ಕನ್ನಡದ ದೊಡ್ಡ ಸ್ಟಾರ್ ನ ಮಗ ಸ್ಯಾಂಡಲ್ವುಡ್ಗೆ ಎಂಟ್ರಿ

ಸ್ಯಾಂಡಲ್ ವುಡ್ ಬಿಗ್ ಸ್ಟಾರ್ ಮಗ ಸದ್ದಿಲ್ಲದೇ ಭರ್ಜರಿ ತಯಾರಿಯಾಗಿದ್ದು, ಅದ್ಜೂರಿಯಾಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಆಗುತ್ತಿದ್ದಾರೆ. ಈಗಾಗಲೇ ಇವರ ಅಭಿನಯದ ಈ ಹೊಸ ಚಿತ್ರದ ಹಾಡುಗಳು ರಿಲೀಸ್ ಆಗಿ ಯುಟ್ಯುಬ್ ನಲ್ಲಿ ಉತ್ತಮ ರೆಸ್ಪಾನ್ಸ್ ಪಡೆದಿದೆ. ನಿರ್ದೇಶಕ ಸಹನಾಮೂರ್ತಿ ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಈ ಚಿತ್ರದ ಶೂಟಿಂಗ್ ಕೊನೆಯ ಹಂತ ತಲುಪಿದ್ದು, ಮೇ ತಿಂಗಳು ಚಿತ್ರಮಂದಿರಕ್ಕೆ ತರಲು ರೆಡಿಯಾಗಿದ್ದಾರೆ. ಎರಡು ಹಾಡಿನ ಚಿತ್ರೀಕರಣಕ್ಕಾಗಿ ಈ ಚಿತ್ರತಂಡ ಆಸ್ಟ್ರೇಲಿಯಾದಲ್ಲಿ ಪಯಣ ಬೆಳೆಸಲಿದೆ. ಕೋವಿಡ್ ಪರಿಣಾಮ ಇಲ್ಲದೆ ಹೋಗಿದ್ದರೆ ಈಗಾಗಲೇ ಈ ಸ್ಟಾರ್ ಪುತ್ರ ಸ್ಯಾಂಡಲ್ ವುಡ್ ನಲ್ಲಿ ಮಿಂಚುತ್ತಿದ್ದರು, ಹಾಗಾದರೆ ಯಾರು ಸ್ಟಾರ್, ಆ ಸ್ಟಾರ್ ಮಗ ಚೊಚ್ಚಲ ಬಾರಿಗೆ ಅಭಿನಯಿಸುತ್ತಿರುವ ಚಿತ್ರದ ಹೆಸರೇನು ಎಂದು ಗೊಂದಲವಾಗುತ್ತಿದ್ದರೆ, ಪ್ಲೀಸ್ ಮಮ್ಮಿ ಹಾಡು ಕೇಳಿದರೆ ನಿಮಗೆ ತಿಳಿಯುತ್ತದೆ.

ಹೌದು ಆ ಸ್ಟಾರ್ ನಟ ಬೇರಾರು ಅಲ್ಲ, ಚಂದನವನದ ಎವರಗ್ರೀನ್ ಹಾಡುಗಳ ಸರದಾರ ಕ್ರೇಜಿ಼ಸ್ಟಾರ್ ವಿ.ರವಿಚಂದ್ರನ ಅವರ ದ್ವಿತೀಯ ಪುತ್ರ ವಿಕ್ರಮ್ ರವಿಚಂದ್ರನ್! ವಿಕ್ರಮ್ ಚಿತ್ರರಂಗಕ್ಕೆ ಬರಲು ಸಾಕಷ್ಟು ತಯಾರಿ ನಡೆಸಿದ್ದಾರೆ. ರಂಗಭೂಮಿಯಲ್ಲಿ ಒಂದಷ್ಟು ವರ್ಷ ಅನುಭವ ಪಡೆದು ಬೀದಿ ನಾಟಕಗಳನ್ನು ಮಾಡಿದ್ದಾರೆ. ಡ್ಯಾನ್ಸ್, ಫೈಟ್ ವಿಚಾರದಲ್ಲಿಯೂ ಸಹ ತರಬೇತಿ ಪಡೆದು ನಟನಿಗೆ ಬೇಕಾದ ಎಲ್ಲಾ ರೀತಿಯ ಕೌಶಲ್ಯಗಳನ್ನು ಕರಗತ ಮಾಡಿಕೊಂಡಿದ್ದಾರೆ. ವಿಕ್ರಮ್ ಮೊದಲ ಬಾರಿಗೆ ಅಭಿನಯಿಸುತ್ತಿರುವ ಈ ಚಿತ್ರದ ಹೆಸರು ತ್ರಿವಿಕ್ರಮ, ಈಗಾಗಲೇ ಈ ಚಿತ್ರದ ಟೀಸರ್ ಬಿಡುಗಡೆಯಾಗಿ ಫೈರ್ ಬ್ರ್ಯಾಂಡ್ ನಟನಾಗುವ ಲಕ್ಷಣ ಹೊಂದಿದ್ದಾರೆ ಎಂದು ಗಾಂಧಿನಗರ ಮಾತನಾಡಿಕೊಳ್ಳುತ್ತಿದೆ.

ಇನ್ನು ಈ ಚಿತ್ರವನ್ನು ಸಹನಾಮೂರ್ತಿ ಡೈರೆಕ್ಟ್ ಮಾಡುತ್ತಿದ್ದು, ಮ್ಯುಸಿಕ್ ಮಾಂತ್ರಿಕ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ಇನ್ನು ತ್ರಿವಿಕ್ರಮ ಚಿತ್ರದ ಪ್ಲೀಸ್ ಮಮ್ಮಿ ಸಾಂಗ್ ಹಿಟ್ ಆಗಿದೆ. ಇದೊಂದು ಹೈವೋಲ್ಟೇಜ್ ಲವ್ ಸ್ಟೋರಿ ಸಿನಿಮಾ ಆಗಿದ್ದು, ನಾಯಕಿಯಾಗಿ ಮಾಡೆಲ್ ಆಕಾಂಕ್ಷಾ ಶರ್ಮಾ ಮೊಟ್ಟಮೊದಲ ಬಾರಿಗೆ ಬಣ್ಣ ಹಚ್ಚಿದ್ದಾರೆ. ಇನ್ನು ಈ ಚಿತ್ರದಲ್ಲಿ ಚಿಕ್ಕಣ್ಣ, ಸುಚೆಂದ್ರ ಪ್ರಸಾದ್, ಶಿವಮಣಿ, ಆದಿಲೋಕೇಶ್, ಸಾಧುಕೋಕಿಲ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಲ್ಲವು ಅಂದುಕೊಂಡಂತೆ ಆದರೆ ಮೇ ತಿಂಗಳಲ್ಲಿ ಚಿತ್ರವನ್ನು ಬಿಡುಗಡೆ ಮಾಡುತ್ತೇವೆ ಎಂದು ನಿರ್ಮಾಪಕರಾದ ಸೋಮಣ್ಣ ಮತ್ತು ಸುರೇಶ್ ಹೇಳಿದ್ದಾರೆ.

%d bloggers like this: