ಕನ್ನಡದಲ್ಲಿ ಬದಲಾಗ್ತಿದೆ ಟ್ರೆಂಡ್, ಮತ್ತೊಬ್ಬ ಖ್ಯಾತ ನಟ ನಿರ್ದೇಶನದತ್ತ

ನಟನೆಯಿಂದ ನಿರ್ದೇಶನಕ್ಕೆ ಬಡ್ತಿಪಡೆದ ಸ್ಯಾಂಡಲ್ ವುಡ್ ನ ದುನಿಯಾ ವಿಜಯ್. ಚಂದನವನದಲ್ಲಿ ಹೊಸದೊಂದು ಟ್ರೆಂಡ್ ಶುರುವಾಗಿದೆ ಅದೇನಪ್ಪಾ ಅಂದ್ರೆ ಹೀರೋಗಳೆಲ್ಲಾ ನಿರ್ದೇಶನಕ್ಕೆ ಇಳಿಯುತ್ತಿರುವುದು. ಕಳೆದ ಒಂದು ಒಂದೂವರೆ ದಶಕಗಳ ಹಿಂದೆ ಡೈರೆಕ್ಟರ್ ಗಳು ಹೀರೋ ಆಗ್ತಾ ಇದ್ದರು. ಆದರೆ ಈಗ ಸ್ವಲ್ಪ ಚೇಂಜ್ ಆಗಿದೆ ಹೀರೋಗಳೇ ನಿರ್ದೇಶಕರಾಗ್ತಾಯಿದ್ದಾರೆ ಕಾರಣ ಅವರಲ್ಲಿರೋ ಫ್ಯಾಷನ್ನೋ, ಇಲ್ಲ ಒಂದ್ ಕೈ ನೋಡೋಣ ಅಂತಾಲೋ ಇಲ್ಲ ಸತತ ಸೋಲುಗಳಿಂದ ನಾನೇ ಡೈರೆಕ್ಷನ್ ಮಾಡೋಣ ಅಂತಾಲೋ ಗೊತ್ತಿಲ್ಲ ಒಟ್ನಲ್ಲಿ ಚಂದನವನದಲ್ಲಿ ಹೊಸದೊಂದು ಪರ್ವ ಶುರುವಾಗಿದೆ. ದಶಕಗಳ ಹಿಂದೆ ನಟ ನಿರ್ದೇಶಕರುಗಳಾದ ರವಿಚಂದ್ರನ್, ಉಪೇಂದ್ರ, ಎಸ್ ಮಹೆಂದರ್, ಓಂ ಪ್ರಕಾಶ್ ರಾವ್, ಇತ್ತೀಚಿನ ನಿರ್ದೇಶಕರುಗಳಾದ ಜೋಗಿ ಪ್ರೇಮ್, ಪವನ್ ಒಡೆಯರ್ ಹೀಗೆ ಸಾಲು ಸಾಲು ನಿರ್ದೇಶಕರುಗಳು ನಟರಾದರು ಇವರಲ್ಲಿ ಬೆರಳೆಣಿಕೆ ಅಷ್ಟೇ ನಿರ್ದೇಶಕರು ನಟರಾಗಿ ಯಶಸ್ವಿಯಾದರು.

ಇದೇ ರೀತಿ ಹೊಸತಲೆಮಾರಿನ ನಟರುಗಳು ನಿರ್ದೇಶನಕ್ಕೆ ಹೆಜ್ಜೆ ಇಡುತ್ತಿದ್ದಾರೆ. ಅದರಲ್ಲಿ ಗಣೇಶ್, ರಕ್ಷಿತ್ ಶೆಟ್ಟಿ, ರಿಷಭ್ ಶೆಟ್ಟಿ, ಸಾಲಿಗೆ ಇದೀಗ ದುನಿಯಾ ವಿಜಯ್ ಸಹ ಸೇರ್ಪಡೆಗೊಂಡಿದ್ದಾರೆ. ಹೌದು ದುನಿಯಾ ವಿಜಯ್ ಸ್ಯಾಂಡಲ್ ವುಡ್ ನಲ್ಲಿ ಫಾರ್ಮ್ನಲ್ಲಿ ಇರೋ ನಟ, ಅವರಿಗೆ ಬೇಡಿಕೆ ಕುಸಿಯದಿದ್ದರು ಕೊಂಚ ಸೋಲುಗಳಿಂದ ಅವರು ತಾವೇ ನಿರ್ದೇಶನಕ್ಕೆ ಇಳಿದಿದ್ದಾರೋ ಏನೋ ಒಟ್ನಲ್ಲಿ ಅವರಿಗೊಂದು ಬ್ರೇಕ್ ಬೇಕಿದೆ. ಆ ಬ್ರೇಕ್ ತಮ್ಮ ನಿರ್ದೇಶನದ ಮೂಲಕವೇ ಅದಕ್ಕಾಗಿಯೇ ಅವರು ಸಲಗ ಎಂಬ ಸಿನಿಮಾ ತಾವೇ ನಿರ್ದೆಶನ ಮಾಡಿದ್ದಾರೆ. ಕೆ.ಪಿ ಶ್ರೀಕಾಂತ್ ಅವರ ಟಗರು ಟೀಮ್ ಸಂಪೂರ್ಣ ಇದರಲ್ಲಿದ್ದು. ಈಗಾಗಲೇ ಹಾಡುಗಳು ಹಿಟ್ ಆಗಿವೆ. ತಮ್ಮ ನಿರ್ದೇಶನದ ಮೊದಲ ಸಿನಿಮಾ ಬಿಡುಗಡೆ ಆಗುವ ಮೊದಲೇ ಮತ್ತೊಂದು ಕಥೆಗೆ ನಿರ್ದೇಶನ ಮಾಡುವ ಸುದ್ದಿ ನೀಡಿದ್ದಾರೆ. ಅದು ಸಹ ರಾಜ್ ಕುಟುಂಬದ ಮನೆ ಮಗ ಲಕ್ಕಿ ಗೋಪಾಲ ಅವರನ್ನ ನಾಯಕನಾಗಿಸುವ ಮೂಲಕ ಮತ್ತೊಮ್ಮೆ ಡೈರೆಕ್ಟರ್ ಕ್ಯಾಪ್ ತೊಡಲಿದ್ದಾರೆ ದುನಿಯ್ ವಿಜಯ್ ಈ ಚಿತ್ರದ ಬಗ್ಗೆ ಹೆಚ್ಚು ಮಾಹಿತಿ ನೀಡಿಲ್ಲ ವಾದರು ತಮ್ಮ ಮುಂದಿನ ಯೋಜನೆಯ ಬಗ್ಗೆ ಮಾಹಿತಿ ನೀಡಿದ್ದಾರೆ. ಒಟ್ಟಿನಲ್ಲಿ ಸ್ಯಾಂಡಲ್ ವುಡ್ ನಲ್ಲಿ ನಾಯಕನಟರು ನಿರ್ದೇಶನಕ್ಕೆ ಹೊರಳಿರುವುದು ಪ್ರಶಂಸೆಯ ವಿಚಾರವಾಗಿದೆ.

%d bloggers like this: