ಕನ್ನಡದ ಈ ಹೊಸ ಚಿತ್ರದಲ್ಲಿ ನಾಯಕನಾಗಿ ಉಪೇಂದ್ರ ಅವರ ಅಣ್ಣನ ಮಗ

ಕನ್ನಡದ ಸ್ಟಾರ್ ನಟನ ಮಗನೊಬ್ಬರು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಹೌದು ರಿಯಲ್ ಸ್ಟಾರ್ ಉಪೇಂದ್ರ ಅವರ ಅಣ್ಣನ ಮಗ ನಿರಂಜನ್ ಸುಧಿಂದ್ರ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಇತ್ತೀಚೆಗೆ ನಿರಂಜನ್ ಸುಧಿಂದ್ರ ಅಭಿನಯದ ಹಂಟರ್ ಸಿನಿಮಾದ ಮೊದಲ ಟೀಸರ್ ಬಿಡುಗಡೆ ಆಗಿದೆ. ಇದು ನಿರಂಜನ್ ಅವರ ಎರಡನೇ ಸಿನಿಮಾ ಆಗಿದೆ. ಹಾಗಿದ್ದರೆ ಇವರ ಮೊದಲ ಸಿನಿಮಾ ಯಾವುದು ಎಂದು ಯೋಚಿಸುವುದು ಬೇಡ. ಏಕೆಂದರೆ ಇವರ ಮೊದಲನೇ ಸಿನಿಮಾ ಇನ್ನೂ ರಿಲೀಸ್ ಆಗಿಲ್ಲ. ವಿಶೇಷವೆಂದರೆ ನಿರಂಜನ್ ಸುಧೀಂದ್ರ ಅವರು ಆಗಲೇ ಮೂರು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಸದ್ಯಕ್ಕೆ ನಿರಂಜನ್ ಅವರು ಸ್ಯಾಂಡಲ್ ವುಡ್ ನಲ್ಲಿ ಫುಲ್ ಬಿಸಿಯಾಗಿರುವ ನಟ ಎನ್ನಬಹುದು.

ಕನ್ನಡದ ಯಾವುದೇ ನಟನಿಗೂ ಆರಂಭದಲ್ಲಿ ಇಂಥದ್ದೊಂದು ಅವಕಾಶ ಸಿಕ್ಕಿಲ್ಲ ಎಂದು ಗಾಂಧಿನಗರದಲ್ಲಿ ಮಾತನಾಡಿಕೊಳ್ಳುತ್ತಿದ್ದಾರೆ. ಇವರ ನಟನೆಯ ಯಾವುದೇ ಒಂದು ಚಿತ್ರ ಬಿಡುಗಡೆಯಾಗಿದ್ದರೂ ಕೂಡ, ಬ್ಯಾಕ್ ಟು ಬ್ಯಾಕ್ ಆಫರ್ ಗಳನ್ನು ಹೊಂದಲು ನಿರಂಜನ್ ಅವರ ಪರ್ಸನಾಲಿಟಿ, ಹೈಟ್, ಹಾಗೂ ನಟನೆಯೇ ಕಾರಣ ಎಂದು ಕನ್ನಡದ ನಿರ್ಮಾಪಕರು ಅವಕಾಶಗಳನ್ನು ನೀಡುತ್ತಿದ್ದಾರೆ. ಇತ್ತೀಚೆಗೆ ನಿರಂಜನ್ ಅಭಿನಯದ ಹಂಟರ್ ಸಿನಿಮಾದ ಫಸ್ಟ್ ಲುಕ್ ಟೀಸರ್ ಬಿಡುಗಡೆ ಕಾರ್ಯಕ್ರಮದಲ್ಲಿ ಉಪೇಂದ್ರ ಹಾಗೂ ಪ್ರಿಯಾಂಕಾ ಉಪೇಂದ್ರ ಅವರು ಅಣ್ಣನ ಮಗನ ಸಿನಿಮಾದ ಫಸ್ಟ್ ಲುಕ್ ಹಾಗೂ ಟೈಟಲ್ ರಿಲೀಸ್ ಮಾಡಿ ಶುಭ ಹಾರೈಸಿದರು.

ಹಂಟರ್ ಸಿನಿಮಾದ ಕಾರ್ಯಕ್ರಮದಲ್ಲಿ ನಿರಂಜನ್ ಅವರ ಬಗ್ಗೆ ಮಾತನಾಡಿದ ಉಪೇಂದ್ರ ಅವರು ತಮ್ಮ A ಸಿನಿಮಾದ ಮೆಲುಕು ಹಾಕಿದರು. ಉಪೇಂದ್ರ ಅವರು ನಾಯಕ ನಟನಾಗಿ ನಟಿಸಿದ ಎ ಸಿನಿಮಾದ ಒಂದು ದೃಶ್ಯದಲ್ಲಿ ನಿರಂಜನ್ ಅವರು ನಟಿಸಿದ್ದಾರೆ ಎಂಬ ಗುಟ್ಟನ್ನು ಉಪೇಂದ್ರ ರಿವೀಲ್ ಮಾಡಿದರು. ಹೌದು ಎ ಚಿತ್ರದಲ್ಲಿ ಚಿಕ್ಕ ಮಗು ಮಲಗಿರುವ ದೃಶ್ಯವಿದೆ. ಆ ಮಗುವೇ ನಿರಂಜನ್. ಅಂದಿನಿಂದ ಈ ಮಗುವಿಗೆ ಸಿನಿಮಾ ಹಾಗೂ ನಾಟಕಗಳಲ್ಲಿ ಆಸಕ್ತಿ ಬೆಳೆಯಿತು. ಒಳ್ಳೆಯ ನಟನಾಗಲು ತುಂಬಾ ಶ್ರಮ ಪಡುತ್ತಿದ್ದಾನೆ ಎಂದು ನಿರಂಜನ್ ಅವರ ಬಗ್ಗೆ ಉಪೇಂದ್ರ ಮಾತನಾಡಿದರು. ಇನ್ನು ಈ ಸಂದರ್ಭದಲ್ಲಿ ನಿರಂಜನ್ ಅವರು ಕೂಡ ಹಂಟರ್ ಸಿನಿಮಾದ ಫಸ್ಟ್ ಲುಕ್ ರಿಲೀಸ್ ಆಗಿದೆ.

ನಾನು ನಾಯಕನಾಗಿ ನಟಿಸಿರುವ ಯಾವುದೇ ಸಿನಿಮಾಗಳು ಇನ್ನೂ ತೆರೆಕಂಡಿಲ್ಲ. ನಿರ್ದೇಶಕ ಕೃಷ್ಣ ಅವರ ಕೆಲಸದ ಬಗ್ಗೆ ಎಷ್ಟು ಹೇಳಿದರೂ ಸಾಲದು. ಇನ್ನೂ ಚಂದನ್ ಶೆಟ್ಟಿ ಅವರು ಸಂಗೀತ ನೀಡುತ್ತಿರುವುದರಿಂದ ಎಲ್ಲಾ ಹಾಡುಗಳು ತುಂಬಾನೇ ಬ್ಯೂಟಿಫುಲ್ ಆಗಿ ಮೂಡಿಬಂದಿದೆ. ನಾನು ಈ ಚಿತ್ರದಲ್ಲಿ ಮಾಸ್ ಲುಕ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಇನ್ನು ಈ ಸಿನಿಮಾದ ನಾಯಕಿ ಸೌಮ್ಯ ಮೆನನ್ ಮೂಲತಹ ಕೇರಳದವರು. ಈ ಸಿನಿಮಾದ ಶೂಟಿಂಗ್ ಮುಗಿಯುವಷ್ಟರಲ್ಲಿ ನಾನು ಅವರಿಗೆ ಕನ್ನಡವನ್ನು ಕಲಿಸುತ್ತೇನೆ ಎಂದು ನಿರಂಜನ್ ಮಾತನಾಡಿದರು. ಹಂಟರ್ ಸಿನಿಮಾದಲ್ಲಿ ಪ್ರಕಾಶ್ ರಾಜ್, ನಾಜರ್, ಸುಮನ್, ಸಾಧುಕೋಕಿಲಾ ಮುಂತಾದ ದೊಡ್ಡ ದೊಡ್ಡ ಕಲಾವಿದರು ನಟಿಸುತ್ತಿದ್ದಾರೆ.

ವಿನಯ್ ಕೃಷ್ಣ ಅವರ ನಿರ್ದೇಶನ ಈ ಚಿತ್ರಕ್ಕಿದೆ. ಜಯಂತ್ ಕಾಯ್ಕಿಣಿ, ವಿ ನಾಗೇಂದ್ರಪ್ರಸಾದ್, ಚೇತನ್ ಕುಮಾರ್ ಹಾಗೂ ಚಂದನ್ ಶೆಟ್ಟಿ ಒಂದೊಂದು ಹಾಡುಗಳನ್ನು ಬರೆದಿದ್ದಾರೆ. ಕೆಜಿಎಫ್ ಖ್ಯಾತಿಯ ಶ್ರೀಕಾಂತ್ ಈ ಚಿತ್ರವನ್ನು ಎಡಿಟ್ ಮಾಡುತ್ತಿದ್ದು, ಮಹೇಶ್ ಅವರು ಕ್ಯಾಮೆರಾ ಹಿಡಿದಿದ್ದಾರೆ. ಇನ್ನು ಪರಿ ಹಾಗೂ ಸೀಸರ್ ಸಿನಿಮಾದ ಬಳಿಕ ಹಂಟರ್ ಚಿತ್ರವನ್ನು ತ್ರಿವಿಕ್ರಮ್ ಅವರು ನಿರ್ಮಿಸುತ್ತಿದ್ದು, ಸೀಸರ್ ಚಿತ್ರವನ್ನು ನಿರ್ದೇಶಿಸಿರುವ ವಿನಯ್ ಕೃಷ್ಣ ಅವರು ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಹಂಟರ್ ಚಿತ್ರ ಎಲ್ಲರಿಗೂ ಇಷ್ಟವಾಗುವಂತಹ ಕಾನ್ಸೆಪ್ಟ್. ಸಾಕಷ್ಟು ಕುತೂಹಲಗಳಿಂದ ಕೂಡಿರುವ ಈ ಕಥೆ, ಪ್ರೇಕ್ಷಕರು ಕುರ್ಚಿಯ ತುದಿಯಲ್ಲಿ ಕೂರುವಂತೆ ಮಾಡುತ್ತದೆ. ಕಳೆದ ಆರು ತಿಂಗಳಿಂದ ಈ ಚಿತ್ರಕ್ಕಾಗಿ ನಿರಂಜನ್ ಅವರು ಸಾಕಷ್ಟು ತಯಾರಿಯನ್ನು ನಡೆಸಿದ್ದಾರೆ ಎಂದು ವಿನಯ್ ಕೃಷ್ಣ ಮಾಹಿತಿ ನೀಡಿದ್ದಾರೆ.

%d bloggers like this: