ಕನ್ನಡದ ಕೆಜಿಎಫ್ ಚಿತ್ರದ ಕಥೆಯಂತೇ ಇದೆ ಪುಷ್ಪ ಸಿನಿಮಾದ ಕಥೆ, ಓಟಿಟಿ ಅಲ್ಲಿ ಚಿತ್ರ ನೋಡಿದ ಕನ್ನಡಿಗರು ಏನ್ ಹೇಳಿದ್ರು ಗೊತ್ತೇ

ಭಾರತೀಯ ಚಿತ್ರರಂಗದ ಬಹು ನಿರೀಕ್ಷಿತ ಸಿನಿಮಾವಾಗಿದ್ದ ಟಾಲಿವುಡ್ ಸ್ಟೈಲೀಶ್ ಸ್ಟಾರ್ ನಟ ಅಲ್ಲು ಅರ್ಜುನ್ ಮತ್ತು ನ್ಯಾಷನಲ್ ಸ್ಟಾರ್ ರಶ್ಮಿಕಾ ಮಂದಣ್ಣ ಅಭಿನಯದ ಪ್ಯಾನ್ ಇಂಡಿಯಾ ಪುಷ್ಪ ಸಿನಿಮಾ ವರ್ಲ್ಡ್ ವೈಡ್ ರಿಲೀಸ್ ಆಗಿ ಭರ್ಜರಿ ಕಲೆಕ್ಷನ್ ಮಾಡಿ ದಾಖಲೆ ನಿರ್ಮಿಸಿದೆ. ಪುಷ್ಪ ಸಿನಿಮಾ ರಿಲೀಸ್ ಗೂ ಮುನ್ನ ಟೀಸರ್, ಹಾಡುಗಳು ಮತ್ತು ಮೇಕಿಂಗ್ ಮೂಲಕ ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿತ್ತು. ಆದರೆ ಚಿತ್ರ ನೋಡಿದ ನಂತರ ಅಪಾರ ನಿರೀಕ್ಷೆ ಇಟ್ಟಿದ್ದಂತಹ ಪ್ರೇಕ್ಷಕರಿಗೆ ನಿರಾಸೆ ಆಗಿದ್ದಂತೂ ನಿಜ. ಹಾಗಂತ ಸಿನಿಮಾ ಸೋತಿತು ಎಂಧರ್ಥವಲ್ಲ. ಪುಷ್ಪ ಸಿನಿಮಾದ ಬಗ್ಗೆ ಮಿಶ್ರ ಪ್ರತಿಕ್ರಿಯೆ ಕೇಳಿ ಬಂದರು ಸಹ ಕಲೆಕ್ಷನ್ ವಿಚಾರದಲ್ಲಿ ಮಾತ್ರ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿದೆ ಎನ್ನಬಹುದು.

ಪುಷ್ಪ ಚಿತ್ರ ಬಿಡುಗಡೆಯಾದ ಕೇವಲ ಮೂರೇ ವಾರದಲ್ಲಿ ಬರೋಬ್ಬರಿ ಇನ್ನೂರು ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ಎಲ್ಲರನ್ನ ದಂಗಾಸಿತು.
ಪುಷ್ಪ ಸಿನಿಮಾವನ್ನು ಬಿಡುಗಡೆಯಾದ ಆರಂಭದ ದಿನಗಳಲ್ಲಿ ಟಿಕೆಟ್ ಸಿಗದ ಕಾರಣ ಒಂದಷ್ಟು ಮಂದಿ ಥಿಯೇಟರ್ ಗಳಲ್ಲಿ ನೋಡಲು ಸಾಧ್ಯವಾಗಲಿಲ್ಲ‌. ಇದೊಂದು ಕಾರಣವಾದರೆ ಮತ್ತೊಂದು ಕಾರಣ ಸಿನಿಮಾ ನೋಡಿದ ಪ್ರೇಕ್ಷಕರು ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ ಕಾರಣ ಅನೇಕ ಫ್ಯಾಮಿಲಿ ಆಡಿಯನ್ಸ್ ಚಿತ್ರ ನೋಡಲು ಹಿಂದೇಟು ಹಾಕಿದರು.

ಇದರ ನಡುವೆಯೂ ಕೂಡ ಪುಷ್ಪ ಚಿತ್ರ ಪ್ರಸಿದ್ದ ಓಟಿಟಿ ಸಂಸ್ಥೆಗೆ ಬಹುದೊಡ್ಡ ಮೊತ್ತಕ್ಕೆ ಪುಷ್ಪ ಸಿನಿಮಾ ಮಾರಾಟವಾಗಿದೆ. ಜನವರಿ 7ರಂದು ಓಟಿಟಿ ಅಮೆಜಾ಼ನ್ ಪ್ರೈಮ್ ನಲ್ಲಿ ಪುಷ್ಪ ಸಿನಿಮಾ ರಿಲೀಸ್ ಆಗಿದ್ದು, ಚಿತ್ರ ನೋಡಿದ ಪ್ರೇಕ್ಷಕರು ಇದೀಗ ವ್ಯಂಗ್ಯ ಟೀಕೆಗಳ ಸುರಿಮಳೆ ಗೈದಿದ್ದಾರೆ. ಪುಷ್ಪ ಸಿನಿಮಾ ರಿಲೀಸ್ ಆಗುವ ಮುನ್ನ ತೆಲುಗು ಸೂಪರ್ ಹಿಟ್ ಉಪ್ಪೇನಾ ಸಿನಿಮಾದ ನಿರ್ದೇಶಕ ಬುಚ್ಚಿ ಬಾಬು ಅವರು ಒಂದು ಪುಷ್ಪ ಚಿತ್ರ ಕನ್ನಡದ ಹತ್ತು ಕೆಜಿಎಫ್ ಚಿತ್ರಕ್ಕೆ ಸಮ ಎಂದು ಕೆಜಿಎಫ್ ಚಿತ್ರದ ಬಗ್ಗೆ ಕೇವಲವಾಗಿ ಹೇಳಿಕೆ ನೀಡಿದ್ದರು.

ಇದೀಗ ಪುಷ್ಪ ಸಿನಿಮಾದ ಬಗ್ಗೆ ಅದರ ಕಥೆ ನೋಡಿದ ಕನ್ನಡ ಪ್ರೇಕ್ಷಕರು ಇದು ಕೆಜಿಎಫ್ ಸಿನಿಮಾದ ಮೂಲ ಕಥೆ ಎಳೆಯನ್ನೇ ಕದ್ದು ಪಾತ್ರಗಳನ್ನ ಅಲ್ಲಲ್ಲಿ ಒಂದಷ್ಟು ಸನ್ನಿವೇಶಗಳನ್ನ ಅದಲು ಬದಲು ಪುಷ್ಟ ಚಿತ್ರ ಮಾಡಿದ್ದಾರೆ. ಕೆಜಿಎಫ್ ನಲ್ಲಿ ಯಶ್ ಅವರು ಗೋಲ್ಡ್ ಮಾಫಿಯ್ ಕಿಂಗ್ ಆಗಬೇಕು ಎಂದು ಬಯಸಿ ಶತ್ರುಗಳನ್ನ ಸಂಹಾರ ಮಾಡುತ್ತಾರೆ. ಅದೇ ರೀತಿಯಾಗಿ ಪುಷ್ಪ ಚಿತ್ರದಲ್ಲಿ ಅಲ್ಲು ಅರ್ಜುನ್ ರಕ್ತಚಂದನ ಬಿಝಿನೆಸ್ ನಲ್ಲಿ ಡಾನ್ ಆಗಬೇಕು ಎಂದು ಹೋರಾಡುತ್ತಾರೆ ಇಷ್ಟೇ ಇದರಲ್ಲಿ ಹೇಳಿಕೊಳ್ಳುವಂತಹ ವ್ಯತ್ಯಾಸವಾದರು ಏನು ಎಂದು ಓಟಿಟಿಯಲ್ಲಿ ಪುಷ್ಪ ಚಿತ್ರ ನೋಡಿದ ಪ್ರೇಕ್ಷಕರು ಟೀಕೆ ಮಾಡುತ್ತಿದ್ದಾರೆ.

%d bloggers like this: