ಕನ್ನಡದಲ್ಲಿ ತನಗೆ ಅವಕಾಶ ಕಡಿಮೆ ಸಿಗ್ತಿದೆ, ಸಿಕ್ಕರೆ ಖಂಡಿತ ಮಾಡುತ್ತೇನೆ ಎಂದ ಕನ್ನಡ ನಟಿ

ಸ್ಯಾಂಡಲ್ ವುಡ್ ಕಿರಿಕ್ ಪಾರ್ಟಿ ಬೆಡಗಿಗೆ ಕನ್ನಡದಲ್ಲಿ ಅವಕಾಶ ಕೊಡುತ್ತಿಲ್ಲವಂತೆ, 2016 ರಲ್ಲಿ ತೆರೆಕಂಡ ರಿಷಬ್ ಶೆಟ್ಟಿ ನಿರ್ದೇಶನದ ಕಿರಿಕ್ ಪಾರ್ಟಿ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿಕೊಟ್ಟ ಸಂಯುಕ್ತಾ ಹೆಗ್ಡೆ ತಮ್ಮ ಚುರುಕುತನದ ನಟನೆಯಿಂದ ಚೊಚ್ಚಲ ಚಿತ್ರದಲ್ಲೇ ಕನ್ನಡ ಸಿನಿ ಪ್ರೇಕ್ಷಕರ ಮನ ಗೆದ್ದರು. ರಕ್ಷಿತ್ ಶೆಟ್ಟಿ ಅವರಿಗೆ ಎರಡನೇ ನಾಯಕಿಯಾಗಿ ಕಾಣಿಸಿಕೊಂಡಿದ್ದ ಸಂಯುಕ್ತಾ ಅವರಿಗೆ ಬೆಸ್ಟ್ ಸಪೋರ್ಟಿಂಗ್ ಆಕ್ಟ್ರೆಸ್ ಅವಾರ್ಡ್ ಕೂಡ ಲಭಿಸಿದೆ. ಇದಾದ ಬಳಿಕ ಅಲೆಮಾರಿ ಸಂತು ನಿರ್ದೇಶನದ ಕಾಲೇಜ್ ಕುಮಾರ ಸಿನಿಮಾದಲ್ಲಿ ಪೂರ್ಣ ಪ್ರಮಾಣದ ನಾಯಕಿ ನಟಿಯಾಗಿ ಕಾಣಿಸಿಕೊಂಡ ನಟಿ ಸಂಯುಕ್ತಾ ಹೆಗ್ಡೆ ಅವರಿಗೆ ತದ ನಂತರ ಯಾವ ಸಿನಿಮಾಗಳಲ್ಲಿಯೂ ಕಾಣಿಸಾಕೊಂಡಿಲ್ಲ.

ನಟಿ ಸಂಯುಕ್ತಾ ಹೆಗ್ಡೆ ತಮ್ಮ ಸಿನಿಮಾಗಳಿಗಿಂತ ಹೆಚ್ಚಾಗಿ ಕಿರಿಕ್ ವಿವಾದಗಳ ಮೂಲಕವೇ ಹೆಚ್ಚು ಸುದ್ದಿಯಾದರು. ಸಂಯುಕ್ತಾ ನಟಿ ಮಾತ್ರ ಉತ್ತಮ ನೃತ್ಯಪಟು ಕೂಡ ಹೌದು. ಹಿಂದಿ ಕಿರುತೆರೆಯ ಪ್ರಸಿದ್ದ ರೋಡಿಸ್ ಎಂಬ ರಿಯಾಲಿಟಿ ಮೂಲಕ ಜನಪ್ರಿಯತೆ ಗಳಿಸಿಕೊಂಡ ಸಂಯುಕ್ತಾ ಹೆಗ್ಡೆ ಅವರಿಗೆ ಕನ್ನಡದ ಬಿಗ್ ಬಾಸ್ ಶೋ ನಲ್ಲಿಯೂ ಕೂಡ ಅವಕಾಶ ದೊರೆಯಿತು. ಆದರೆ ಇಲ್ಲಿ ತಮ್ಮ ಸಹ ಸ್ಪರ್ಧಿಗಳೊಂದಿಗೆ ಜಗಳವಾಡಿಕೊಂಡು ದೊಡ್ಮನೆಯಿಂದ ಹೊರ ಬಂದರು. ಕನ್ನಡ, ತಮಿಳು ಮತ್ತು ತೆಲುಗು ಸಿನಿಮಾಗಳಲ್ಲಿ ನಟಿಸಿರುನ ಸಂಯುಕ್ತಾ ಹೆಗ್ಡೆ ಅವರಿಗೆ ಇದೀಗ ಕನ್ನಡದಲ್ಲಿ ಅವಕಾಶ ಸಿಗುತ್ತಿಲ್ಲವಂತೆ.

ತಮಿಳಿನಲ್ಲಿ ಬಿಝಿ಼ ಆಗಿರುವ ನಟಿ ಸಂಯುಕ್ತಾ ಹೆಗ್ಡೆ ಇದೀಗ ಇಂಡಿಯನ್ ಮೈಕಲ್ ಜಾಕ್ಸನ್ ಖ್ಯಾತಿಯ ನೃತ್ಯ ಸಂಯೋಜಕ ನಟ, ನಿರ್ದೇಶಕ ಪ್ರಭುದೇವ ಅವರೊಟ್ಟಿಗೆ ಸ್ಟೆಪ್ ಹಾಕಿದ್ದಾರಂತೆ. ಹೌದು ನಟ ಪ್ರಭುದೇವ ನಟನೆಯ ಥೀಲ್ ಎಂಬ ಚಿತ್ರದಲ್ಲಿ ಪ್ರಭುದೇವ್ ಅವರೊಟ್ಟಿಗೆ ಸಂಯುಕ್ತಾ ಹೆಗ್ಡೆ ಹೆಜ್ಜೆ ಹಾಕಿದ್ದಾರೆ. ಈ ಥೀಲ್ ಸಿನಿಮಾ ಇದೇ ಡಿಸೆಂಬರ್ 10 ರಂದು ರಿಲೀಸ್ ಆಗಲಿದ್ದು, ಈ ಚಿತ್ರದ ಬಗ್ಗೆ ಸಂಯುಕ್ತಾ ಹೆಗ್ಡೆ ಸಖತ್ ಎಕ್ಸಾಯ್ಟ್ ಆಗಿದ್ದಾರಂತೆ. ಇತ್ತೀಚೆಗಷ್ಟೆ ಸಂಯುಕ್ತಾ ಹೆಗ್ಡೆ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಈ ಥೀಲ್ ಚಿತ್ರದ ಟೀಸರ್ ವೊಂದನ್ನ ಶೇರ್ ಮಾಡಿಕೊಂಡಿದ್ದರು.

ಇನ್ನು ಮಾಧ್ಯಮಮಿತ್ರರು ಸಂಯುಕ್ತಾ ಹೆಗ್ಡೆ ಅವರಿಗೆ ನೀವು ಕನ್ನಡದಲ್ಲಿ ಏಕೆ ನಟಿಸುತ್ತಿಲ್ಲ ಎಂಬ ಪ್ರಶ್ನೆಗೆ ನೀವು ಈ ಪ್ರಶ್ನೆಯನ್ನ ನನಗೆ ಕೇಳುವ ಬದಲು ಕನ್ನಡದ ನಿರ್ದೇಶಕರು, ನಿರ್ಮಾಪಕರ ಬಳಿ ಕೇಳಿ. ಕನ್ನಡದ ನಟಿಯರಿಗೆ ಏಕೆ ಅವಕಾಶ ನೀಡುತ್ತಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ. ಸದ್ಯಕ್ಕೆ ಅವರು ಪದವಿ ಅಧ್ಯಾಯನ ಮಾಡುತ್ತಿರುವುದರ ಜೊತೆಗೆ ತಮಿಳು ಚಿತ್ರಗಳಲ್ಲಿ ಬಿಝಿ಼ ಅಗಿದ್ದಾರಂತೆ. ಕನ್ನಡದಲ್ಲಿ ನನಗೆ ಅವಕಾಶ ಸಿಗುತ್ತಿಲ್ಲ. ಸಿಕ್ಕರೆ ಖಂಡಿತಾ ನಟಿಸುತ್ತೇನೆ ಎಂದು ತಮಗೆ ಅವಕಾಶ ಸಿಗುತ್ತಿಲ್ಲ ಎಂಬ ಅಸಮಾಧಾನವನ್ನು ಕೂಡ ವ್ಯಕ್ತಪಡಿಸಿದರು.

%d bloggers like this: