ಕನ್ನಡದ ಮತ್ತೊಬ್ಬ ನಟಿ ಸಂಸದೆ ಆಗುತ್ತಾರೆ ಎಂದ ಖ್ಯಾತ ಜ್ಯೋತಿಷಿ

ಕನ್ನಡದ ಮೋಹಕ ತಾರೆ ಸ್ಯಾಂಡಲ್ ವುಡ್ ಕ್ವೀನ್ ಎಂದು ಕರೆಸಿಕೊಳ್ಳುವ ನಟಿ ರಮ್ಯಾ ಎಲ್ಲರಿಗೂ ಚಿರಪರಿಚಿತ. ಖ್ಯಾತ ನಟಿಯಾಗಿ ಕೈಯಲ್ಲಿ ಸಾಕಷ್ಟು ಚಿತ್ರಗಳು ಇರುವ ಸಮಯದಲ್ಲಿಯೇ ಅವರು ಚಿತ್ರರಂಗವನ್ನು ಬಿಟ್ಟು ರಾಜಕೀಯ ರಂಗವನ್ನು ಪ್ರವೇಶಿಸಿದರು. ಅಷ್ಟೇ ಅಲ್ಲದೆ ಮಂಡ್ಯ ಜಿಲ್ಲೆಯ ಸಂಸದೆಯಾಗಿಯೂ ಕೂಡ ಆಯ್ಕೆಯಾಗಿ ಕಾರ್ಯನಿರ್ವಹಿಸಿದರು. ಇಷ್ಟೆಲ್ಲ ಇದ್ದರೂ ಕೂಡ ಇಂದಿಗೂ ಅವರಿಗೆ ಚಿತ್ರ ರಂಗದಲ್ಲಿ ಬೇಡಿಕೆ ಕಡಿಮೆಯಾಗಿಲ್ಲ. ಇದೀಗ ರಮ್ಯಾ ಅವರ ರೀತಿಯಲ್ಲಿಯೇ ಇನ್ನೊಬ್ಬ ಖ್ಯಾತ ನಟಿ ರಾಜಕೀಯ ರಂಗಕ್ಕೆ ಪ್ರವೇಶಿಸುತ್ತಾರೆ ಎಂದು ಖ್ಯಾತ ಜ್ಯೋತಿಷಿಗಳಾದ ವೇಣು ಸ್ವಾಮಿ ಅವರು ಹೇಳಿದ್ದಾರೆ. ಹೌದು ಆ ನಟಿ ಬೇರೆ ಯಾರು ಅಲ್ಲ ಕನ್ನಡದ ಕಿರಿಕ್ ಪಾರ್ಟಿ ಎಂಬ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿ ಇದೀಗ ಎಲ್ಲ ಭಾಷೆಗಳಲ್ಲು ಫೇಮಸ್ ಆಗಿರುವ ಕನ್ನಡದ ಬೆಡಗಿ ರಶ್ಮಿಕಾ ಮಂದಣ್ಣ.

ಹೌದು ಜ್ಯೋತಿಷಿ ವೇಣು ಸ್ವಾಮಿ ಅವರು ಆಗಾಗ ಸೆಲೆಬ್ರಿಟಿಗಳ ಬಗೆಗಿನ ಭವಿಷ್ಯದ ಬಗ್ಗೆ ಹೇಳಿಕೆಗಳನ್ನು ನೀಡುತ್ತಿರುತ್ತಾರೆ. ಇತ್ತೀಚಿನ ಸಂದರ್ಶನ ಒಂದರಲ್ಲಿ ಮಾತನಾಡಿದ ಅವರು ನಾನು ರಶ್ಮಿಕಾ ಅವರ ಹೈದರಾಬಾದ್ ನಿವಾಸದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದೇನೆ. ಅವರು ನ್ಯಾಷನಲ್ ಕ್ರಶ್ ಆಗಿದ್ದಾರೆ. ಚಿತ್ರವೊಂದಕ್ಕೇ ಆರೇಳು ಕೋಟಿ ಸಂಭಾವನೆ ಕೂಡ ಪಡೆಯುತ್ತಾರೆ ಅದರ ಜೊತೆಗೆ ಅವರು ಸದ್ಯದರಲ್ಲಿ ಸಂಸದೆ ಕೂಡ ಅಗಲಿದ್ದಾರೆ ಎಂದು ಹೇಳಿ ರಶ್ಮಿಕಾ ಅವರ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದ್ದಾರೆ.

ಇದರ ಜೊತೆಗೆ ಅವರು ನಾನು ಈ ಹಿಂದೆ ಸಮಂತ ಹಾಗೂ ನಾಗ ಚೈತನ್ಯ ವಿಚ್ಛೇದನ ಪಡೆಯುತ್ತಾರೆ ಹಾಗೂ ಪವನ್ ಕಲ್ಯಾಣ್ ಅವರಿಗೆ ರಾಜಕೀಯದಲ್ಲಿ ಭವಿಷ್ಯವಿಲ್ಲ ಎಂದು ಹೇಳಿದ್ದೆ ಎಂದು ತಮ್ಮ ಹಳೆಯ ಭವಿಷ್ಯಗಳು ನಿಜವಾಗಿರುವುದರ ಬಗ್ಗೆ ಮಾತನಾಡಿದರು. ಒಟ್ಟಾರೆಯಾಗಿ ಹೇಳುವುದಾದರೆ ರಶ್ಮಿಕಾ ರಾಜಕೀಯ ರಂಗ ಪ್ರವೇಶಸುವರೋ ಇಲ್ಲವೊ ಗೊತ್ತಿಲ್ಲ ಆದರೆ ಸದ್ಯಕ್ಕಂತೂ ಜ್ಯೋತಿಷಿಗಳು ನೀಡಿರುವ ಹೇಳಿಕೆಯಿಂದ ಅವರ ಅಭಿಮಾನಿಗಳಲ್ಲಂತು ಪ್ರಶ್ನಾ ಭಾವ ಮೂಡಿದೆ.

%d bloggers like this: