ಕನ್ನಡದಲ್ಲಿ ಹೊಸ ಥರದ ಚಿತ್ರ, ಇದೇ ವಾರ ಬಿಡುಗಡೆ ಆಗುತ್ತಿದೆ ಕನ್ನಡದ ಬಹು ನಿರೀಕ್ಷಿತ ಚಿತ್ರ

ಸ್ಯಾಂಡಲ್ ವುಡ್ ಸ್ಟಾರ್ ನಟ ಶರಣ್ ಮತ್ತು ಆಶಿಕಾ ರಂಗನಾಥ್ ಮತ್ತೆ ಜೋಡಿ ಮತ್ತೆ ಮೋಡಿ ಮಾಡಲಿದೆಯಾ ಎಂಬ ಪ್ರಶ್ನೆ ಇದೀಗ ಎಲ್ಲೆಡೆ ಸದ್ದು ಮಾಡಿದೆ. ಈ ಪ್ರಶ್ನೆಗೆ ಇದೇ ಮೇ ತಿಂಗಳ 6ರಂದು ಉತ್ತರ ಸಿಗಲಿದೆ ಅಂತಿದ್ದಾರೆ ಚಿತ್ರ ತಂಡ. ಹೌದು ಸಿಂಪಲ್ ಸುನಿ ನಿರ್ದೇಶನದಲ್ಲಿ ಮೂಡಿಬಂದಿರುವ ಅವತಾರ್ ಪುರುಷ ಸಿನಿಮಾ ಇದೇ ಮೇ 6ರಂದು ರಾಜ್ಯಾದ್ಯಂತ ಅದ್ದೂರಿಯಾಗಿ ಬಿಡುಗಡೆ ಆಗಲಿದೆ. ಇದುವರೆಗೆ ಸಿಂಪಲ್ ಸುನಿ ಅವರ ನಿರ್ದೇಶನದಲ್ಲಿ ಬಂದಿರುವ ಬಹುತೇಕ ಸಿನಿಮಾಗಳು ಯಶಸ್ಸು ಪಡೆದಿವೆ. ಯಾಕಂದ್ರೆ ಅವರ ಚಿತ್ರಗಳಲ್ಲಿ ತುಂಟತನದ ಮಜಾ ಅನಿಸುವಂತಹ ಸಂಭಾಷಣೆಯ ಜೊತೆಗೆ ಕಥೆಯೂ ಕೂಡ ಗಟ್ಟಿತನ ಹೊಂದಿರುತ್ತದೆ. ನಿರೂಪಣೆಯಲ್ಲಿ ಎತ್ತಿದ ಕೈ ಆಗಿರುವ ಸಿಂಪಲ್ ಸುನಿ ಅವರು ಈ ಬಾರಿ ಬ್ಲ್ಯಾಕ್ ಮ್ಯಾಜಿಕ್ ಸಬ್ಜೆಕ್ಟ್ ಆಯ್ಕೆ ಮಾಡಿಕೊಂಡಿದ್ದಾರೆ. ಇದನ್ನ ವೆಬ್ ಸೀರಿಸ್ ಮಾಡೋಣ ಅಂತ ಹೊರಟಿದ್ದರಂತೆ.

ಆದರೆ ಈ ಕಥೆ ಕೇಳಿದ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಅವರು ಸಿನಿಮಾವನ್ನಾಗೇ ಮಾಡೋಣ ಅಂತೇಳಿ ಈ ಕಥೆಯನ್ನು ಅವತಾರ್ ಪುರುಷ ಅಂತ ಟೈಟಲ್ ಇಟ್ಟು ಚಿತ್ರ ಮಾಡಿ ಇದೀಗ ಈ ಸಿನಿಮಾವನ್ನ ಎರಡು ಭಾಗಗಳಾಗಿ ರಿಲೀಸ್ ಮಾಡಲಿದ್ದಾರೆ. ಇದೇ ಮೇ 6ರಂದು ಅವತಾರ್ ಪುರುಷ ಪಾರ್ಟ್ ಒನ್ ತೆರೆಗೆ ಬರಲಿದೆ. ಈ ಸಿನಿಮಾದಲ್ಲಿ ನಾಯಕ ನಟ ಶರಣ್ ಅವರು ಜ್ಯೂನಿಯರ್ ಆರ್ಟಿಸ್ಟ್ ಪಾತ್ರ ಮಾಡಿದ್ದು, ಯಾವೆಲ್ಲಾ ರೀತಿಯ ಅವತಾರ ಎತ್ತಿದ್ದಾರೆ ಎಂಬುದನ್ನು ಸಿನಿಮಾ ಬಿಡುಗಡೆ ಆದ ಮೇಲೆ ನೋಡಬೇಕು. ಇನ್ನು ಈ ಚಿತ್ರಕ್ಕೆ ನಾಯಕಿಯಾಗಿ ಆಶಿಕಾ ರಂಗನಾಥ್ ನಟಿಸಿದ್ದಾರೆ. ರ್ಯಾಂಬೋ2 ಚಿತ್ರದಲ್ಲಿ ಶರಣ್ ಮತ್ತು ಆಶಿಕಾ ಜೋಡಿಯಾಗಿ ನಟಿಸಿದ್ದರು. ಇವರಿಬ್ಬರ ಜೋಡಿ ಪ್ರೇಕ್ಷಕರಿಗೆ ಮೋಡಿ ಮಾಡಿತ್ತು. ಚುಟು ಚುಟು ಸಾಂಗ್ ಸಖತ್ ಫೇಮಸ್ ಆಗಿತ್ತು.

ಅದರಂತೆ ಅವತಾರ್ ಪುರುಷ ಚಿತ್ರದಲ್ಲಿ ಕೂಡ ಹಿರೋಹೊಂಡಾ ಎಂಬ ಸಾಂಗ್ ನಲ್ಲಿ ಶರಣ್ ಮತ್ತು ಆಶಿಕಾ ಅವರು ಬಿಂದಾಸ್ ಸ್ಟೆಪ್ ಹಾಕಿದ್ದಾರೆ. ಅವತಾರ್ ಪುರುಷ ಚಿತ್ರದ ಟೀಸರ್ ಈಗಾಗಲೇ ಚಿತ್ರದ ಬಗ್ಗೆ ನಿರೀಕ್ಷೆ ಹೆಚ್ಚು ಮಾಡಿದೆ. ಅವತಾರ್ ಪುರುಷ ಚಿತ್ರಕ್ಕೆ ಶರಣ್ ಅವರ ಖಾಯಂ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರು ರಾಗ ಸಂಯೋಜನೆ ಮಾಡಿದ್ದಾರೆ. ಈಗಾಗಲೇ ಬಿಡುಗಡೆ ಆಗಿರುವ ಎಲ್ಲಾ ಹಾಡುಗಳು ಕೇಳುಗರಿಗೆ ಇಷ್ಟವಾಗಿವೆ. ಇನ್ನು ಪಾತ್ರ ವರ್ಗದಲ್ಲಿ ಡೈಲಾಗ್ ಕಿಂಗ್ ಸಾಯಿ ಕುಮಾರ್, ಅಯ್ಯಪ್ಪ, ಸಾಧುಕೋಕಿಲ ಅಂತಹ ಅನುಭವಿ ಕಲಾವಿದರ ಬಳಗವೇ ಚಿತ್ರದಲ್ಲಿ ತುಂಬಿದೆ. ಮತ್ತೊಮ್ಮೆ ನಟ ಶರಣ್ ಅವರು ಸಸ್ಪೆನ್ಸ್ ಥ್ರಿಲ್ಲರ್ ಫ್ಯಾಮಿಲಿ ಡ್ರಾಮಾದ ಮೂಲಕ ಸಿನಿ ಪ್ರೇಕ್ಷಕರಿಗೆ ಮನರಂಜನೆ ನೀಡಲು ಇದೇ ಮೇ 6ರಂದು ಚಿತ್ರಮಂದಿರಗಳಿಗೆ ಬರುತ್ತಿದ್ದಾರೆ. ಇದು ಅವರ ಅಭಿಮಾನಿಗಳಿಗೆ ಮನರಂಜನೆಯ ಹಬ್ಬದೂಟ ಎಂದು ಹೇಳಬಹುದು.

%d bloggers like this: