ಕನ್ನಡ ಕಿರುತೆರೆಯ ರಿಯಾಲಿಟಿ ಶೋ ವೊಂದಕ್ಕೆ ನಿರ್ಣಾಯಕಿಯಾಗಿ ಬಂದ ಸ್ಯಾಂಡಲ್ ವುಡ್ನ ಖ್ಯಾತ ನಟಿ, ಪ್ರಸ್ತುತ ಕನ್ನಡ ಕಿರುತೆರೆ ಮನರಂಜನಾ ಲೋಕದಲ್ಲಿ ಹೊಚ್ಚ ಹೊಸ ವಿಭಿನ್ನ ಧಾರಾವಾಹಿ ಮತ್ತು ರಿಯಾಲಿಟಿ ಶೋ ಗಳ ಮೂಲಕ ನಾಡಿನ ಮನೆ ಮಾತಾಗಿ ಅಪಾರ ಜನಪ್ರಿಯತೆ ಪಡೆದಿರುವ ವಾಹಿನಿ ಅಂದರೆ ಅದು ಕಲರ್ಸ್ ಕನ್ನಡ ವಾಹಿನಿ. ಒಂದರ ಮೇಲೊಂದರಂತೆ ಸಾಲು ಸಾಲು ಹೊಸ ಬಗೆಯ ಧಾರಾವಾಹಿ ಮತ್ತು ಸಿಂಗಿಂಗ್,ಕಾಮಿಡಿ ಮತ್ತು ಕೌಟುಂಬಿಕ ರಿಯಾಲಿಟಿ ಶೋಗಳ ಮೂಲಕ ಇನ್ನಿತರ ವಾಹಿನಿಗಳಿಗಿಂತ ವಿಶೇಷವಾಗಿ ಕಾಣಿಸಿಕೊಳ್ಳುತ್ತಿರುವ ಕಲರ್ಸ್ ಕನ್ನಡ ವಾಹಿನಿಯಲ್ಲಿ ಹೊಸದಾದ ರಿಯಾಲಿಟಿ ಶೋ ವೊಂದು ಸಿದ್ದವಾಗಿದೆ.

ಅದೇ ಡ್ಯಾನ್ಸಿಂಗ್ ಚಾಂಪಿಯನ್ ಶೋ. ಇತ್ತೀಚೆಗೆ ನಡೆದ ಮನೆ ಮನೆ ಮೀನಾಕ್ಷಿ ಕಾರ್ಯಕ್ರಮದಲ್ಲಿ ಈ ಶೋನಲ್ಲಿ ಯಾರ್ಯಾರು ಜಡ್ಜ್ ಗಳಾಗಿ ಇರಲಿದ್ದಾರೆ ಎಂಬ ಮಾಹಿತಿಯನ್ನ ತಿಳಿಸಲಾಗಿತ್ತು. ಈ ಡ್ಯಾನ್ಸಿಂಗ್ ಚಾಂಪಿಯನ್ ಜಡ್ಜ್ ಗಳಾಗಿ ಮೂವರು ನಿರ್ಣಾಯಕರು ಇರುತ್ತಾರೆ. ಚಂದನವನದ ಚಿನ್ನಾರಿ ಮುತ್ತಾ ಖ್ಯಾತಿಯ ನಟ ವಿಜಯ್ ರಾಘವೇಂದ್ರ ಮತ್ತು ಖ್ಯಾತ ಡ್ಯಾನ್ಸರ್ ಮಯೂರಿ ಭಾಗವಹಿಸುತ್ತಿದ್ದಾರೆ ಎಂಬ ಮಾಹಿತಿ ದೊರೆತ್ತಿತ್ತು. ಮೂರನೇ ಜಡ್ಜ್ ಆಗಿ ಯಾರು ಬರಲಿದ್ದಾರೆ ಎಂಬ ಪ್ರಶ್ನೆ ಕಾಡುತ್ತಿತ್ತು.

ಈ ಗೊಂದಲದ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ. ಮೂರನೇ ಜಡ್ಜ್ ಆಗಿ ಇದೀಗ ಸ್ಯಾಂಡಲ್ ವುಡ್ ನ ಖ್ಯಾತ ನಟಿ ಯಾದ ಮೇಘನಾ ರಾಜ್ ಭಾಗವಹಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಹೌದು ನಟಿ ಮೇಘನಾರಾಜ್ ಅವರು ತಮ್ಮ ಪತಿ ನಟ ದಿ.ಚಿರಂಜೀವಿ ಸರ್ಜಾ ಅವರು ಅಕಾಲಿಕ ನಿಧನದ ನಂತರ ಸಂಪೂರ್ಣವಾಗಿ ಮಾನಸಿಕವಾಗಿ ಕುಗ್ಗಿ ಹೋಗಿದ್ದರು. ಒಂದಷ್ಟು ವರ್ಷಗಳ ಕಾಲ ನಟ ಚಿರಂಜೀವಿ ಸರ್ಜಾ ಅವರನ್ನು ಪ್ರೀತಿಸಿ ಮದುವೆ ಆಗಿದ್ದರು. ಚಿರಂಜೀವಿ ಸರ್ಜಾ ಅವರು ನಿಧನರಾದಾಗ ಮೇಘನಾ ರಾಜ್ ಅವರು ಗರ್ಭಿಣಿಯಾಗಿದ್ದರು.

ಇಂತಹ ಸಂಕಷ್ಟದ ಸಂಧರ್ಭದಲ್ಲಿ ಮೇಘನಾರಾಜ್ ಅವರು ತುಂಬಾ ಮನನೊಂದು ಕೆಲವು ತಿಂಗಳುಗಳ ಕಾಲ ದುಃಖದಲ್ಲಿದ್ದರು. ನೋವಿನ ನಡುವೆ ಗಂಡು ಮಗುವಿಗೆ ಜನ್ಮನೀಡಿದ ಮೇಘನಾರಾಜ್ ಚಿರು ಅವರನ್ನು ಈ ಮಗುವಿನಲ್ಲಿ ಕಾಣುತ್ತಿದ್ದಾರೆ. ಸದ್ಯಕ್ಕೆ ಕೊಂಚ ಸಮಾಧಾನವಾಗಿ ಮಗನ ಆರೈಕೆಯ ಮಾಡುತ್ತಾ ಸಂತೋಷದಲ್ಲಿರುವ ಮೇಘನಾರಾಜ್ ಅವರು ಸಿನಿಮಾಗಳಿಂದ ದೂರ ಉಳಿದಿದ್ದರು.ಇದೀಗ ಮೇಘನಾ ರಾಜ್ ಅವರ ಮತ್ತೆ ಬಣ್ಣದ ಲೋಕಕ್ಕೆ ಎಂಟ್ರಿಯಾಗಿದ್ದು ಸಿನಿಮಾ, ಜಾಹೀರಾತು ಇದೀಗ ರಿಯಾಲಿಟಿ ಶೋ ಜಡ್ಜ್ ಆಗಿಯೂ ಕೂಡ ಕಾಣಿಸಿಕೊಳ್ಳುತ್ತಿದ್ದಾರೆ.