಳೂ ಇರುವುದಿಲ್ಲ. ಈ ಸಾಲಿನಲ್ಲಿ ಈಗಾಗಲೇ ಕನ್ನಡದ ಸುದೀಪ್ ಮತ್ತು ಬಾಲಿವುಡ್ ಬಾದ್ ಷಾ ಸಲ್ಮಾನ್ ಖಾನ್ ನಟನೆಯ ದಬಾಂಗ್3, ತ್ರಿಬಲ್ ಆರ್, ಪುಷ್ಪ ಹೀಗೆ ಹಲವಾರು ಚಿತ್ರಗಳು ಸೇರಿವೆ.

ಇದೀಗ ಈ ಸಾಲಿಗೆ ಮತ್ತೊಬ್ಬ ಬಾಲಿವುಡ್ ನ ಹೆಸರಾಂತ ನಟರು ಸೇರುತ್ತಿದ್ದಾರೆ. ಹೌದು ಅಲಿ ಅಬ್ಬಾಸ್ ಜಾಫರ್ ಆಕ್ಷನ್ ಕಟ್ ಹೇಳಿರುವ ಬಡೆಮಿಯಾನ್ ಚೋಟೆಮಿಯಾನ್ ಚಿತ್ರದಲ್ಲಿ ಅಕ್ಷಯ್ ಕುಮಾರ್ ಮತ್ತು ಟೈಗರ್ ಶ್ರಾಫ್ ಒಟ್ಟಿಗೆ ನಟಿಸುತ್ತಿದ್ದಾರೆ. ಅಕ್ಷಯ್ ಕುಮಾರ್ ಮತ್ತು ಟೈಗರ್ ಶ್ರಾಫ್ ಅವರು ಪೂಜಾ ಎಂಟರ್ಟೈನ್ಮೆಂಟ್ ನ ಬಡೆಮಿಯಾನ್ ಚೋಟೆಮಿಯಾನ್ ಚಿತ್ರದ ಮೂಲಕ ಒಂದೇ ಸ್ಕ್ರೀನ್ನಲ್ಲಿ ಮೊದಲ ಬಾರಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಇಬ್ಬರು ಘಟಾನುಘಟಿಗಳ ಆನ್ ಸ್ಕ್ರೀನ್ ಕೆಮೆಸ್ಟ್ರಿ ಹೇಗಿರಬಹುದು ಎಂದು ನೆನೆಸಿಕೊಂಡರೆ ಮೈ ನವೀರೇಳುತ್ತದೆ. 2023ರ ಕ್ರಿಸ್ ಮಸ್ಗೆ ಈ ಚಿತ್ರ ರಿಲೀಸ್ ಆಗಲಿದ್ದು, ಇನ್ನೊಂದು ವಿಶೇಷತೆಯೆಂದರೆ ಈ ಚಿತ್ರ ಕನ್ನಡದಲ್ಲೂ ರಿಲೀಸ್ ಆಗಲಿದೆ. ಈ ಬಗ್ಗೆ ಬಿಎಮ್ ಸಿಎಮ್ ಅಂದರೆ ಬಡೆಮಿಯಾನ್ ಚೋಟೆಮಿಯಾನ್ ಚಿತ್ರತಂಡ ಅಧಿಕೃತವಾಗಿ ಘೋಷಿಸಿದ್ದಾರೆ.

%d bloggers like this: