ಕನ್ನಡದ ಹೆಸರಾಂತ ಧಾರಾವಾಹಿಯಿಂದ ಹೊರ ನಡೆದ ಗಗನ್ ಚಿನ್ನಪ್ಪ, ಬದಲಿಗೆ ಬೇರೆ ನಟ ಎಂಟ್ರಿ

ಬಹುತೇಕ ಧಾರಾವಾಹಿಗಳಲ್ಲಿ ಕಲಾವಿದರು ಆಗಾಗ ಬದಲಾವಣೆಗೊಳ್ಳುವುದು, ಧಾರಾವಾಹಿಯ ಮಧ್ಯದಲ್ಲಿ ಹೊರ ಹೋಗುವುದು ಸರ್ವೇ ಸಾಮಾನ್ಯವಾಗಿ ನಡೆಯುತ್ತಲೇ ಇರುತ್ತದೆ. ಅಂತೆಯೇ ಕಲರ್ಸ್ ಕನ್ನಡದ ಅಪಾರ ಜನಪ್ರಿಯತೆ ಪಡೆದಿರುವ ಮಂಗಳಗೌರಿ ಮದುವೆ ಸೀರಿಯಲ್ನ ನಾಯಕ ನಟ ಗಗನ್ ಚಿನ್ನಪ್ಪ ತಮ್ಮ ಕೆಲವು ವೈಯಕ್ತಿಕ ಕಾರಣಗಳಿಂದಾಗಿ ಧಾರಾವಾಹಿಯಿಂದ ಹೊರ ಬಂದಿದ್ದಾರೆ. ಆದರೆ ಕೆಲವು ಧಾರಾವಾಹಿಗಳ ಪಾತ್ರಗಳು ಪ್ರಮುಖವಾಗಿದ್ದು, ಮಹತ್ವವನ್ನು ಪಡೆದುಕೊಂಡಿರುತ್ತವೆ. ಆ ಪಾತ್ರಗಳಿಗೆ ತಕ್ಕಂತೆ ಜೀವ ತುಂಬಿ ನಟಿಸುತ್ತಿದ್ದ ಪಾತ್ರಧಾರಿಗಳು ಕೂಡ ವೀಕ್ಷಕರ ಮೇಲೆ ಅಷ್ಟೇ ಸೂಕ್ಷ್ಮವಾಗಿ ಮನ ಸೆಳೆದಿರುತ್ತಾರೆ. ಏಕಾಏಕಿ ತಮ್ಮ ನೆಚ್ಚಿನ ನಟ ಸೀರಿಯಲ್ ನಿಂದ ಹೊರ ನಡೆದರೆ ಮೊದಲಿಗೆ ನಕರಾತ್ಮಕ ಪರಿಣಾಮ ಉಂಟಾಗುವುದು ಆ ಧಾರಾವಾಹಿಯ ಮೇಲೆಯೇ.

ಅದು ಕೆಲವು ಧಾರಾವಾಹಿಗಳ ಕಥೆಯ ಮೇಲೆ ಅವಲಂಬನೆ ಆಗಿರುತ್ತದೆ. ಕಲರ್ಸ್ ಕನ್ನಡದಲ್ಲಿ ಮೂಡಿ ಬರುತ್ತಿರುವ ಎಲ್ಲಾ ಧಾರಾವಾಹಿಗಳು ಉತ್ತಮ ಮೇಕಿಂಗ್, ಕಥೆಯ ಮೂಲಕ ನಾಡಿನಾದ್ಯಂತ ಮನೆ ಮಾತಾಗಿವೆ. ಅವುಗಳಲ್ಲಿ ರಾಮ್ ಜೀ ನಿರ್ದೇಶನದ ಮಂಗಳಗೌರಿ ಮದುವೆ ಕೂಡ ಒಂದಾಗಿದೆ. ಜನಪ್ರಿಯತೆ ಮತ್ತು ಟಿ.ಆರ್.ಪಿ ವಿಚಾರದಲ್ಲಿ ಟಾಪ್ ಐದು ಧಾರಾವಾಹಿಗಳಲ್ಲಿ ಈ ಮಂಗಳಗೌರಿ ಮದುವೆ ಧಾರಾವಾಹಿ ಕೂಡ ಒಂದು. ಇದರಲ್ಲಿ ನಟ ಗಗನ್ ಚಿನ್ನಪ್ಪ ರಾಜೀವ ಎಂಬ ಖಡಕ್ ಪೊಲೀಸ್ ಪಾತ್ರದಲ್ಲಿ ನಟಿಸುತ್ತಿದ್ದರು. ತಮ್ಮ ನಟನೆಯ ಮೂಲಕ ಅಪಾರ ಜನ ಮೆಚ್ಚುಗೆ ಗಳಿಸಿ ಸಾಕಷ್ಟು ಅಭಿಮಾನಿಗಳನ್ನು ಕೂಡ ಗಳಿಸಿಕೊಂಡಿದ್ದರು. ಇದೀಗ ನಟ ಗಗನ್ ಚಿನ್ನಪ್ಪ ತಮ್ಮ ವೈಯಕ್ತಿಕ ಕಾರಣಗಳಿಂದ ಮಂಗಳಗೌರಿ ಮದುವೆ ಧಾರಾವಾಹಿಯಿಂದ ಹೊರ ಬಂದಿದ್ದಾರಂತೆ.

ಈಗಾಗಲೇ ತಮ್ಮ ಶೆಡ್ಯೂಲ್ ನ ಚಿತ್ರೀಕರಣವನ್ನು ಕೂಡ ಮುಗಿಸಿದ್ದಾರಂತೆ. ಇನ್ನು ಗಗನ್ ಚಿನ್ನಪ್ಪ ಅವರು ನಿರ್ವಹಿಸುತ್ತಿದ್ದ ರಾಜೀವ್ ಪಾತ್ರವನ್ನ ಸ್ಯಾಂಡಲ್ ವುಡ್ ನಟ ಪೃಥ್ವಿ ನಂದನ್ ಮಾಡಲಿದ್ದಾರೆ ಎಂದು ಧಾರಾವಾಹಿ ತಂಡ ತಿಳಿಸಿದೆ. ನಟ ಪೃಥ್ವಿ ನಂದನ್ ಪ್ರೀತಮ್ ಗುಬ್ಬಿ ನಿರ್ದೇಶನದಲ್ಲಿ 2016 ರಲ್ಲಿ ತೆರೆಕಂಡ ನಾನು ಮತ್ತು ವರಲಕ್ಷ್ಮಿ ಚಿತ್ರದಲ್ಲಿ ನಾಯಕ ನಟರಾಗಿ ಸ್ಯಾಂಡಲ್ ವುಡ್ಗೆ ಎಂಟ್ರಿ ಕೊಟ್ಟಿದ್ದರು. ಇದೀಗ ಬೆಳ್ಳಿತೆರೆ ಬಿಟ್ಟು ಕಿರುತೆರೆಗೆ ಎಂಟ್ರಿಕೊಡುತ್ತಿದ್ದಾರೆ ನಟ ಪೃಥ್ವಿ ನಂದನ್. ಇನ್ಮುಂದೆ ರಾಜೀವ್ ಪಾತ್ರದಲ್ಲಿ ಖಡಕ್ ಪೊಲೀಸ್ ಅಧಿಕಾರಿಯಾಗಿ ನಟಿಸಲಿದ್ದಾರೆ. ಈಗಾಗಲೇ ಮಂಗಳ ತನ್ನ ಮಗುವಿನ ಗೌಪ್ಯತೆಯ ಬಗ್ಗೆ ಹುಡುಕಾಟದಲ್ಲಿದ್ದರೆ, ಇತ್ತ ರಾಜೀವ್ ಮಂಗಳಳನ್ನು ಹುಡುಕಾಟದಲ್ಲಿ ತೊಡುಗುವ ಸನ್ನಿವೇಶದಲ್ಲಿದ್ದು ಹೊಸ ಹೊಸ ತಿರುವುಗಳ ಮೂಲಕ ಮಂಗಳ ಗೌರಿ ಧಾರಾವಾಹಿ ವೀಕ್ಷಕರಿಗೆ ಕುತೂಹಲ ಮೂಡಿಸಿದೆ.

%d bloggers like this: