ದೊಡ್ಮನೆಯ ಮೂರನೇಯ ತಲೆಮಾರಿನ ಕುಡಿ ವಿನಯ್ ರಾಜಕುಮಾರ್ ಅವರು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಾಗಿದೆ. ಡಾ ರಾಜಕುಮಾರ್ ಅವರ ಪುತ್ರ ರಾಘವೇಂದ್ರ ರಾಜಕುಮಾರ್ ಅವರ ಮಗ ವಿನಯ್, 2015ರಲ್ಲಿ ಸಿದ್ದಾರ್ಥ ಎಂಬ ಚಿತ್ರದ ಮೂಲಕ ನಾಯಕನಟನಾಗಿ ಅಧಿಕೃತವಾಗಿ ಚಿತ್ರರಂಗಕ್ಕೆ ಕಾಲಿಟ್ಟರು. ಸಿದ್ದಾರ್ಥ್, ರನ್ ಆಂಟನಿ ಸಿನಿಮಾಗಳ ಮೂಲಕ ಚಂದನವನದಲ್ಲಿ ಭರವಸೆಯನ್ನು ಮೂಡಿಸಿದ್ದರು. ಈ ಎರಡೂ ಚಿತ್ರಗಳಲ್ಲಿ ಲವರ್ ಬಾಯ್ ಆಗಿ ನಟಿಸಿದ್ದ ಇವರು, ತಮ್ಮ ಮುಂದಿನ ಪ್ರಾಜೆಕ್ಟಿನಲ್ಲಿ ಹೊಸ ಲುಕ್ ನೊಂದಿಗೆ ಮಿಂಚಲು ರೆಡಿಯಾಗಿದ್ದಾರೆ. ವಿನಯ್ ರಾಜ್ ಕುಮಾರ್ ಅವರ ಮುಂದಿನ ಪ್ರಾಜೆಕ್ಟ್ಗೆಪೆಪೆ ಎಂದು ಹೆಸರಿಡಲಾಗಿದೆ.

ಪೆಪೆ ಚಿತ್ರದಲ್ಲಿ ವಿಭಿನ್ನವಾದ ಗೆಟಪ್ ನೊಂದಿಗೆ ಅಭಿಮಾನಿಗಳನ್ನು ರಂಜಿಸಲು ವಿನಯ್ ಹೊರಟಿದ್ದಾರೆ. ಈಗಾಗಲೇ ಪೆಪೆ ಸಿನಿಮಾದ ಟೀಸರ್ ರಿಲೀಸ್ ಆಗಿದ್ದು, ಯೂಟ್ಯೂಬ್ ನಲ್ಲಿ ಸಕ್ಕತ್ ಕ್ರೇಜ್ ಹುಟ್ಟಿಸಿದೆ. ಇಷ್ಟು ದಿನ ರೋಮ್ಯಾಂಟಿಕ್ ಹೀರೋ ಆಗಿ ಗುರುತಿಸಿಕೊಂಡಿದ್ದ ಇವರನ್ನು ಈಗ ಮಾಸ್ ಹೀರೋ ಆಗಿ ನೋಡಲು ಇವರ ಅಭಿಮಾನಿಗಳು ಕಾಯುತ್ತಿದ್ದಾರೆ. ಈ ಸಿನಿಮಾಕ್ಕೆ ಶ್ರೀಲೇಶ್ ಎಸ್ ನಾಯರ್ ಆಕ್ಷನ್-ಕಟ್ ಹೇಳಿದ್ದು, ಉದಯಶಂಕರ್ ಅವರು ನಿರ್ಮಾಣ ಮಾಡಿದ್ದಾರೆ. ಸಮರ್ಥ್ ಅವರ ಕ್ಯಾಮರಾ ಹಾಗೂ ಮನು ಶೆಡ್ಗರ್ ಅವರ ಸಂಕಲನ ಈ ಚಿತ್ರಕ್ಕಿದೆ.



ಪೆಪೆ ಚಿತ್ರದಲ್ಲಿ ಮಾಸ್ ಲುಕ್ ನಲ್ಲಿ ವಿನಯ ರಾಜಕುಮಾರ್ ಅವರು ಎಂಟ್ರಿ ಕೊಟ್ಟಿದ್ದಾರೆ. ಕೈಯಲ್ಲಿ ಲಾಂಗ್ ಹಿಡಿದು ಎಂಟ್ರಿಕೊಡುವ ನಾಯಕ, ರಕ್ತದ ಕೋಡಿಯನ್ನೇ ಹರಿಸಿ ಎಲ್ಲರನ್ನೂ ಭಯಾನಕಗೊಳಿಸಿದ್ದಾರೆ. ಫುಲ್ ಆಕ್ಷನ್, ರಕ್ತ, ಮಚ್ಚು, ಮಾಸ್ ಲುಕ್ ನಲ್ಲಿ ವಿನಯ್ ರಾಜಕುಮಾರ್ ಮಿಂಚುತ್ತಿದ್ದಾರೆ. ಶಿವರಾಜ್ ಕುಮಾರ್ ಅವರ ನಂತರ ಲಾಂಗ್ ಹಿಡಿದಿರುವ ವಿನಯ್ ಅವರನ್ನು ಜನರು ಹೇಗೆ ತಗೆದುಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕು. ವಿನಯ್ ರಾಜ್ ಕುಮಾರ್ ಅವರ ಜೊತೆಗೆ ಅರುಣಾ ಬಾಲರಾಜ್, ಕಿಟ್ಟಿ, ಸಂಧ್ಯಾ ಅರಕೆರೆ, ಶಿವು, ಮೇದಿನಿ ಕೆಳಮನೆ ಹೀಗೆ ಹಲವಾರು ಕಲಾವಿದರು ಪೆಪೆ ಚಿತ್ರಕ್ಕೆ ಸಾಥ್ ನೀಡಿದ್ದಾರೆ.