ಕನ್ನಡ ಕಿರುತೆರೆಯ ಜನಪ್ರಿಯ ನಾಗಿಣಿ 2 ಧಾರಾವಾಹಿಯಲ್ಲಿ ಪ್ರಮುಖ ಪಾತ್ರಧಾರಿ ಸೀರಿಯಲ್ ನಿಂದ ಔಟ್ ಆಗಿದ್ದಾರೆ. ಇತ್ತೀಚೆಗೆ ಕನ್ನಡ ಕಿರುತೆರೆಯ ಅನೇಕ ಧಾರಾವಾಹಿಗಳಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದ ಕಲಾವಿದರು ಕಾರಾಣಾಂತರಗಳಿಂದ ಧಾರಾವಾಹಿಯಿಂದ ಹೊರ ನಡೆಯುತ್ತಿದ್ದಾರೆ. ಅದರಂತೆ ಇದೀಗ ಜೀ಼ ಕನ್ನಡ ವಾಹಿನಿಯಲ್ಲಿ ಪ್ರಸಾರ ವಾಗುತ್ತಿರುವ ರಾಮ್ ಜೀ ನಿರ್ದೇಶನದ ನಾಗಿಣಿ 2 ಧಾರಾವಾಹಿಯಲ್ಲಿ ದಮಯಂತಿ ಪಾತ್ರ ನಿರ್ವಹಿಸುತ್ತಿದ್ದ ನಟಿ ಜನ್ನಿಫರ್ ಆಂಟೋನಿ ಕೆಲವು ವೈಯಕ್ತಿಕ ಕಾರಣಗಳಿಂದ ಹೊರ ನಡೆದಿದ್ದಾರೆ.

ಜೆನ್ನಿಫರ್ ಆಂಟೋನಿ ದಮಯಂತಿ ಪಾತ್ರವಾಗಿ ಕಥಾನಾಯಕ ತ್ರಿಶೂಲ್ ಅವರ ತಾಯಿಯಾಗಿ, ದಿಗ್ವಿಜಯ ಅವರ ಪತ್ನಿಯಾಗಿ ನಟಿಸಿದ್ದರು. ಇವರ ಸ್ಥಾನಕ್ಕೆ ದಮಯಂತಿ ಪಾತ್ರದಲ್ಲಿ ಇದೀಗ ನಟಿ ರೇಖಾ ಸಾಗರ್ ಕಾಣಿಸಿಕೊಳ್ಳಲಿದ್ದಾರೆ. ನಟಿ ರೇಖಾ ಸಾಗರ್ ಈಗಾಗಲೇ ನಾಗಿಣಿ 2 ಸೀರಿಯಲ್ ತಂಡದ ಜೊತೆಗೆ ಸೇರಿ ಚಿತ್ರೀಕರಣದಲ್ಲಿಯೂ ಕೂಡ ಭಾಗಿಯಾಗಿದ್ದಾರಂತೆ. ಇನ್ನು ನಾಗಿಣಿ 2 ಸೀರಿಯಲ್ ಕಳೆದ ಕೆಲವು ದಿನಗಳ ಹಿಂದೆಯಷ್ಟೇ ನಾಗಿಣಿ 2 ಧಾರಾವಾಹಿ ತಂಡ ನಾಲ್ಕು ನೂರು ಸಂಚಿಕೆಗಳನ್ನು ಪೂರೈಸಿಕೊಂಡು ಸಂಭ್ರಮಾಚಾರಣೆ ಮಾಡಿತ್ತು.

ನಾಗಿಣಿ 2 ಧಾರಾವಾಹಿಯು ಪುನರ್ಜನ್ಮದ ಪ್ರೇಮಕಥೆಯನ್ನ ಹೊಂದಿದ್ದು, ತ್ರಿಶೂಲ್ ಮತ್ತು ನಾಗಿಣಿ ಪಾತ್ರಗಳ ಸುತ್ತಾ ಹೆಣೆದಿರುವ ಕಥೆಯಲ್ಲಿ ರೋಚಕ ತಿರುವುಗಳ ಮೂಲಕ ಕಿರುತೆರೆ ವೀಕ್ಷಕರಿಗೆ ಕುತೂಹಲಭರಿತವಾಗಿ ಮನರಂಜನೆ ನೀಡುತ್ತಿದೆ. ಇನ್ನು ಈ ನಾಗಿಣಿ 2 ಧಾರಾವಹಿಯು ಕನ್ನಡ ಕಿರುತೆರೆಯಲ್ಲಿ ಅದ್ದೂರಿತನದ ಮೇಕಿಂಗ್, ಪುನರ್ಜನ್ಮದ ಕಥಾಹಂದರದ ಮೂಲಕ ಭಾರಿ ಸದ್ದು ಮಾಡುತ್ತಿದೆ. ವಿಶೇಷ ಅಂದರೆ ಈ ನಾಗಿಣಿ 2 ಧಾರಾವಾಹಿಯು ಹಿಂದಿ ಭಾಷೆಗೂ ಕೂಡ ಡಬ್ಬಿಂಗ್ ಆಗಿ ಪ್ರಸಾರವಾಗುತ್ತಿದ್ದು, ಅದರಲ್ಲಿಯೂ ಕೂಡ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ.