ಕನ್ನಡದಲ್ಲಿ ಶುರುವಾಯಿತು ಮತ್ತೊಂದು ಹೊಸ ಧಾರಾವಾಹಿ

ಕನ್ನಡ ಕಿರುತೆರೆಯ ಸುಪ್ರಸಿದ್ದ ವಾಹಿನಿ ಅಂದ್ರೆ ಅದು ಕಲರ್ಸ್ ಕನ್ನಡ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಕೇವಲ ಧಾರಾವಾಹಿಗಳು ಮಾತ್ರ ಅಲ್ಲದೆ ಹೊಚ್ಚ ಹೊಸ ವಿಭಿನ್ನ ರಿಯಾಲಿಟಿ ಶೋಗಳು ಕೂಡ ಪ್ರಸಾರ ಆಗೋದ್ರಿಂದ ಕರ್ನಾಟಕದಲ್ಲಿ ಕಲರ್ಸ್ ಕನ್ನಡ ಮನೆ ಮಾತಾಗಿದೆ. ಟಾಪ್ ಐದು ಮನರಂಜನಾ ವಾಹಿನಿಗಳಲ್ಲಿ ಕಲರ್ಸ್ ಕನ್ನಡ ಮೊದಲ ಪಂಕ್ತಿಯಲ್ಲಿ ನಿಲ್ಲುತ್ತದೆ. ಅಂದ್ಹಾಗೆ ಕನ್ನಡ ಕಿರುತೆರೆಯ ಯಶಸ್ವಿ ನಿರ್ಮಾಪಕಿ ಎಂದೇ ಕರೆಸಿಕೊಳ್ಳುವ ಶೃತಿನಾಯ್ಡು ಇದೀಗ ಮತ್ತೊಂದು ವಿಭಿನ್ನ ಕಥಾಹಂದರ ಹೊಂದಿರುವ ಧಾರಾವಾಹಿಯನ್ನ ಪರಿಚಯಿಸುತ್ತಿದ್ದಾರೆ. ಹೌದು ನಿರ್ಮಾಪಕಿ ಶೃತಿ ನಾಯ್ಡು ಅವರು ಈಗಾಗ್ಲೇ ಚಿ.ಸೌ.ಸಾವಿತ್ರಿ, ದೇವಿ, ಶ್ರೀ ರಸ್ತು ಶುಭಮಸ್ತು, ಬ್ರಹ್ಮಗಂಟು, ಯಾರೇ ನೀ ಮೋಹಿನಿ ಅಂತಹ ವಿಭಿನ್ನ ಕಥಾಹಂದರ ಹೊಂದಿರುವ ಧಾರಾವಾಹಿ ಕೊಟ್ಟಿರುವ ನಿರ್ಮಾಪಕಿ ಹಾಗೂ ನಿರ್ದೇಶಕಿ ಶೃತಿ ನಾಯ್ಡು.

ಇದೀಗ ಕಲರ್ ಫುಲ್ ಧಾರಾವಾಹಿಯೊಂದನ್ನ ಕನ್ನಡ ಕಿರುತೆರೆ ವೀಕ್ಷಕರಿಗೆ ಪ್ರಸ್ತುತ ಪಡಿಸುತ್ತಿದ್ದಾರೆ. ಈ ಹೊಸ ಧಾರಾವಾಹಿಯ ಹೆಸರು ಒಲವಿನ ನಿಲ್ದಾಣ. ಈ ಒಲವಿನ ನಿಲ್ದಾಣ ಧಾರಾವಾಹಿಯ ಪ್ರೋಮೋ ಇದೀಗ ಬಿಡುಗಡೆಯಾಗಿದ್ದು ವೀಕ್ಷಕರಿಗೆ ತುಂಬಾ ಇಷ್ಟವಾಗಿದೆ. ಬಿಡುಗಡೆಯಾದ ಈ ಕಲರ್ ಫುಲ್ ಒಲವಿನ ನಿಲ್ದಾಣ ಧಾರಾವಾಹಿಯ ಪ್ರೋಮೋ ನೋಡಿದ್ರೆ, ಈ ಸೀರಿಯಲ್ ಒಂದೊಳ್ಳೆ ಪ್ರೇಮ್ ಕಹಾನಿ ಕಥಾ ಹಂದರ ಹೊಂದಿದೆ ಎಂದು ತಿಳಿದು ಬರುತ್ತಿದೆ. ಇನ್ನು ಈ ಒಲವಿನ ನಿಲ್ದಾಣ ಧಾರಾವಾಹಿಯ ನಾಯಕಿಯಾಗಿ ಅಮಿತಾ ಸದಾಶಿವ ನಟಿಸುತ್ತಿದ್ದಾರೆ. ನಟಿ ಅಮಿತಾ ಸದಾಶಿವ ಅವರು ಈಗಾಗಲೇ ತೆಲುಗಿನಲ್ಲಿ ರೌಡಿಗಾರಿ ಪೆಳ್ಳಮ್ ಎಂಬ ಧಾರಾವಾಹಿಯಲ್ಲಿ ಅಭಿನಯಿಸಿದ್ದಾರೆ. ಈ ಧಾರಾವಾಹಿಯಲ್ಲಿ ಅಮಿತಾ ಸದಾಶಿವ ಅವರ ನಟನೆಗೆ ಅಪಾರ ಮೆಚ್ಚುಗೆ ವ್ಯಕ್ತವಾಗಿದ್ದು, ತೆಲುಗು ವೀಕ್ಷಕರ ಮನ ಗೆದ್ದಿದ್ದಾರೆ.

ಇದೀಗ ಕನ್ನಡದ ನಟಿ ಇದೀಗ ಒಲವಿನ ನಿಲ್ದಾಣ ಧಾರಾವಾಹಿಯ ಮೂಲಕ ಕನ್ನಡ ಕಿರುತೆರೆಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ಈ ಧಾರಾವಾಹಿಯಲ್ಲಿ ಮತ್ತೊಂದು ಸ್ಪೆಷಲ್ ಅಂದರೆ ಕನ್ನಡದ ಖ್ಯಾತ ಹಿರಿಯ ನಟಿ ವಿನಯಾ ಪ್ರಸಾದ್ ಅವರ ಮಗಳು ಪ್ರತಿಮಾ ಪ್ರಸಾದ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಆರ್ರೇ ಈ ಒಲವಿನ ನಿಲ್ದಾಣ ಧಾರಾವಾಹಿಯ ಕಥಾನಾಯಕ ಯಾರು ಎಂಬುದನ್ನ ಶೃತಿನಾಯ್ಡು ಅವರು ಸಸ್ಪೇನ್ಸ್ ನಲ್ಲೇ ಇಟ್ಟಿದ್ದಾರೆ. ಒಟ್ಟಾರೆಯಾಗಿ ಒಲವಿನ ನಿಲ್ದಾಣ ಧಾರಾವಾಹಿ ಕನ್ನಡ ಕಿರುತೆರೆ ವೀಕ್ಷಕರ ಒಲವನ್ನ ಪಡೆಯಲಿದೆಯಾ ಎಂಬುದನ್ನ ಮುಂದಿನ ದಿನಗಳಲ್ಲಿ ಕಾದು ನೋಡಬೇಕಾಗಿದೆ. ಶೃತಿ ನಾಯ್ಡು ಅವರ ಬತ್ತಳಿಕೆಯಲ್ಲಿ ಬಂದಿರುವ ಎಲ್ಲಾ ಧಾರಾವಾಹಿಗಳು ಕೂಡ ಯಶಸ್ಸು ಕಂಡಿರುವ ಕಾರಣ ಈ ಹೊಸ ಒಲವಿನ ನಿಲ್ದಾಣ ಸೀರಿಯಲ್ ಕೂಡ ಯಶಸ್ಸು ಕಾಣಲಿದೆ ಎಂಬುದು ವೀಕ್ಷಕರ ಅಭಿಪ್ರಾಯವಾಗಿದೆ.

%d bloggers like this: