ಕನ್ನಡದ ಒಂದೇ ಚಿತ್ರದಲ್ಲಿ ನಟಿಸುತ್ತಿದ್ದಾರೆ ಬರೊಬ್ಬರಿ 21 ನಟಿಯರು

ಪ್ರಣಯ ರಾಜ ಎಂದ ಕೂಡಲೇ ನಮ್ಮ ಕಣ್ಣಿಗೆ ಮೊದಲು ಬರುವುದು ಕನ್ನಡ ಚಿತ್ರರಂಗದ ಖ್ಯಾತ ನಟರಲ್ಲಿ ಒಬ್ಬರಾದ ಮತ್ತು ಕೆಲ ದಶಕಗಳ ವರೆಗೆ ಕನ್ನಡ ಚಿತ್ರರಂಗದ ಬಹು ಬೇಡಿಕೆಯ ನಟನಾಗಿ ಸೇವೆ ಸಲ್ಲಿಸಿದ ಹಿರಿಯ ನಟ ಶ್ರೀನಾಥ್ ಅವರು. ಹೌದು 80ರ ದಶಕಗಳಲ್ಲಿ ಶ್ರೀನಾಥ್ ಅವರು ಮಾಡಿದ ಬಹುತೇಕ ಎಲ್ಲ ರೊಮ್ಯಾಂಟಿಕ್ ಚಿತ್ರಗಳೂ ಭರ್ಜರಿಯಾಗಿ ಹಿಟ್ ಆದವು. ಅದೇ ಕಾರಣಕ್ಕಾಗಿ ಶ್ರೀನಾಥ್ ಅವರಿಗೆ ಪ್ರಣಯ ರಾಜ ಎಂಬ ನಾಮಧೇಯ ಕೂಡ ಬಂತು. ಆದರೆ ಇದೀಗ ಪ್ರಣಯ ರಾಜ ಎಂಬ ಹೆಸರು ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ.

ಅರೆರೆ ಮತ್ತೊಮ್ಮೆ ಶ್ರೀನಾಥ್ ಅವರು ರೊಮ್ಯಾಂಟಿಕ್ ಚಿತ್ರದಲ್ಲಿ ನಟಿಸಲಿದ್ದಾರೆ ಎಂದು ಊಹಿಸಬೆಡಿ. ಪ್ರಣಯ ರಾಜ ಎಂಬುದು ಕನ್ನಡ ಸಿನಿವನದಲ್ಲಿ ತಯಾರಾಗುತ್ತಿರುವ ಹೊಸ ಚಿತ್ರ ಒಂದರ ಹೆಸರು. ಈ ಚಿತ್ರದ ನಾಯಕ ಬಿಗ್ ಬಾಸ್ ಸ್ಪರ್ಧೆಯ ಫೇಮಸ್ ಸ್ಪರ್ಧಿಗಳಲ್ಲಿ ಒಬ್ಬರಾದ ಮತ್ತು ರಾಂಧವ ಚಿತ್ರ ಖ್ಯಾತಿಯ ಭುವನ್ ಪೊನ್ನನ್ನ ಅವರು. ಈ ಹೊಸ ಕಲರ್ ಯುಗದಲ್ಲಿ ಭುವನ್ ಪ್ರಣಯ ರಾಜನಾಗಿ ಅಭಿನಯಿಸುತ್ತಿದ್ದಾರೆ.

ಈ ಚಿತ್ರದ ಬಹು ಮುಖ್ಯ ವಿಶೇಷತೆ ಏನೆಂದರೆ ಈ ಚಿತ್ರದಲ್ಲಿ ಬರೋಬ್ಬರಿ 21 ಜನ ನಟಿಯರು ಅಭಿನಯಿಸುತ್ತಿದ್ದಾರೆ ಎಂದರೆ ನೀವು ನಂಬಲೇಬೇಕು. ಈಗಾಗಲೇ ಚಿತ್ರತಂಡ ಎಲ್ಲಾ ತಯಾರಿಗಳನ್ನು ಮಾಡಿಕೊಂಡಿದ್ದು ಚಿತ್ರದ ಟೀಸರ್ ಅನ್ನು ಭುವನ್ ಅವರ ಹುಟ್ಟಿದ ದಿನವಾದ ಡಿಸೆಂಬರ್ 30 ರಂದು ಬಿಡುಗಡೆ ಮಾಡಲು ಸಜ್ಜಾಗಿದೆ. ಈ 21 ನಾಯಕ ನಟಿಯರ ಪೈಕಿ ಮೂರು ಜನ ಪ್ರಮುಖ ನಟಿಯರಂತೆ.

ಈಗಾಗಲೇ ಈ ಚಿತ್ರಕ್ಕೆ 18 ಜನ ನಟಿಮಣಿಯರು ಸಮ್ಮತಿ ನೀಡಿದ್ದು ಇನ್ನು ಮೂರು ಜನರ ಹುಡುಕಾಟದಲ್ಲಿ ಇದೆ ಚಿತ್ರತಂಡ. ಟಿ ಸುದರ್ಶನ್ ಚಕ್ರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಚಿತ್ರ ಹೆಸರಿಗೆ ತಕ್ಕಂತೆ ತುಂಬಾ ರೊಮ್ಯಾಂಟಿಕ್ ಆಗಿ ಮೂಡಿ ಬರುವುದರಲ್ಲಿ ಯಾವ ಸಂದೇಹವೂ ಇಲ್ಲ. ಒಟ್ಟಾರೆಯಾಗಿ ಬಹು ನಿರೀಕ್ಷೆ ಮೂಡಿಸಿರುವ ಪ್ರಣಯ ರಾಜ ಚಿತ್ರ ಹೇಗಿದೆ ಎಂದು ತಿಳ್ಯಬೇಕಾದರೆ ನಾವು ಕಾಯಲೇಬೇಕು.

%d bloggers like this: