ಕನ್ನಡದಲ್ಲಿ ಇಂದಿನಿಂದ ಶುರುವಾಗುತ್ತಿದೆ ಬಹುಕೋಟಿ ವೆಚ್ಚದ ಹೊಸ ಚೆಂದದ ಧಾರಾವಾಹಿ

ಇತ್ತೀಚೆಗೆ ಕನ್ನಡ ಕಿರುತೆರೆಯಲ್ಲಿ ಬಹುದೊಡ್ಡ ಬದಲಾವಣೆ ಕಾಣುತ್ತಿದೆ. ಕೇವಲ ಅತ್ತೆ ಸೊಸೆ ಜಗಳ, ಕೌಟಂಬಿಕ ಕಥೆಯನ್ನಷ್ಟೇ ಸುತ್ತುವರಿದಿದ್ದ ಕನ್ನಡ ಕಿರುತೆರೆಯಲ್ಲಿ ಇತ್ತೀಚೆಗೆ ಕೆಲವು ವರ್ಷಗಳಿಂದೀಚೆಗೆ ಹೊಸ ಹೊಸ ಬಗೆಯ ಕಥಾಹಂದರ ಹೊಂದಿರುವ ಧಾರಾವಾಹಿಗಳು ಮೂಡಿ ಬರುತ್ತಿವೆ. ಕೇವಲ ಕಥೆಯಲ್ಲಿ ಮಾತ್ರ ಬದಲಾವಣೆ ಮಾಡಿಕೊಳ್ಳದೆ ಮೇಕಿಂಗ್ ನಲ್ಲಿಯೂ ಕೂಡ ಯಾವ ಸಿನಿಮಾಗಳಿಗೆ ಕೂಡ ಕಡಿಮೆ ಇಲ್ಲದಂತೆ ತಂತ್ರಜ್ಞಾನ ಬಳಸಿಕೊಳ್ಳಲಾಗುತ್ತಿದೆ. ಹೀಗೆ ಕನ್ನಡ ಧಾರಾವಾಹಿಗಳು ತನ್ನ ಗುಣಮಟ್ಟದಲ್ಲಿ ಅಭಿವೃದ್ಧಿ ಪಡಿಸಿಕೊಂಡು ಪರಭಾಷಾ ಧಾರಾವಾಹಿಗಳಿಗೆ ಸೆಡ್ಡು ಹೊಡೆಯುತ್ತಿವೆ. ಅದು ಯಾವ ಮಟ್ಟಿಗೆ ಅಂದರೆ ಕನ್ನಡ ಧಾರಾವಾಹಿ ಹಿಂದಿಯಲ್ಲಿ ಕೂಡ ಡಬ್ಬಿಂಗ್ ಆಗುತ್ತಿವೆ. ಸದ್ಯದ ಮಟ್ಟಿಗೆ ಕನ್ನಡ ಕಿರುತೆರೆಯಲ್ಲಿ ಪ್ರಸಿದ್ದತೆ ಪಡೆದು ಮೇಲ್ಪಂಕ್ತಿಯಲ್ಲಿ ಇರುವ ವಾಹಿನಿ ಅಂದರೆ ಅದು ಕಲರ್ಸ್ ಕನ್ನಡ.

ಅನೇಕ ಬಗೆ ಬಗೆಯ ಧಾರಾವಾಹಿಗಳು ಅಪಾರ ಜನಪ್ರಿಯತೆ ಪಡೆಯುವ ಮೂಲಕ ನಾಡಿನಾದ್ಯಂತ ಕಲರ್ಸ್ ಕನ್ನಡ ವಾಹಿನಿ ಮನೆ ಮಾತಾಗಿದೆ. ಇದೀಗ ಇದೇ ಕಲರ್ಸ್ ಕನ್ನಡ ವಾಹಿನಿಯು ಕಿರುತೆರೆ ಲೋಕದಲ್ಲಿ ಹೊಸದೊಂದು ಮೈಲಿಗಲ್ಲು ಸೃಷ್ಟಿಸಲು ಹೊರಟಿದೆ. ಹೌದು ಈಗಾಗಲೇ ಹಿಂದಿ ಕಿರುತೆರೆ ಲೋಕ ಪೌರಾಣಿಕ ಧಾರಾವಾಹಿ ನಿರ್ಮಾಣ ಮಾಡುವ ಮೂಲಕ ಸಂಚಲನ ಸೃಷ್ಟಿಸಿತ್ತು. ಇದೀಗ ಕನ್ನಡದಲ್ಲಿ ನಮ್ಮ ನಾಡಿನ ಮಣ್ಣಿನಲ್ಲಿ ನಡೆದಿರುವ ಐತಿಹಾಸಿಕ ಪ್ರಸಿದ್ದ ಸಾಧಕರ ಕಥೆಗಳನ್ನು ತೆರೆಯ ಮೇಲೆ ತರುವ ಪ್ರಯತ್ನ ನಡೆಸಿದೆ. ಹೌದು ಕರ್ನಾಟಕ ಸಂಗೀತದ ಪಿತಾಮಹರಾದ ಪುರಂದರ ದಾಸರ ಜೀವನಚರಿತ್ರೆಯನ್ನ ಧಾರಾವಾಹಿಯಾಗಿ ಮಾಡಲು ಹೊರಟಿದ್ದಾರೆ ಕಲರ್ಸ್ ಕನ್ನಡ ಸಂಸ್ಥೆ. ಕಳೆದ ಎರಡು ವರ್ಷಗಳ ನಿರಂತರ ಅಧ್ಯಾಯನ ಮತ್ತು ಸಂಶೋಧನೆ ನಡೆಸಿ ಅಂದಿನ ದಿನಮಾನಗಳ ಸ್ಥಿತಿಗತಿ ಜೀವನ ಶೈಲಿ, ಉಡುಗೆ ತೊಡುಗೆ ಹೀಗೆ ಎಲ್ಲಾ ರೀತಿಯ ಬಗ್ಗೆ ತಿಳಿದು ಅದಕ್ಕೆ ಪೂರಕವಾದ ವಸ್ತ್ರ ವಿನ್ಯಾಸ, ಚಿತ್ರೀಕರಣದ ಸೆಟ್ ಗಳ ನಿರ್ಮಾಣ ಮಾಡಿದೆ.

ಪುರಂದರ ದಾಸರ ಕಾಲದ ರಾಜಬೀದಿ, ಶ್ರೀನಿವಾಸ ನಾಯಕರ ಮನೆ, ಪದ್ಮ ಅವರ ಮನೆಯ, ಚಿನ್ನದಂಗಡಿ ಹೀಗೆ ಪ್ರತಿಯೊಂದರ ದೃಶ್ಯ ಸನ್ನಿವೇಶ ಕೂಡ ಅದ್ದೂರಿಯಾಗಿ ಕಾಣುವಂತೆ ಸೆಟ್ ಹಾಕಲಾಗಿದ್ದು, ಈ ಸೆಟ್ ಗಳಿಗೇನೇ ಬರೋಬ್ಬರಿ 1.25 ಕೋಟಿಗೂ ಅಧಿಕ ವೆಚ್ಚವಾಗಿದೆಯಂತೆ. ಈ ಪುರಂದಾಸರ ಜೀವನ ಚರಿತ್ರೆಯ ಧಾರಾವಾಹಿಯು ಇಂದಿನಿಂದ ಸೋಮವಾರ 28ರಿಂದ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತದೆ. ಇದರಲ್ಲಿ ನಟಿಸಿರುವ ಬಹುತೇಕ ಕಲಾವಿದರು ಅನುಭವವುಳ್ಳ ಹಿರಿಯ ಕಲಾವಿದರಾಗಿದ್ದಾರೆ. ಇನ್ನು ಈ ಇತಿಹಾಸ ಪ್ರಸಿದ್ಧ ಪುರಂದರದಾಸರ ಜೀವನ ಚರಿತ್ರೆ ಧಾರಾವಾಹಿಗೆ ಕಾರ್ತಿಕ್ ಪಾರಾಡ್ಕರ್ ಬಂಡವಾಳ ಹೂಡಿದ್ದು, ಬಿ.ಮಧುಸೂದನ್ ಆಕ್ಷನ್ ಕಟ್ ಹೇಳಿದ್ದಾರೆ. ಕಾರ್ತಿಕ್ ಶರ್ಮಾ ರಾಗ ಸಂಯೋಜನೆ ಮಾಡಿದ್ದು, ರವಿ ಕಿಶೋರ್ ಡಿ.ಓ.ಪಿ ಕೆಲಸ ಮಾಡಿದ್ದಾರೆ. ರೋಷನ್ ಅಯ್ಯಪ್ಪ ಮತ್ತು ಶಿಲ್ಪಾ ಹೆಗ್ಡೆ ಎಂಬುವವರು ವಸ್ತ್ರ ವಿನ್ಯಾಸ ಜವಬ್ದಾರಿ ನಿಭಾಯಿಸಿದ್ದಾರೆ.

%d bloggers like this: