ಕನ್ನಡದ ಜನಪ್ರಿಯ ಜೊತೆ ಜೊತೆಯಲಿ ಧಾರಾವಾಹಿಗೆ ಮತ್ತೊಬ್ಬ ನಟಿಯ ಆಗಮನ

ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಜೊತೆ ಜೊತೆಯಲಿ ಧಾರಾವಾಹಿ ಆರಂಭದಿಂದಲೂ ಜನರ ಅಚ್ಚುಮೆಚ್ಚಿನ ಧಾರಾವಾಹಿ. ಜೊತೆ ಜೊತೆಯಲಿ ಧಾರಾವಾಹಿ ಪ್ರಸಾರವಾಗುವ ಮುನ್ನ ಒಂದು ಟೈಟಲ್ ಹಾಡಿನೊಂದಿಗೆ ಧಾರವಾಹಿಯ ಟ್ರೈಲರ್ ಬಿಡುಗಡೆ ಮಾಡಿತ್ತು. ಜೊತೆ ಜೊತೆಯಲಿ ಧಾರಾವಾಹಿಯ ನೂರು ಜನ್ಮ ಕೂಡಿ ಬಾಳುವ ಜೋಡಿ ನಮ್ಮದು ಸಾಂಗ್ ಭರ್ಜರಿ ಹಿಟ್ ಆಗಿತ್ತು. ಕೇವಲ ಕನ್ನಡದಲ್ಲಿ ಮಾತ್ರವಲ್ಲದೆ ಬೇರೆ ಭಾಷೆಯ ಅಭಿಮಾನಿಗಳು ಕೂಡ ಈ ಧಾರಾವಾಹಿಗೆ ಇದ್ದಾರೆ. ಇತ್ತೀಚೆಗೆ ಅತಿ ಹೆಚ್ಚು ಕುತೂಹಲ ಮೂಡಿಸಿರುವ ಈ ಧಾರಾವಾಹಿ ಹಲವಾರು ಟ್ವಿಸ್ಟ್ ಅಂಡ್ ಟರ್ನ್ ಗಳೊಂದಿಗೆ ಸಾಗುತ್ತಿದೆ. ಎಲ್ಲಾ ಎಪಿಸೋಡ್ ಗಳನ್ನು ವೀಕ್ಷಕರು ಬಹಳ ಇಷ್ಟಪಟ್ಟು ನೋಡುತ್ತಿದ್ದಾರೆ.

ಹಲವು ತಿಂಗಳುಗಳ ಹಿಂದೆ ಈ ಧಾರಾವಾಹಿಯಲ್ಲಿ ರಾಜನಂದಿನಿ ಎಂಬ ಪಾತ್ರವನ್ನು ಸೃಷ್ಟಿ ಮಾಡಲಾಗಿತ್ತು. ಆದರೆ ಕೇವಲ ಕಾಲ್ಪನಿಕವಾಗಿ ಈ ಪಾತ್ರ ಇಷ್ಟುದಿನ ಸಾಗುತ್ತಿತ್ತು. ಎಲ್ಲರೂ ಯಾರು ಈ ರಾಜನಂದಿನಿ ಎಂದು, ರಾಜನಂದಿನಿ ಪಾತ್ರದ ಎಂಟ್ರಿಗಾಗಿ ಕಾಯುತ್ತಿದ್ದರು. ಈಗ ಎಲ್ಲರೂ ಕಾಯುತ್ತಿರುವ ಗಳಿಗೆ ಬಂದಿದೆ. ರಾಜನಂದಿನಿ ಯಾವಾಗ ಧಾರಾವಾಹಿಯಲ್ಲಿ ಎಂಟ್ರಿ ಕೊಡುತ್ತಾರೆ ಎಂದು ಜೊತೆ ಜೊತೆಯಲಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದರು. ಇದೀಗ ರಾಜನಂದಿನಿ ಪಾತ್ರಧಾರಿಯ ಎಂಟ್ರಿ ಆಗಿದೆ. ಈ ಧಾರಾವಾಹಿಯಲ್ಲಿ ರಾಜನಂದಿನಿಯ ಪಾತ್ರಕ್ಕೆ ಸಾಕಷ್ಟು ತೂಕವಿದೆ. ಹೀಗಾಗಿ ಈ ಪಾತ್ರವನ್ನು ಯಾರು ನಿಭಾಯಿಸಬಲ್ಲರು ಎಂಬ ಪ್ರಶ್ನೆಗಳಿಗೆ ಈಗ ಉತ್ತರ ಸಿಕ್ಕಿದೆ. ಮೊನ್ನೆಯ ಎಪಿಸೋಡ್ ನಲ್ಲಿ ರಾಜನಂದಿನಿಯಾಗಿ ನಟಿ ಸೋನುಗೌಡ ಎಂಟ್ರಿಕೊಟ್ಟಿದ್ದಾರೆ.

ಅನು ದೇವಸ್ಥಾನಕ್ಕೆ ಎಂದು ಹೋಗಿದ್ದಾಗ ಮೈಮರೆತು ಯಾವುದೋ ಗಾಡಿಗೆ ಅಡ್ಡ ಸಿಕ್ಕಿರುತ್ತಾಳೆ. ಆಗ ಜೋಗ್ತವ್ವ ಬಂದು ಅನುಳನ್ನು ಕಾಪಾಡುತ್ತಾಳೆ. ಆಗ ಅನು ತನಗಾಗುತ್ತಿರುವ ಸಂಕಟದ ಬಗ್ಗೆ ಜೋಗ್ತವ್ವನ ಹತ್ತಿರ ಹೇಳಿಕೊಳ್ಳುತ್ತಾಳೆ. ಆಗ ಜೋಗವ್ವ ಬಾ ನನ್ನ ಜೊತೆ ಎಂದು ಒಂದು ಮರದ ಬಳಿಗೆ ಕರೆದುಕೊಂಡು ಹೋಗಿ, ಶ್ರದ್ಧೆಯಿಂದ ಕೈಮುಗಿದು ಯಲ್ಲವ್ವನ ಹತ್ತಿರ ನಿನ್ನ ಸಮಸ್ಯೆಯನ್ನು ಹೇಳಿಕೋ ಅವಳೇ ನಿನಗೆ ದಾರಿ ತೋರಿಸುತ್ತಾಳೆ ಎಂದು ಹೇಳುತ್ತಾಳೆ. ಆಗ ಅನು ಕೈಮುಗಿದು ಆರತಿ ತಟ್ಟೆಯ ಕಡೆಗೆ ನೋಡುತ್ತಾಳೆ. ಅದೇ ಸಮಯದಲ್ಲಿ ಮೊಟ್ಟಮೊದಲಬಾರಿಗೆ ರಾಜ ನಂದಿನಿಯ ದರ್ಶನವಾಗುತ್ತದೆ. ಆದರೆ ಅನುಗೆ ಇವರೇ ರಾಜನಂದಿನಿ ಎಂದು ತಿಳಿದಿರುವುದಿಲ್ಲ. ಹಾಗೆಯೇ ಅನು ಮನೆಗೆ ಹೋಗುತ್ತಾಳೆ. ಅದೇ ಗುಂಗಲ್ಲಿ ಅನುವು ತನ್ನ ರೂಮಿಗೆ ಹೋಗುವಾಗ ರಾಜನಂದಿನಿ ಜೋಕಾಲಿಯ ಮೇಲೆ ತೂಗುತ್ತಿರುವ ದೃಶ್ಯಗಳೆಲ್ಲ ಇವಳ ಕಣ್ಮುಂದೆ ಬರುತ್ತವೆ.

ಕನ್ನಡಿಯ ಮುಂದೆ ನಿಂತಾಗ ರಾಜ ನಂದಿನಿಯ ಪ್ರತಿಬಿಂಬ ಕನ್ನಡಿಯಲ್ಲಿ ಕಾಣಿಸುತ್ತದೆ. ಇದನ್ನು ನೋಡಿದ ಅನು ದಿಗ್ಬ್ರಮೆಗೊಳಗಾಗುತ್ತಾಳೆ. ಇತ್ತ ಅನು ಸುಭಾಷ್ ಪಾಟೀಲ್ ಯಾರು ಎಂಬ ಗೊಂದಲದಲ್ಲಿದ್ದರೆ, ಅತ್ತ ತನಗೆ ಕಾಣಿಸುತ್ತಿರುವ ಪ್ರತಿಬಿಂಬ ಯಾರದ್ದು ಎನ್ನುವ ಸಾವಿರಾರು ಗೊಂದಲಗಳಲ್ಲಿ ಅನು ಸಿಲುಕಿರುತ್ತಾಳೆ. ಇಷ್ಟು ದಿನ ಸಾಕಷ್ಟು ಕುತೂಹಲಗಳಿಂದ ಕೂಡಿದ ರಾಜ ನಂದಿನಿಯ ಪಾತ್ರದ ದರ್ಶನವಂತೂ ಆಗಿದೆ. ಆದರೆ ಇನ್ನು ಮುಂದೆ ಕಥೆಯಲ್ಲಿ ಏನೇನೆಲ್ಲ ಟ್ವಿಸ್ಟ್ ಗಳು ಬರಲಿದೆ ಎಂಬುದನ್ನು ಕಾದುನೋಡಬೇಕು. ಇನ್ನು ಇಷ್ಟು ದಿನ ಕಾಲ್ಪನಿಕವಾಗಿ ಹೇಳಿಕೊಂಡು ಬಂದಿದ್ದ ರಾಜ ನಂದಿನಿಯ ಪಾತ್ರಕ್ಕೂ ನಟಿ ಸೋನುಗೌಡ ಅವರ ಮುಖ ಲಕ್ಷಣವು ಸರಿಹೊಂದಿದೆ ಎಂದು ಎಲ್ಲರು ಅಭಿಪ್ರಾಯಪಟ್ಟಿದ್ದಾರೆ. ಇನ್ನು ಈ ಕಥೆಯಲ್ಲಿ ಏನೇನು ಟ್ವಿಸ್ಟ್ ಗಳು ಬರುತ್ತವೆ ಎಂಬುದನ್ನು ಕಾದುನೋಡಬೇಕು.

%d bloggers like this: