ಕನ್ನಡದಲ್ಲಿ ಶುರು ಆಗುತ್ತಿದೆ ಮತ್ತೊಂದು ಹೊಚ್ಚ ಹೊಸ ಧಾರಾವಾಹಿ

ಕನ್ನಡ ಕಿರುತೆರೆಯಲ್ಲಿ ರಾಜಿ ಆಗಲು ಬರುತ್ತಿದ್ದಾರೆ ಈ ಹೊಸದೊಂದು ಜೋಡಿ. ಹೌದು ಇತ್ತೀಚೆಗೆ ಕನ್ನಡ ಕಿರುತೆರೆಯ ಲೋಕದಲ್ಲಿ ಹೊಸ ಹೊಸ ಬಗೆಯ ಧಾರಾವಾಹಿಗಳು ಬರುತ್ತಿವೆ. ಅದರಂತೆ ಇದೀಗ ಸ್ಟಾರ್ ಸುವರ್ಣ ವಾಹಿನಿಯಲ್ಲಿ ರಾಜಿ ಎಂಬ ನೂತನ ಧಾರಾವಾಹಿ ಕನ್ನಡ ಕಿರುತೆರೆಯ ವೀಕ್ಷಕರನ್ನು ಮನರಂಜಿಸಲು ನಿಮ್ಮ ಮನೆಗೆ ಬರುತ್ತಿದೆ. ರಾಜಿ ಧಾರಾವಾಹಿಯು ಒಬ್ಬ ಅನಾಥ ಹುಡುಗಿ ಶ್ರೀಮಂತರ ಆಶ್ರಯದಲ್ಲಿ ಬೆಳೆದು ದೊಡ್ಡವಳಾದ ನಂತರ ಭವಿಷ್ಯದಲ್ಲಿ ತನ್ನ ಬದುಕನ್ನ ಯಾವ ರೀತಿ ರೂಪಿಸಿಕೊಳ್ಳುತ್ತಾಳೆ. ಅವಳ ಬದುಕು ಎಲ್ಲಿಗೆ ಹೇಗೆ ದಡ ಮುಟ್ಟುತ್ತದೆ ಎಂಬ ಕಥೆಯನ್ನು ಹೊಂದಿದೆ ಎನ್ನಬಹುದು. ಅನಾಥೆಯಾದ ರಾಜಿ ಉರುಫ್ ರಾಜೇಶ್ವರಿ ಎಂಬ ಹುಡುಗಿಯನ್ನ ಭಾಸ್ಕರ್ ಮತ್ತು ಸರಸ್ವತಿ ಶಾನುಭೋಗ ಎಂಬ ಶ್ರೀಮಂತ ದಂಪತಿಗಳು ತಮ್ಮ ಮನೆಯಲ್ಲಿ ಸಾಕಿ ಬೆಳೆಸುತ್ತಾರೆ. ಈ ಭಾಸ್ಕರ್ ಮತ್ತು ಸರಸ್ವತಿ ಶಾನು‌ಭೋಗ ದಂಪತಿಗಳಿಗೆ ಮೂರು ಜನ ಗಂಡು ಮಕ್ಕಳು ಜೊತೆಗೆ ಒಬ್ಬಳು ಮಗಳು.

ಹಿರಿಯ ಮಗ ರವೀಶ್ ಮೃದು ವ್ಯಕ್ತಿತ್ವ ಹೊಂದಿರುತ್ತಾನೆ. ಇವನಿಗೆ ಶಾಂಭವಿ ಎಂಬವರೊಟ್ಟಿಗೆ ಮದುವೆ ಆಗಿರುತ್ತದೆ. ರವೀಶ್ ಗೆ ತನ್ನ ಹೆಂಡತಿಯ ಮಾತೇ ವೇದವಾಕ್ಯ ಆಗಿರುತ್ತದೆ. ಮಧ್ಯದವನು ಉದಯ್ ಈತ ತನ್ನ ಅತ್ತಿಗೆ ಶಾಂಭವಿ ಅಂತೆಯೇ ತನ್ನ ತಂದೆಯ ಆಸ್ತಿಯನ್ನ ತಿಂದು ತೇಗುವ ಮನೋಭಾವನೆಯನ್ನ ಹೊಂದಿರುತ್ತಾರೆ. ಉದಯ್ಗೆ ದೇವಕಿ ಎಂಬ ಹೆಂಡತಿ ಇರುತ್ತಾಳೆ. ಈ ಧಾರಾವಾಹಿಯಲ್ಲಿ ದೇವಕಿ ಎಂಬಾಕೆ ಒಂದು ಬಗೆಯ ಕಾಮಿಡಿ ಪೀಸ್ ಪಾತ್ರಧಾರಿ ಅಂದರೆ ತಪ್ಪಾಗಲಾರದು. ಮೂರನೆಯವ ಕರ್ಣ ಇವನಿಗೆ ತಮ್ಮ ಮನೆಯಲ್ಲಿ ಬೆಳೆದ ರಾಜಿಯನ್ನ ಕಂಡರೆ ಏನೋ ಒಂದು ರೀತಿಯ ವಿಶೇಷ ಪ್ರೀತಿ ಅಭಿಮಾನ. ಇವನ್ನೆಲ್ಲ ಬಿಟ್ಟು ಉಳಿದ ಎಲ್ರಿಗೂ ಕೂಡ ರಾಜಿ ಕೇವಲ ತನ್ನ ಮನೆ ಕೆಲಸದಾಕೆ ಎಂಬ ಭಾವನೆ ಮಾತ್ರ ಇರುತ್ತದೆ‌. ಇನ್ನು ಭಾಸ್ಕರ್ ಮತ್ತು ಸರಸ್ವತಿ ದಂಪತಿಗಳಿಗೆ ರೇಣು ಎಂಬ ಒಬ್ಬ ಮಗಳಿರುತ್ತಾಳೆ. ಆಕೆ ಕೂಡ ತನ್ನ ಅತ್ತಿಗೆ ಶಾಂಭವಿ ರೀತಿ ತನ್ನ ತಂದೆಯ ಆಸ್ತಿಯಲ್ಲಿ ಪಾಲು ಪಡೆದುಕೊಳ್ಳುವುದರಲ್ಲೇ ಸದಾ ಯೋಜನೆ ಹಾಕುತ್ತಿರುತ್ತಾಳೆ.

ಆದರೆ ರೇಣು ಗಂಡ ಮನೋಜ್ ಹಣವಂತ ಅಲ್ಲದಿದ್ದರು ಕೂಡ ಗುಣದಲ್ಲಿ ಶ್ರೀಮಂತ ಆಗಿರುತ್ತಾನೆ. ಒಟ್ಟಾರೆಯಾಗಿ ರಾಜಿ ಧಾರಾವಾಹಿಯು ಒಂದು ಅಪ್ಪಟ ಕೌಟುಂಬಿಕ ಆಧಾರಿತ ಧಾರಾವಾಹಿಯಾಗಿದೆ. ರಾಜಿ ಎಂಬ ಪಾತ್ರದಲ್ಲಿ ನಟಿ ಸೌಂದರ್ಯ ಬಣ್ಣ ಹಚ್ಚಿದ್ದಾರೆ. ಕರ್ಣನ ಪಾತ್ರದಲ್ಲಿ ಕಾರ್ತಿಕ್ ನಟಿಸಿದ್ದಾರೆ. ಇವರ ಜೊತೆಗೆ ಪೋಷಕ ಪಾತ್ರಗಳಲ್ಲಿ ಹಿರಿಯ ನಟ ಮುಖ್ಯಮಂತ್ರಿ ಚಂದ್ರು, ವೈಜಯಂತಿ, ಕಾಶಿ, ನೀನಾಸಂ ಅಶ್ವಥ್, ಸುಧಾ ಹೆಗ್ಡೆ, ರಜನಿ, ಶಿಲ್ಪಾ, ಅಮೃತಾ ನಾಯಕ್, ವಿನಾಯಕ, ಸಂದಿಪ್ ಹೀಗೆ ಬಹುದೊಡ್ಡ ತಾರಾಗಣವೇ ಈ ರಾಜಿ ಧಾರಾವಾಹಿಯಲ್ಲಿ ಇರಲಿದೆ. ಸೋಮವಾರದಿಂದ ಅಂದರೆ ಏಪ್ರಿಲ್ 18ರಿಂದ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಸಂಜೆ 7.30ಕ್ಕೆ ಪ್ರಸಾರ ಆಗಲಿದೆ. ಈಗಾಗಲೇ ಮೊದಲ ಎಪಿಸೋಡ್ ಪ್ರಸಾರ ಆಗಿ ಕಿರುತೆರೆ ವೀಕ್ಷಕರರಿಂದ ಮೆಚ್ಚುಗೆಯ ಭಾವ ಮೂಡಿಸಿದೆ.

%d bloggers like this: