ಕನ್ನಡದ ಈ ಹಿಟ್ ಚಿತ್ರವನ್ನು ನೋಡಿ ಹಾಡಿ ಹೊಗಳಿದ ಭಾರತೀಯ ಚಿತ್ರರಂಗದ ಪ್ರಸಿದ್ಧ ನಿರ್ದೇಶಕ

2017ರಲ್ಲಿ ಸಾಕಷ್ಟು ಕುತೂಹಲ ಹುಟ್ಟಿಸಿದ ಒಂದು ಮೊಟ್ಟೆಯ ಕಥೆಯ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ರಾಜ್ ಬಿ ಶೆಟ್ಟಿ, ಒಂದು ಮೊಟ್ಟೆಯ ಕಥೆ ಚಿತ್ರದ ನಿರ್ದೇಶಕ ಹಾಗೂ ನಟ. ರಾಜ್ ಬಿ ಶೆಟ್ಟಿ ಒಂದು ವಿಭಿನ್ನ ಕಥೆ ಹಾಗೂ ಫ್ಯಾಮಿಲಿ ಎಂಟರ್ಟೈನ್ಮೆಂಟ್ ಸಿನೆಮಾವನ್ನು ಸ್ಯಾಂಡಲ್ವುಡ್ ಗೆ ನೀಡಿದ್ದರು. ಇನ್ನು ಕಿರಿಕ್ ಪಾರ್ಟಿ ಖ್ಯಾತಿಯ ರಿಷಬ್ ಶೆಟ್ಟಿ ಯಾರಿಗೇ ತಾನೇ ಗೊತ್ತಿಲ್ಲ ಹೇಳಿ. ಇವರು ಸ್ಯಾಂಡಲ್ವುಡ್ನ ಯಶಸ್ವಿ ಯುವ ನಿರ್ದೇಶಕರು ಎಂದರೆ ತಪ್ಪಾಗಲಾರದು. ರಾಜ್ ಬಿ ಶೆಟ್ಟಿ ಹಾಗೂ ರಿಷಬ್ ಶೆಟ್ಟಿ ಯಾವಾಗಲೂ ವಿಭಿನ್ನ ಚಿತ್ರಕತೆಗಳ ಮೂಲಕ ನಮ್ಮನ್ನು ರಂಜಿಸಿದ್ದಾರೆ. ಇನ್ನು ಈ ಇಬ್ಬರು ಯುವ ನಿರ್ದೇಶಕರು ಒಟ್ಟಿಗೆ ನಿರ್ದೇಶಸಿ, ನಟಿಸಿರುವ ಚಿತ್ರವೆಂದರೆ ಆ ಚಿತ್ರದ ಬಗ್ಗೆ ಸೀನಿಪ್ರೇಮಿಗಳಿಗೆ ಕುತೂಹಲ ಹೆಚ್ಚಾಗುವುದರಲ್ಲಿ ಸಂದೇಹವೇನಿಲ್ಲ.

ರಾಜ್ ಬಿ ಶೆಟ್ಟಿ ಮತ್ತು ರಿಷಬ್ ಶೆಟ್ಟಿ ಒಟ್ಟಿಗೆ ಅಭಿನಯಿಸಿದ ಗರುಡ ಗಮನ ವೃಷಭ ವಾಹನ ಚಿತ್ರವು ಅಭಿಮಾನಿಗಳ ನಿರೀಕ್ಷೆಯನ್ನೂ ಮೀರಿ ಮನರಂಜಿಸುವಲ್ಲಿ ಯಶಸ್ವಿಯಾಗಿದೆ. ಗರುಡ ಗಮನ ವೃಷಭ ವಾಹನ ಚಿತ್ರವು ಕಳೆದ ವರ್ಷ ನವೆಂಬರ್ 19ರಲ್ಲಿ ರಿಲೀಸ್ ಆಗಿತ್ತು. ಇನ್ನೂ ಕೂಡ ಯಶಸ್ವಿ ಪ್ರದರ್ಶನ ನೀಡುತ್ತಿದೆ. ಸಿನಿ ಪ್ರೇಮಿಗಳಿಗೆ ಮಾತ್ರವಲ್ಲದೇ, ಸಿನಿಮಾರಂಗದ ಸೆಲೆಬ್ರೇಟಿ ಗಳಿಗೂ ಕೂಡ ಈ ಚಿತ್ರ ಇಷ್ಟವಾಗಿದೆ. ಕಳೆದ ವರ್ಷ ನವೆಂಬರ್ 19ರಂದು ಥಿಯೇಟರ್ ಗಳಲ್ಲಿ ರಿಲೀಸ್ ಆಗಿದ್ದ ಗರುಡ ಗಮನ ವೃಷಭ ವಾಹನ ಚಿತ್ರವು, ಸಂಕ್ರಾಂತಿ ಹಬ್ಬದ ಪ್ರಯುಕ್ತ ಜಿ5 ಒಟಿಟಿ ಯಲ್ಲಿ ರಿಲೀಸ್ ಆಗಿತ್ತು. ಇದೀಗ ಈ ಸಿನಿಮಾ ರಿಲೀಸ್ ಆದ ಮೂರೇ ದಿನಕ್ಕೆ ದಾಖಲೆ ಸೃಷ್ಟಿಸಿದೆ. ಹೌದು ಈ ಸಿನೆಮಾ ಮೊದಲ ಮೂರು ದಿನಗಳಲ್ಲಿ ಬರೋಬ್ಬರಿ ಎಂಟು ಕೋಟಿ ನಿಮಿಷ ವೀಕ್ಷಣೆ ಕಂಡಿದೆ. ಕೇವಲ ಕನ್ನಡ ಮಾತ್ರವಲ್ಲ ಬೇರೆ ಭಾಷೆಗಳ ಸಿನಿಪ್ರೇಮಿಗಳು ಕೂಡ ಈ ಚಿತ್ರವನ್ನು ಮೆಚ್ಚುತ್ತಿದ್ದಾರೆ.

ಗರುಡ ಗಮನ ವೃಷಭ ವಾಹನ ಚಿತ್ರದ ಕಥೆ ಹಾಗೂ ನಿರ್ದೇಶನದ ಬಗ್ಗೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಖ್ಯಾತ ನಿರ್ದೇಶಕರಾಗಿರುವ ರಾಮ್ ಗೋಪಾಲ್ ವರ್ಮಾ ಅವರು ಈ ಚಿತ್ರದ ಬಗ್ಗೆ ಟ್ವೀಟ್ ಮಾಡಿದ್ದಾರೆ. ಚಿತ್ರದ ಕಥೆ ಹಾಗೂ ರಾಜ್.ಬಿ.ಶೆಟ್ಟಿ ಅವರ ಅಭಿನಯವನ್ನು ಒಂದಿಷ್ಟು ವಿಜ್ಞಾನ ಪದಗಳನ್ನು ಬಳಸಿ ಬಣ್ಣಿಸಿದ್ದಾರೆ. ಈ ಚಿತ್ರಕ್ಕೆ ಫಿದಾ ಆಗಿರುವ ಅವರು, ಸಿನಿಮಾ ಬೇರೊಂದು ಲೆವೆಲ್ ನಲ್ಲಿದೆ. ರಾಜ್ ಬಿ ಶೆಟ್ಟಿ ಅವರು ತಮ್ಮ ಪಾತ್ರಕ್ಕೆ ತಮ್ಮನ್ನು ತಾವು ಸಂಪೂರ್ಣವಾಗಿ ಅರ್ಪಿಸಿಕೊಂಡಿದ್ದಾರೆ. ಈ ಮೂಲಕ ಅವರು ಸಂಪೂರ್ಣ ರೂಪಾಂತರ ಹೊಂದಿದ್ದಾರೆ. ಇಡೀ ಚಿತ್ರವು ಅಲ್ಟ್ರಾ ಸ್ಕೋಪಿಕ್ ಎಂದು ಚಿತ್ರವನ್ನು ಹಾಡಿ ಹೊಗಳಿದ್ದಾರೆ. ಇನ್ನು ಮತ್ತೊಬ್ಬ ಬಾಲಿವುಡ್ ನ ಖ್ಯಾತ ನಿರ್ದೇಶಕ ಅನುರಾಗ್ ಕಶ್ಯಪ್ ಗರುಡ ಗಮನ ವೃಷಭ ವಾಹನ ಸಿನಿಮಾವನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

%d bloggers like this: