ಕನ್ನಡದ ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ಚಿತ್ರಕ್ಕೆ ನಾಯಕ ನಟಿ ಇವರೇ

ಕೆಜಿಎಫ್ ಸಿನಿಮಾದ ಬಳಿಕ ಪ್ಯಾನ್ ಇಂಡಿಯಾ ಸಿನಿಮಾಗಳ ಕ್ರೇಜ್ ಶುರುವಾಗಿದೆ. ಮಾತೃ ಭಾಷೆಯಲ್ಲಿ ನಿರ್ಮಿತವಾದ ಚಿತ್ರ ಕೇವಲ ಆ ಭಾಷೆಯ ಜನರನ್ನಷ್ಟೇ ತಲುಪುತ್ತದೆ. ಅದೇ ಪ್ಯಾನ್ ಇಂಡಿಯಾ ಸಿನಿಮಾಗಳು ಬೇರೆ ಭಾಷೆಯ ಸಿನಿ ಪ್ರೇಮಿಗಳವರೆಗೂ ತಲುಪುತ್ತದೆ. ಬೇರೆ ಬೇರೆ ಭಾಷೆಗಳಲ್ಲಿ ಸಿನಿಮಾಗಳು ಡಬ್ ಆಗಿ ಏಕಕಾಲಕ್ಕೆ ರಿಲೀಸ್ ಆಗುವುದರಿಂದ, ಬೇರೆ ಭಾಷೆಯ ಅಭಿಮಾನಿಗಳು ಹುಟ್ಟಿಕೊಳ್ಳುವುದಲ್ಲದೆ, ಕಲೆಕ್ಷನ್ ಕೂಡ ದುಪ್ಪಟ್ಟಾಗುತ್ತದೆ ಎಂಬುದು ಗೊತ್ತಿರುವ ವಿಷಯ. ಹೀಗಾಗಿ ಇತ್ತೀಚಿಗೆ ನಿರ್ದೇಶಕರು ಡೈರೆಕ್ಟ್ ಆಗಿ ಪ್ಯಾನ್ ಇಂಡಿಯನ್ ಸಿನಿಮಾಗಳತ್ತ ಬಾಣ ಬೀಸುತ್ತಿದ್ದಾರೆ. ಕೆಜಿಎಫ್ ಸಿನಿಮಾ ನಮ್ಮ ಸ್ಯಾಂಡಲ್ವುಡ್ ಹೆಸರನ್ನು ಕೇವಲ ದೇಶದಾದ್ಯಂತ ಮಾತ್ರವಲ್ಲದೆ, ಇಡೀ ಜಗತ್ತು ನಮ್ಮ ಕನ್ನಡ ಸಿನಿ ರಂಗದತ್ತ ತಿರುಗಿ ನೋಡುವಂತೆ ಮಾಡಿದ ಸಿನಿಮಾ.

ಈಗ ಕೆಜಿಎಫ್ ನಂತರ ಮತ್ತೊಂದು ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾ ಸಾಕಷ್ಟು ಕ್ರೇಜ್ ಹುಟ್ಟಿಹಾಕಿದೆ. ಹೌದು ರಿಯಲ್ ಸ್ಟಾರ್ ಉಪೇಂದ್ರ ಅವರು ಅಭಿನಯಿಸುತ್ತಿರುವ ಸಿನಿಮಾ ಈಗ ಎಲ್ಲೆಡೆ ಸಾಕಷ್ಟು ಕ್ರೇಜ್ ಹುಟ್ಟುಹಾಕಿದೆ. ಸದ್ಯಕ್ಕೆ ಎಲ್ಲಾ ಭಾಷೆಗಳಲ್ಲೂ ಸಕ್ಕತ್ ಸೌಂಡು ಮಾಡುತ್ತಿರುವ ಕಬ್ಜ ಸಿನಿಮಾವನ್ನು ಆರ್ ಚಂದ್ರು ಅವರು ನಿರ್ದೇಶನ ಮತ್ತು ನಿರ್ಮಾಣ ಮಾಡುತ್ತಿದ್ದಾರೆ. ಕೆ ಜಿ ಶ್ರೀನಿವಾಸ್ ಸಿನಿಮಾ ಬಳಿಕ ಅದ್ದೂರಿಯಾಗಿ ತಯಾರಾಗುತ್ತಿರುವ ಪ್ಯಾನ್ ಇಂಡಿಯಾ ಸಿನಿಮಾ ಇದು ಎಂಬ ಮಾತು ಕೇಳಿಬರುತ್ತಿದೆ. ಕೆಜಿಎಫ್ ಸಿನಿಮಾದ ಬಳಿಕ ಕಬ್ಜ ಚಿತ್ರ ಬೇರೆಬೇರೆ ಚಿತ್ರರಂಗಗಳಲ್ಲಿ ಸಾಕಷ್ಟು ಕ್ರೇಜ್ ಹುಟ್ಟುಹಾಕಿದೆ. ಮುಂಬೈನಲ್ಲಿ ಬೇಡಿಕೆ ಇರುವ ಈ ಚಿತ್ರದಲ್ಲಿ ಕನ್ನಡದ ತಂತ್ರಜ್ಞರೇ ಕಾರ್ಯನಿರ್ವಹಿಸುತ್ತಿದ್ದಾರೆ ಎಂಬುದು ಹೆಗ್ಗಳಿಕೆ.

ಕನ್ನಡದ ತಂಡ ಇದೇ ರೀತಿ ಮಿಂಚಲಿ ಎಂಬುದು ಎಲ್ಲರ ಆಶಯ. ಒಂದಲ್ಲ ಎರಡಲ್ಲ ಬರೋಬ್ಬರಿ ಏಳು ಭಾಷೆಗಳಲ್ಲಿ ತಯಾರಾಗುತ್ತಿರುವ ಸಿನಿಮಾ ಕಬ್ಜ ಎಂಬುದು ಒಂದೆಡೆಯಾದರೆ, ಅದ್ದೂರಿ ತಾರಾಬಳಗದಲ್ಲಿ ಈ ಚಿತ್ರವನ್ನು ಚಿತ್ರೀಕರಿಸಲಾಗಿದೆ ಎಂಬುದು ಇನ್ನೊಂದು ವಿಶೇಷ. ಸಾಕಷ್ಟು ಸೆನ್ಸೇಶನ್ ಕ್ರಿಯೇಟ್ ಮಾಡಿದ ಈ ಚಿತ್ರಕ್ಕೆ ರವಿ ಬಸ್ರೂರು ಸಂಗೀತ ನೀಡಿದ್ದಾರೆ. ಶಿವಕುಮಾರ್ ಕಲಾ ನಿರ್ದೇಶನ ಮಾಡಿದ್ದಾರೆ. ಬಹುತೇಕ ಕೆಜಿಎಫ್ ತಾಂತ್ರಿಕ ಬಳಗವೇ ಈ ಚಿತ್ರದಲ್ಲಿ ಮುಂದುವರೆದಿದೆ. ಬಹುಕೋಟಿ ವೆಚ್ಚದಲ್ಲಿ ತಯಾರಾಗುತ್ತಿರುವ ಈ ಸಿನಿಮಾದ ಕೊನೆಯ ಹಂತದ ಚಿತ್ರೀಕರಣ ಬೆಂಗಳೂರು ಹಾಗೂ ಹೈದರಾಬಾದಿನಲ್ಲಿ ನಡೆಯುತ್ತಿದೆ.

ಇಷ್ಟೆಲ್ಲಾ ಸುದ್ದಿಯಲ್ಲಿರುವ ಕಬ್ಜ ಚಿತ್ರಕ್ಕೆ ನಾಯಕಿ ಯಾರು ಎಂಬ ಸುದ್ದಿ ಎಲ್ಲೆಡೆ ಕೇಳಿಬರುತ್ತಿತ್ತು. ಈ ಚಿತ್ರಕ್ಕೆ ಅವರು ನಾಯಕಿ ಇವರು ನಾಯಕಿ ಎಂದೆಲ್ಲ ಸುಳ್ಳು ಸುದ್ದಿಗಳು ಹರಿದಾಡುತ್ತಿದ್ದವು. ಆದರೆ ಅದಕ್ಕೀಗ ನಿರ್ದೇಶಕ ಚಂದ್ರು ಅವರು ಫುಲ್ ಸ್ಟಾಪ್ ಇಟ್ಟಿದ್ದಾರೆ. ಕಬ್ಜ ಚಿತ್ರದ ಮುಹೂರ್ತದ ಸಮಯದಲ್ಲಿ ಚಂದ್ರು ಅವರು ದಕ್ಷಿಣ ಭಾರತದ ಪ್ರಮುಖ ನಾಯಕಿಯನ್ನೇ ಆಯ್ಕೆ ಮಾಡುತ್ತೇನೆ ಎಂದು ಹೇಳಿದ್ದರು. ಇದೀಗ ಚಂದ್ರು ಅವರು ತಮ್ಮ ಮಾತನ್ನು ಉಳಿಸಿಕೊಂಡಿದ್ದಾರೆ. ಹೌದು ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಚಿತ್ರಗಳಲ್ಲಿ ನಟಿಸಿರುವ ಶ್ರೀಯಾ ಅವರು ಬಹು ವರ್ಷಗಳ ನಂತರ ಮತ್ತೆ ಕನ್ನಡಕ್ಕೆ ಹಿಂತಿರುಗುತ್ತಿದ್ದಾರೆ. ಕಬ್ಜ ಸಿನಿಮಾದಲ್ಲಿ ಎರಡು ಪ್ರಮುಖ ನಾಯಕಿಯರ ಪಾತ್ರವಿದ್ದು, ಈ ಪೈಕಿ ಒಬ್ಬರನ್ನು ಮಾತ್ರ ರಿವೀಲ್ ಮಾಡಲಾಗಿದೆ.

ಶ್ರೀಯಾ ಅವರು ತ್ರಿಬಲ್ ಆರ್ ಹಾಗೂ ಅಜಯ್ ದೇವ್ಗನ್ ಜೊತೆ ಬಾಲಿವುಡ್ ನಲ್ಲಿ ನಟಿಸುತ್ತಿದ್ದು ಸದ್ಯಕ್ಕೆ ಬಹುಬೇಡಿಕೆಯ ನಟಿಯರಲ್ಲಿ ಒಬ್ಬರು. ಈ ಬಗ್ಗೆ ಮಾತನಾಡಿದ ಶ್ರೀಯಾ ಅವರು ಸಿನಿಮಾ ಕಥೆ ಕೇಳಿದ ತಕ್ಷಣ ಖುಷಿಯಿಂದ ಪ್ರಾಜೆಕ್ಟ್ ಗೆ ಸೈನ್ ಮಾಡಿದ್ದೇನೆ ಎಂದು ಹೇಳಿದರು. ಇದೀಗ ಶ್ರೀಯಾ ಅವರ ಫಸ್ಟ್ ಲುಕ್ ರಿಲೀಸ್ ಆಗಿದ್ದು ಈ ಚಿತ್ರದಲ್ಲಿ ಉಪೇಂದ್ರ ಅವರಿಗೆ ಶ್ರೀಯಾ ಜೋಡಿಯಾಗಲಿದ್ದಾರೆ. ಉಪ್ಪಿ ಹಾಗೂ ಶ್ರೇಯಾ ಅವರ ಕಾಂಬಿನೇಷನ್ ತುಂಬಾ ಚೆನ್ನಾಗಿರುತ್ತದೆ ಎಂಬುದು ಪ್ರೇಕ್ಷಕರ ಅನಿಸಿಕೆ. ಪ್ಯಾನ್ ಇಂಡಿಯಾ ಸಿನಿಮಾಗಳು ಎಂದರೆ ಸಾಕಷ್ಟು ಸಮಯ ತೆಗೆದುಕೊಳ್ಳುವುದು ಸರ್ವೇಸಾಮಾನ್ಯ.

ನಮ್ಮ ಕೆಜಿಎಫ್ ಚಿತ್ರ ಕೂಡ ಮೂರು ವರ್ಷಗಳ ಸಮಯವನ್ನು ತೆಗೆದುಕೊಂಡಿತ್ತು. ತ್ರಿಬಲ್ ಆರ್ ಸಿನಿಮಾ ಬರೋಬ್ಬರಿ ನಾಲ್ಕು ವರ್ಷ ತೆಗೆದುಕೊಂಡಿತು. ಇದರಂತೆಯೇ ಕಬ್ಜ ಸಿನಿಮಾ ಕೂಡ ಈ ಸತತ ಎರಡು ವರ್ಷಗಳಿಂದ ಶೂಟಿಂಗ್ ನಡೆಸುತ್ತಿದ್ದು, ಸದ್ಯಕ್ಕೆ ಕೊನೆಯ ಹಂತದ ಚಿತ್ರೀಕರಣದಲ್ಲಿದೆ. ಕಬ್ಜಾ ಸಿನಿಮಾ ನೋಡುವುದಕ್ಕಾಗಿ ಪ್ರೇಕ್ಷಕರು ಕಾತುರದಿಂದ ಕಾದು ಕುಳಿತಿದ್ದಾರೆ. ಕೇವಲ ಅಭಿಮಾನಿಗಳಷ್ಟೇ ಅಲ್ಲದೆ ಕನ್ನಡದ ನಟರು ಕೂಡ ಈ ಚಿತ್ರಕ್ಕಾಗಿ ಕಾಯುತ್ತಿದ್ದೇನೆ ಎಂದು ಹೇಳಿದ್ದಾರೆ. ಹೌದು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಸಹ ಸಿನಿಮಾವನ್ನು ಬೇಗ ರಿಲೀಸ್ ಮಾಡಿ ಎಂದು ಒತ್ತಾಯಿಸಿದ್ದಾರೆ. ಕೊನೆಯ ಹಂತದ ಚಿತ್ರೀಕರಣದ ಬಾಗಗಳು ಮಾತ್ರ ಬಾಕಿ ಉಳಿದಿದ್ದು, ಇದೇ ವರ್ಷ ಅದ್ದೂರಿಯಾಗಿ ಈ ಸಿನಿಮಾವನ್ನು ಬಿಡುಗಡೆ ಮಾಡಲು ಆರ್ ಚಂದ್ರು ರೆಡಿಯಾಗಿದ್ದಾರೆ.

%d bloggers like this: