ಕನ್ನಡದಲ್ಲಿ ಹೊಸ ಹಾರರ್ ಚಿತ್ರವನ್ನು ತರುತ್ತಿದೆ ಹೊಸ ಚಿತ್ರತಂಡ

ಹಾರರ್ ಜಾನರ್ ಸಿನಿಮಾಗಳು ಕನ್ನಡದಲ್ಲಿ ಇತ್ತೀಚೆಗೆ ಕಡಿಮೆ ಆಗಿ ಪ್ರಯೋಗಾತ್ಮಕ ಸಿನಿಮಾಗಳು ಬರುತ್ತಿವೆ. ಇದರ ನಡುವೆ ಕನ್ನಡದಲ್ಲಿ ಕಪಾಲ ಎಂಬ ಹಾರರ್ ಸಿನಿಮಾ ಬರುತ್ತಿದೆ. ಕನ್ನಡದ ಪ್ರಸಿದ್ದ ಸುದ್ದಿ ವಾಹಿನಿಯ ನಿರೂಪಕಿ ಇದೀಗ ಸಿನಿಮಾಗೆ ನಾಯಕಿ. ಅದೇ ರೀತಿ ಒಂದಷ್ಟು ಸುದ್ದಿ ವಾಹಿನಿಗಳಲ್ಲಿ ಎಡಿಟರ್ ಕೆಲಸ ಮಾಡದ್ದ ಜರ್ನಲಿಸ್ಟ್ ನಿರ್ದೇಶಕರಾಗಿ ಸ್ಯಾಂಡಲ್ ವುಡ್ಗೆ ಎಂಟ್ರಿ ಕೊಟ್ಟಿದ್ದಾರೆ. ಇದೊಂದು ರೀತಿಯಾಗಿ ವಿಶೇಷ ಅಂತ ಹೇಳ್ಬೋದು. ನಿರೂಪಕಿ ಒಬ್ರು ನಾಯಕಿ ನಿರ್ದೇಶಕ ಎಡಿಟರ್ ಆಗಿದ್ದವರು ಒಟ್ಟಿಗೆ ಸಿನಿಮಾರಂಗಕ್ಕೆ ಬಂದಾಗ ಏನೋ ಒಂದು ಹೊಸತನವನ್ನು ಕಾಣಬಹುದು ಎಂಬ ನಿರೀಕ್ಷೆ ಅಂತೂ ಇದ್ದೇ ಇದೆ. ಹೌದು ಖಾಸಗಿ ವಾಹಿನಿರಲ್ಲಿ ಸುದ್ದಿ ವಾಚಕಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಪ್ರತೀಕ್ಷಾ ಗೌಡ ಇದೇ ಮೊದಲ ಬಾರಿಗೆ ಸಿನಿಮಾದಲ್ಲಿ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ತಮ್ಮ ವೃತ್ತಿಯಂತೆ ಸಿನಿಮಾದಲ್ಲಿಯೂ ಕೂಡ ನಿರೂಪಕಿಯಾಗಿ ಕಾಣಿಸಿಕೊಂಡಿದ್ದಾರೆ. ಸ್ಕಾರ್ ಪ್ರಾಡಕ್ಟ್ಸ್ ಬ್ಯಾನರ್ ಅಡಿಯಲ್ಲಿ ಸೌಮ್ಯ ಶೆಟ್ಟಿ ಅವರು ಈ ಕಪಾಲ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ನಿರ್ಮಾಪಕಿ ಸೌಮ್ಯ ಶೆಟ್ಟಿ ಅವರು ಅಮೆರಿಕಾದಲ್ಲಿ ಶೆಫ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹಲವು ಮಾಧ್ಯಮಗಳಲ್ಲಿ ಎಡಿಟರ್ ಆಗಿ ಕಾರ್ಯ ನಿರ್ವಹಿಸಿದ ವಿನಯ್ ಯದುನಂದನ್ ಅವರು ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಕಪಾಲ ಚಿತ್ರ ನಿರ್ದೇಶನ ಮಾಡಿದ್ದಾರೆ. ಇದೊಂದು ಸಸ್ಪೆನ್ಸ್ ಹಾರರ್ ಥ್ರಿಲ್ಲರ್ ಸಿನಿಮಾ ಆಗಿದೆಯಂತೆ. ಈ ಸಿನಿಮಾ ಮೂರು ಕಾಲಘಟ್ಟದಲ್ಲಿ ಸಾಗುತ್ತದೆಯಂತೆ‌. ಕಪಾಲ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿಮನ್ಯೂ, ಪ್ರಜ್ವಲ್, ಆರ್ಯನ್ ಚೌಧರಿ, ಸುಷ್ಮಾ ಗೌಡ, ಪ್ರತೀಕ್ಷಾ ಗೌಡ ನಟಿಸಿದ್ದಾರೆ‌. ಈ ಚಿತ್ರಕ್ಕೆ ಸಚಿನ್ ಬಸ್ರೂರ್ ಅವರು ರಾಗ ಸಂಯೋಜನೆ ಮಾಡಿದ್ದು, ಪ್ರವೀಣ್ ಅವರು ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದಾರೆ. ಇತ್ತೀಚೆಗೆ ಕಪಾಲ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು ಈಗಾಗಲೇ ಚಿತ್ರದ ಬಗ್ಗೆ ಕುತೂಹಲ ಮೂಡಿಸಿದೆ.

%d bloggers like this: