ಕನ್ನಡ ಕಿರುತೆರೆಯ ಖ್ಯಾತ ನಟಿಯರು ಇದೀಗ ಪರಭಾಷೆಯಲ್ಲಿಯೂ ಕೂಡ ಮಿಂಚಲಿದ್ದಾರೆ. ಕೆಲವು ವರ್ಷಗಳಿಂದೀಚೆಗೆ ಕನ್ನಡ ಸಿನಿಮಾ ಮತ್ತು ಕಿರುತೆರೆಯ ನಟ ನಟಿಯರು ನೆರೆಯ ಭಾಷೆಗಳಲ್ಲಿ ಕೂಡ ಅವಕಾಶ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಈ ರೀತಿಯ ಹೊಸ ಬೆಳವಣಿಗೆ ನಿಜಕ್ಕೂ ಕೂಡ ಸಂತಸ ಪಡುವಂತದ್ದು. ಈಗಾಗಲೇ ಕನ್ನಡದ ಅನೇಕ ನಟ ನಟಿಯರು ಪರಭಾಷೆಯ ಸಿನಿಮಾ ಮತ್ತು ಧಾರಾವಾಹಿಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಇದೀಗ ಇವರ ಸಾಲಿಗೆ ಕನ್ನಡದ ಮತ್ತಿಬ್ಬರು ನಟಿಯರು ಸೇರ್ಪಡೆಗೊಳ್ಳುತ್ತಿದ್ದಾರೆ. ಹೌದು ಕನ್ನಡ ಕಿರುತೆರೆಯ ಪ್ರಸಿದ್ದ ವಾಹಿನಿ ಆಗಿರುವ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ನನ್ನರಸಿ ರಾಧೆ ಧಾರಾವಾಹಿಯಲ್ಲಿ ಇಂಚರ ಎಂಬ ಪಾತ್ರದ ಮೂಲಕ ನಾಡಿನ ಮನೆ ಮನೆಗಳಲ್ಲಿ ಹೆಸರಾಗಿರುವ ನಟಿ ಕೌಸ್ತುಬಾ ಅವರು ತೆಲುಗಿನ ಕೋಡಲು ಮೀಕು ಜೋಹರ್ಲು ಎಂಬ ಸಿರೀಯಲ್ಲಿ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ನಟಿ ಕೌಸ್ತುಬಾ ಅವರು ನನ್ನರಸಿ ರಾಧೆ ಧಾರಾವಾಹಿಯಲ್ಲಿ ಇಂಚರ ಪಾತ್ರದಲ್ಲಿ ತಮ್ಮ ನಟನೆಯ ಮೂಲಕ ಕನ್ನಡ ಕಿರುತೆರೆ ವೀಕ್ಷಕರಿಗೆ ಮೋಡಿ ಮಾಡಿದ್ದಾರೆ. ಆದ್ದರಿಂದಲೇ ನಟಿ ಕೌಸ್ತುಬಾ ಅವರನ್ನ ಇಂಚರ ಎಂಬ ಹೆಸರಿನಿಂದಲೇ ಹೆಚ್ಚು ಗುರುತಿಸುತ್ತಾರೆ. ಇದೀಗ ತೆಲುಗಿನಲ್ಲಿ ಕೂಡ ಅವಕಾಶ ಸಿಕ್ಕಿರುವುದರಿಂದ ಸಖತ್ ಎಕ್ಸೈಟ್ ಆಗಿದ್ದಾರಂತೆ ನಟಿ ಕೌಸ್ತುಬಾ. ಇನ್ನು ಮತ್ತೊಬ್ಬ ನಟಿ ಅಂದರೆ ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ನೇತ್ರಾವತಿ ಸೀರಿಯಲ್ ನಲ್ಲಿ ಅಭಿನಯಿಸುತ್ತಿರುವ ನಟಿ ದುರ್ಗಶ್ರೀ ಅವರು. ನಟಿ ದುರ್ಗಶ್ರೀ ಅವರು ಕೂಡ ತೆಲುಗಿನ ಕೋಡಲು ಮೀಕು ಜೋಹರ್ಲುನ ಧಾರಾವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ವಿಶೇಷ ಅಂದರೆ ಈ ಇಬ್ಬರು ಕನ್ನಡದ ನಟಿಯರು ಈ ತೆಲುಗಿನ ಕೋಡಲು ಮೀಕು ಜೋಹರ್ಲು ಧಾರಾವಾಹಿಯಲ್ಲಿಯೇ ನಟಿಸುತ್ತಿದ್ದಾರೆ. ಆದರೆ ಈ ವಿಚಾರ ಅವರಿಗೆ ತಿಳಿದಿರಲಿಲ್ಲ. ಯಾವಾಗ ಚಿತ್ರೀಕರಣದ ಸಂಧರ್ಭದಲ್ಲಿ ಇಬ್ಫರೂ ಒಟ್ಟಿಗೆ ಪರಸ್ಪರ ಭೇಟಿ ಆದ್ರೋ ಆಗ ನಟಿ ಕೌಸ್ತುಭ ಮತ್ತು ನಟಿ ದುರ್ಗಶ್ರಿ ಇಬ್ಬರೂ ಕೂಡ ಪರಸ್ಪರ ಸಖತ್ ಎಕ್ಸೈಟ್ ಆಗಿ ಸಂತಸ ಹಂಚಿಕೊಂಡರು. ಒಟ್ಟಾರೆಯಾಗಿ ಕನ್ನಡದ ಈ ಕಲಾವಿದೆಯರು ಇದೀಗ ತೆಲುಗು ಕಿರುತೆರೆಗೆ ಹೆಜ್ಜೆ ಇಡುತ್ತಿದ್ದಾರೆ.