ಕನ್ನಡದ ಮತ್ತೊಬ್ಬ ಖ್ಯಾತ ಧಾರಾವಾಹಿ ನಟಿ ತೆಲುಗು ಕಿರುತೆರೆಯತ್ತ

ಕನ್ನಡದ ಮತ್ತೊಬ್ಬ ಖ್ಯಾತ ಧಾರಾವಾಹಿ ನಟಿ ತೆಲುಗು ಧಾರಾವಾಹಿಗೆ ಎಂಟ್ರಿ ಕೊಟ್ಟಿದ್ದಾರೆ, ಕನ್ನಡ ಚಿತ್ರರಂಗದ ಅನೇಕ ನಟ ನಟಿಯರು ಪರಭಾಷೆಯಲ್ಲಿ ಅವಕಾಶ ಗಿಟ್ಟಿಸಿಕೊಂಡು ಯಶಸ್ಸನ್ನು ಕೂಡ ಪಡೆಯುತ್ತಿದ್ದಾರೆ. ಕೇವಲ ಕನ್ನಡ ಸಿನಿಮಾ ಕಲಾವಿದರು ಮಾತ್ರವಲ್ಲದೆ ಕಿರುತೆರೆಯ ಯುವ ನಟ ನಟಿಯರು ಕೂಡ ತೆಲುಗು ಮತ್ತು ತಮಿಳು ಧಾರಾವಾಹಿಗಳಲ್ಲಿ ನಟಿಸಿ ಸೈ ಎನಿಸಿಕೊಳ್ಳುತ್ತಿದ್ದಾರೆ. ಇದೀಗ ಆ ಸಾಲಿಗೆ ನಟಿ ಭವ್ಯಾ ಗೌಡ ಕೂಡ ಸೇರ್ಪಡೆಯಾಗಿದ್ದಾರೆ. ಹೌದು ಕನ್ನಡ ಕಿರುತೆರೆಯ ಪ್ರಸಿದ್ದ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಗೀತಾ ಸೀರಿಯಲ್ ನಲ್ಲಿ ಗೀತಾ ಪಾತ್ರದ ಮೂಲಕ ಅಪಾರ ಜನಪ್ರಿಯತೆ ಪಡೆದು ಕರುನಾಡಿನ ಮನೆಮಗಳಾಗಿರುವ ನಟಿ ಭವ್ಯಾ ಗೌಡ ಇದೀಗ ತೆಲುಗಿನ ಹೊಸ ಧಾರಾವಾಹಿಯೊಂದಕ್ಕೆ ಆಯ್ಕೆ ಆಗಿದ್ದಾರೆ.

ಹೌದು ಗಗನ್ ಎಂಟರ್ ಪ್ರೈಸಸ್ ಅಡಿಯಲ್ಲಿ ನಿರ್ಮಾಣವಾಗಿರುವ ಗೀತಾ ಸೀರಿಯಲ್ ನಲ್ಲಿ ಗೀತಾ ಮತ್ತು ವಿಜಯ್ ಜೋಡಿ ಕಿರುತೆರೆ ವೀಕ್ಷಕರನ್ನು ಮೋಡಿ ಮಾಡಿದೆ. ಗೀತಾಳ ಡೇರ್ ಡೆವಿಲ್ ಕ್ಯಾರೆಕ್ಟರ್ ನಟಿ ಭವ್ಯಾಗೌಡ ಸಖತ್ ಫೇಮಸ್ ಆಗುವಂತೆ ಮಾಡಿದೆ. ಈ ಗೀತಾ ಧಾರಾವಾಹಿ ಕಳೆದ ವರ್ಷ ತಾನೇ ಆರಂಭಗೊಂಡು ಒಂದೇ ವರ್ಷದಲ್ಲಿ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡು ಯಶಸ್ವಿಯಾಗಿ ಸಾಗುತ್ತಿದೆ. ಗೀತಾ ಸೀರಿಯಲ್ ನಲ್ಲಿ ನಟಿಸುತ್ತಿರುವ ಭವ್ಯಾ ಗೌಡ, ಧನುಷ್ ಗೌಡ, ಶರ್ಮಿತಾ ಗೌಡ, ನಿಸರ್ಗ ಗೌಡ ಸೇರಿದಂತೆ ಎಲ್ಲಾ ಕಲಾವಿದರಿಗೂ ಸಹ ಉತ್ತಮ ಜನಪ್ರಿಯತೆ ಸಿಕ್ಕಿದ್ದು, ಮತ್ತೊಂದಷ್ಟು ಪ್ರಾಜೆಕ್ಟ್ ಗಳಲ್ಲಿ ಅವಕಾಶ ಸಿಗಲು ಪೂರಕವಾಗಿದೆ. ಅದರಂತೆ ನಟಿ ಭವ್ಯಾ ಗೌಡ ಅವರಿಗೆ ತೆಲುಗಿನಲ್ಲಿ ಧಾರಾವಾಹಿಯೊಂದರಲ್ಲಿ ಅವಕಾಶ ಸಿಕ್ಕಿದೆಯಂತೆ.

ಹೌದು ತೆಲುಗಿನ ಪ್ರಸಿದ್ದ ಸ್ಟಾರ್ ಮಾ ವಾಹಿನಿಯಲ್ಲಿ ಪ್ರಸಾರವಾಗುವ ‘ಕಲಸೆವುಂಟೆ ಕಲೆದ ಸುಖಂ’ ಎಂಬ ಧಾರಾವಾಹಿಯಲ್ಲಿ ಭವ್ಯಾ ಗೌಡ ಅವರಿಗೆ ಪ್ರಮುಖ ಪಾತ್ರದಲ್ಲಿ ನಟಿಸಲು ಅವಕಾಶ ದೊರೆತಿದೆ. ಪೂಜಾ ಎಂಬ ಹಳ್ಳಿ ಹುಡುಗಿ ಪಾತ್ರದಲ್ಲಿ ಈ ಸೀರಿಯಲ್ ನಲ್ಲಿ ಕಾಣಿಸಿಕೊಂಡಿದ್ದಾರಂತೆ ಭವ್ಯಾ ಗೌಡ. ಗೀತಾ ಧಾರಾವಾಹಿಯಲ್ಲಿ ರೌಡಿ ಬೇಬಿ ಪಾತ್ರ ವಹಿಸಿದ್ದ ಭವ್ಯಾ ಗೌಡ ಈ ಸೀರಿಯಲ್ ನಲ್ಲಿ ಯಾವ ರೀತಿ ಕಾಣಿಸಿಕೊಳ್ಳುತ್ತಾರೆ ಎಂಬುದನ್ನ ಕಾದು ನೋಡಬೇಕಾಗಿದೆ. ಇದರ ಜೊತೆಗೆ ನಟಿ ಭವ್ಯಾ ಗೌಡ ಅವರಿಗೆ ಬಿಗ್ ಬಾಸ್ ಶೋ ಖ್ಯಾತಿಯ ಕಿಶನ್ ನಟನೆಯ ಡಿಯರ್ ಕಣ್ಮಣೆ ಚಿತ್ರದಲ್ಲಿಯೂ ಕೂಡ ನಾಯಕ ನಟಿಯಾಗಿ ನಟಿಸುತ್ತಿದ್ದಾರೆ.

%d bloggers like this: