ಕನ್ನಡದಲ್ಲಿ ಹೊಸ ಪ್ರಯತ್ನ, ಹಾಲಿವುಡ್ ನಿರ್ದೇಶಕನ ಹೊಸ ಕನ್ನಡ ಚಿತ್ರ

ಕನ್ನಡ ಚಿತ್ರರಂಗದಲ್ಲಿ ಇದೇ ಮೊದಲ ಬಾರಿಗೇ ಹೊಸ ಬಗೆಯ ಚಿತ್ರವೊಂದು ಮೂಡಿ ಬರುತ್ತಿದೆ. ಅದೂ ಕೂಡ ತಂತ್ರಜ್ಞಾನದ ಮೂಲಕ ನಿರ್ದೇಶನ ಮಾಡಿರುವ ಈ ಚಿತ್ರ ನಿಜಕ್ಕೂ ಕೂಡ ಭಾರಿ ಕುತೂಹಲ ಮೂಡಿಸುತ್ತಿದೆ. ಕನ್ನಡ ಚಿತ್ರರಂಗದಲ್ಲಿ ಈಗಾಗಲೇ ಸಾಕಷ್ಟು ಪ್ರಯೋಗಾತ್ಮಕ ಸಿನಿಮಾಗಳು ತಯಾರಾಗುತ್ತಿವೆ. ಹೊಸಬರ ಕಂಟೆಂಟ್ ಓರಿಯೆಂಟೆಡ್ ಸಿನಿಮಾಗಳು ಜನ ಮೆಚ್ಚುಗೆ ಪಡೆದು ಬಾಕ್ಸ್ ಅಫೀಸ್ ನಲ್ಲಿ ಭಾರಿ ಸದ್ದು ಮಾಡುತ್ತಿವೆ. ಅದರಂತೆ ಇದೀಗ ವರ್ಚ್ಯುವಲ್ ಡೈರೆಕ್ಷನ್ ಮೂಲಕ ತಯಾರಾಗಿರುವ ಚಿತ್ರವೊಂದು ಇದೇ ಮೊದಲ ಬಾರಿಗೆ ತೆರೆ ಮೇಲೆ ಬರುತ್ತಿದೆ. ಹೌದು ಯು.ಎಸ್.ಎ ಮೂಲದ ಮತೀನ್ ಹುಸೇನ್ ಎಂಬುವರು ಕೆಲವು ವರ್ಷಗಳ ಹಿಂದೆ ಮುಂಬೈಗೆ ಬಂದು ಅನುಪಮ್ ಖೇರ್ ಫಿಲ್ಮ್ ಇನ್ಸ್ಟಿಟ್ಯೂಟ್ ನಲ್ಲಿ ಆಕ್ಟಿಂಗ್ ಕೋರ್ಸ ಮಾಡುತ್ತಾರೆ.

ತದ ನಂತರ ಕನ್ನಡದಲ್ಲಿ ಸಿನಿಮಾವೊಂದನ್ನ ಮಾಡಬೇಕು ಎಂದು ಹಾಲಿವುಡ್ ಫೇಮಸ್ ಫಿಲ್ಮ್ ಡೈರೆಕ್ಟರ್ ರಾಂಡಿ ಕೆಂಟ್ ಅವರನ್ನ ಭೇಟಿ ಮಾಡಿ ಚರ್ಚೆ ಮಾಡುತ್ತಾರೆ. ಕಥೆ ಎಲ್ಲಾ ಸಿದ್ದಪಡಿಸಿಕೊಂಡು ಮತೀನ್ ಹುಸೇನ್ ಮತ್ತು ನಿರ್ದೇಶಕ ರಾಂಡಿ ಕೆಂಟ್ ಅವರು ಸಿನಿಮಾ ಮಾಡಲು ಯೋಜನೆ ಹಾಕಿಕೊಳ್ಳುತ್ತಾರೆ. ಆದರೆ ನಿರ್ದೇಶಕ ರಾಂಡಿ ಕೆಂಟ್ ಅವರಿಗೆ ಬೆಂಗಳೂರಿಗೆ ಬರಲು ವೀಸಾ ತೊಂದರೆ ಆಗಿ ನಿರ್ದೇಶಕರು ಲಾಸ್ ಎಂಜಲೀಸ ನಲ್ಲಿಯೇ ಇರಬೇಕಾಗುತ್ತದೆ. ಆಗ ಆನ್ಲೈನ್ ಅಂದ್ರೆ ಅಂತರ್ಜಾಲ ಸ್ಕೈಪ್ ಮೂಲಕವೇ ರಾಂಡಿ ಕೆಂಟ್ ಅವರು ನಿರ್ದೇಶನ ಮಾಡಲು ಮುಂದಾಗುತ್ತಾರೆ. ಲಾಸ್ ಎಂಜಲೀಸ್ ನಲ್ಲಿ ಕೂತು ರಾಂಡಿಕೆಂಟ್ ಅವರು ಆಕ್ಷನ್ ಕಟ್ ಹೇಳಿದರೆ ಬೆಂಗಳೂರಿನಲ್ಲಿ ಕಲಾವಿದರು ನಟನೆ ಮಾಡಿ.

ಈ ಮೂಲಕ ರೋಢ್ ಕಿಂಗ್ ಎಂಬ ಈ ವಿಭಿನ್ನ ಸಿನಿಮಾ ಇದೀಗ ಇದೇ ಸೆಪ್ಟೆಂಬರ್ ತಿಂಗಳಿನಲ್ಲಿ ಬಿಡುಗಡೆಗೊಳ್ಳಲು ಎಲ್ಲಾ ರೀತಿಯಾಗಿ ಸಿದ್ದವಾಗಿದೆ. ಈ ರೋಡ್ ಕಿಂಗ್ ಚಿತ್ರ ಲವ್ ಬ್ರೇಕಪ್ ಆಗಿ ಎಕ್ಸ್ ಸಿಂಡ್ರೋಮ್ಗೆ ಒಳಾಗದ ಪ್ರೇಮಿಗಳ ಸುತ್ತಾ ಏನೆಲ್ಲಾ ನಡೆಯುತ್ತದೆ ಎಂಬುದನ್ನ ಕಥೆಯನ್ನಾಗಿ ಮಾಡಲಾಗಿದೆಯಂತೆ. ರೊಮ್ಯಾಂಟಿಕ್ ಅಂಡ್ ಥ್ರಿಲ್ಲರ್ ಅಂಶಗಳನ್ನ ಒಳಗೊಂಡಿರುವ ಈ ರೋಡ್ ಕಿಂಗ್ ಚಿತ್ರದಲ್ಲಿ ನಾಯಕ ನಟರಾಗಿ ಮತೀನ್ ಹುಸೇನ್ ಅವರು ಕಾಣಿಸಿಕೊಂಡಿದ್ದಾರೆ. ನಾಯಕಿಯಾಗಿ ನಟಿ ರುಕ್ಷರ್ ದಿಲ್ಹಾನ್ ನಟಿಸಿದ್ದಾರೆ. ಈ ಹಿಂದೆ ಇವರು ವಿನಯ್ ರಾಜ್ ಕುಮಾರ್ ಅವರ ರನ್ ಆಂಟೋನಿ ಚಿತ್ರದಲ್ಲಿ ನಟಿಸಿದ್ದರು. ಈ ಚಿತ್ರಕ್ಕೆ ರ್ಯಾಪರ್ ಚಂದನ್ ಶೆಟ್ಟಿ ಸಾಹಿತ್ಯ ಮತ್ತು ರಾಗ ಸಂಯೋಜನೆ ಮಾಡಿದ್ದು, ಈಗಾಗಲೇ ಈ ಚಿತ್ರದ ಕೊಡು ನನಗೆ ಹಾಡು ಹಿಟ್ ಆಗಿದೆ.

%d bloggers like this: