ಕನ್ನಡದ ರಚಿತಾ ರಾಮ್ ಅವರಿಗೆ ಪರಭಾಷಾ ಚಿತ್ರರಂಗದಲ್ಲಿ ಡಿಮ್ಯಾಂಡಪ್ಪೋ ಡಿಮ್ಯಾಂಡು

ಚಂದನವನದ ಗುಳಿಕೆನ್ನೆ ಚೆಲುವೆ ರಚಿತಾ ರಾಮ್ ಗೆ ಈಗ ಡಿಮ್ಯಾಂಡಪ್ಪೋ ಡಿಮ್ಯಾಂಡು! ಬರೀ ಸ್ಯಾಂಡಲ್ ವುಡ್ ನಲ್ಲಿ ಮಾತ್ರವಲ್ಲದೆ ಟಾಲಿವುಡ್, ಕಾಲಿವುಡ್ ನಲ್ಲೂ ನಟಿ ರಚಿತಾರಾಮ್ ಅವರಿಗೆ ಅವಕಾಶಗಳ ಸುರಿಮಳೆ ಸುರಿಯುತ್ತಿದೆ. ಕನ್ನಡದಲ್ಲಿ ಬಹುಬೇಡಿಕೆಯ ನಟಿಯರಲ್ಲಿ ರಚಿತಾರಾಮ್ ಮೊದಲಿಗರಾಗಿದ್ದು, ಒಂದರ ಹಿಂದೆ ಒಂದು ಸಾಲು ಸಾಲು ಸಿನಿಮಾಗಳು ಬಿಡುಗಡೆಗೆ ಸಿದ್ದವಾಗಿವೆ. ಇತ್ತೀಚೆಗೆ ಅವರು ನೀಡಿದ ಖಾಸಗಿಯ ವಾಹಿನಿಯ ಸಂದರ್ಶನವೊಂದರಲ್ಲಿ ಒಂದಷ್ಟು ಮಾಹಿತಿಗಳನ್ನು ಬಿಟ್ಟುಕೊಟ್ಟಿದ್ದಾರೆ. ಸಧ್ಯಕ್ಕೆ ನಟಿ ರಚಿತಾರಾಮ್ ಕೈತುಂಬಾ ಸಿನಿಮಾಗಳಿವೆ ಅದರಲ್ಲಿ ನೀನಾಸಂ ಸತೀಶ್ ನಟನೆಯ ಮ್ಯಾಟ್ನಿ, ಪ್ರಜ್ವಲ್ ದೇವ್ ರಾಜ್ ಅಭಿನಯದ ವೀರಂ, ದಿಗಂತ್ ಒಟ್ಟಿಗೆ ಒಂದೂರಲ್ಲಿ ಒಬ್ಬರಾಜ, ರಮೇಶ್ ಅರವಿಂದ್ ಅವರ ಜೊತೆಗೆ 100ಎಂಬ ಸಿನಿಮಾ ಅದಲ್ಲದೆ ಇನ್ನೆನೋ ಬಿಡುಗಡೆಯ ಹೊಸ್ತಿಲಲ್ಲಿ ಇರುವ ಜೋಗಿ ಪ್ರೇಮ್ ನಿರ್ದೇಶನದ ಏಕ್ ಲವ್ಯಾ ಸಿನಿಮಾ ಹೀಗೆ ರಚಿತಾ ಅವರ ಅಭಿನಯದ ಸಿನಿಮಾಗಳು ಬಿಡುಗಡೆ ಸಿದ್ದವಾಗಿವೆ.

ಇದರಲ್ಲಿ ಕೆಲವು ಶೂಟಿಂಗ್ ಹಂತದಲ್ಲಿದ್ದು,ಕನ್ನಡ ಭಾಷೆಯಲ್ಲಿ ಇಷ್ಟು ಬಿಝಿ ಇದ್ದರೂ ಪರಭಾಷೆಗಳಲ್ಲೂ ಇವರಿಗೆ ಅವಕಾಶಗಳು ಹರಸಿ ಬಂದಿವೆ, ಈಗಾಗಲೇ ತೆಲುಗಿನ ಸೂಪರ್ ಮಚ್ಚಿ ಎಂಬ ಸಿನಿಮಾ ಚಿತ್ರೀಕರಣ ಮುಕ್ತಾಯದ ಹಂತದಲ್ಲಿದ್ದು ಇದು ಕಲ್ಯಾಣದೇವ್ ಜೊತೆಗೆ ರಚಿತಾರಾಮ್ ಅಭಿನಯಿಸಿದ್ದಾರೆ. ಇದೇ ವಿಚಾರವಾಗಿ ತೆಲುಗು ಭಾಷೆ ನಿಮಗೆ ಕಷ್ಟ ಆಗಿಲ್ಲವಾ ಎಂದಿದ್ದಕೆ ಎರಡೂ ಭಾಷೆಯಲ್ಲಿ ಸಾಮ್ಯತೆಯಿದೆ ನಾನು ಕನ್ನಡದಲ್ಲಿ ಮಾತನಾಡುವುದು ಅವರಿಗೆ ಅರ್ಥವಾಗುತ್ತದೆ ಅದೇ ರೀತಿ ನನಗೂ ಕೂಡ ತೆಲುಗು ಅರ್ಥವಾಗುತ್ತದೆ ಎಂದು ಹೇಳಿದ್ದಾರೆ. ಹಾಗೇ ನಾನೂ ಇನ್ನೂ ಸಿಂಗಲ್ ನನಗೆ ಯಾವುದೇ ರೀತಿಯ ಕಮಿಟ್ಮೆಂಟ್ ಇಲ್ಲ ಅಂತಾನೂ ತಿಳಿಸಿದ್ದು ನಾನು ಲಕ್ಕಿ ಎಂದು ತಮ್ಮ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇದರ ಜೊತೆಗೆ ತಮಿಳಿನ ಸಿನಿಮಾವೊಂದರ ವಿಚಾರವಾಗಿ ಅದು ಇನ್ನೂ ಅಂತಿಮಹಂತದಲ್ಲಿದೆ ಫೈನಲ್ ಆದ್ಮೇಲೆ ಖಚಿತ ಪಡಿಸುತ್ತೇನೆ ಎಂದು ಕಾಲಿವುಡ್ ಅಂಗಳಕ್ಕೆ ಹೆಜ್ಜೆ ಹಾಕಲು ರೆಡಿಯಾಗಿದ್ದಾರೆ ರಚಿತಾರಾಮ್ ಇದರ ನಡುವೆ ತಮ್ಮ ಸಮಯ ಪಾಲನೆಯ ಬಗ್ಗೆ ಇರುವ ಕಾಳಜಿ, ಮತ್ತು ಸಮಯದ ಮಹತ್ವ ನಾನು ಸದಾ ಚಟುವಟಿಕೆಯಿಂದ ಕೂಡಿರುವ ವ್ಯಕ್ತಿತ್ವವನ್ನು ಇಷ್ಟಪಡುತ್ತೇನೆ ಹೆಚ್ಛು ಯುವ ಉತ್ಸಾಹಿ ತಂಡದೊಂದಿಗೆ ಕೆಲಸ ಮಾಡಲು ಖುಷಿಯಾಗುತ್ತದೆ ಎಂದು ಹೇಳಿದ್ದಾರೆ. ಅದಲ್ಲದೆ ಡಾಲಿ ಧನಂಜಯ್ ಅವರ ಜೊತೆ ಡಾಲಿ ಎಂಬ ಸಿನಿಮಾದಲ್ಲಿ ನಟಿಸುತ್ತಿದ್ದು ಧನಂಜಯ್ ಕೂಡ ನನಗೆ ಉತ್ಸಾಹಿ ನಟರು ನನಗೆ ಅವರೂ ಕೂಡ ಕೆಲವೊಂದು ನಕರಾತ್ಮಕ ರಗಡ್ ಪಾತ್ರಗಳಿಗೆ ಸ್ಪೂರ್ತಿಯಾಗಿದ್ದಾರೆ ಎಂದು ತಿಳಿಸಿದರು.

%d bloggers like this: