ಕನ್ನಡದವರೇ ನಟಿಸಿರುವ ತೆಲುಗು ಧಾರಾವಾಹಿ ಇದೀಗ ಕನ್ನಡಕ್ಕೆ ಡಬ್ ಆಗಿ ಬರುತ್ತಿದೆ

ಯಾವಾಗ ಕನ್ನಡ ಇಂಡಸ್ಟ್ರಿಯಲ್ಲಿ ಡಬ್ಬಿಂಗ್ ಗೆ ಮುಕ್ತ ಅವಕಾಶ ಆಗಿ ಅನುಮತಿ ಸಿಕ್ತೋ ಅಲ್ಲಿಂದ ಕನ್ನಡ ಸಿನಿಮಾ ಮತ್ತು ಕಿರುತೆರೆ ಧಾರಾವಾಹಿಗಳಿಗೆ ಪರೋಕ್ಷವಾಗಿ ಹೊಡೆತ ಬಿತ್ತು ಅಂತ ಹೇಳ್ಬೋದು. ಹಾಗಂತ ನಮ್ಮ ಕನ್ನಡ ಧಾರಾವಾಹಿಗಳು ಹಿಂದೆ ಬಿದ್ದಿದ್ದಾವೆ ಅಂತಲ್ಲ. ಈಗಾಗಲೇ ಕನ್ನಡದ ಧಾರಾವಾಹಿಗಳು ಪರಭಾಷೆಗೆ ಡಬ್ ಆಗಿ ಉತ್ತಮವಾಗಿ ಪ್ರಸಾರ ಆಗ್ತಿವೆ. ಆದರೆ ಶೇಕಡಾವಾರು ಮಾತ್ರ ಪರಭಾಷೆ ಧಾರಾವಾಹಿಗಳದ್ದೇ ಆಗಿದೆ. ಇದೀಗ ಕನ್ನಡ ಕಿರುತೆರೆಗೆ ತೆಲುಗಿನ ಹೊಸದೊಂದು ಧಾರಾವಾಹಿ ಡಬ್ಬಿಂಗ್ ಆಗಿ ಪ್ರಸಾರವಾಗಲಿದೆ. ಹೌದು ತೆಲುಗಿನ ಪ್ರಸಿದ್ದ ವಾಹಿನಿಯಾದ ಜೀ಼.ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ವೈದೇಹಿ ಪರಿಣಯಂ ಎಂಬ ಧಾರಾವಾಹಿ ಕನ್ನಡಕ್ಕೆ ಡಬ್ ಆಗಿ ಮೂಡಿ ಬರಲಿದೆ.

ತೆಲುಗಿನಲ್ಲಿ ವೈದೇಹಿ ಪರಿಣಯಂ ಎಂಬ ಶೀರ್ಷಿಕೆಯೊಂದಿದ್ದ ಈ ಧಾರಾವಾಹಿ ಇದೀಗ ಕನ್ನಡದಲ್ಲಿ ವೈದೇಹಿ ಪರಿಣಯ ಎಂಬ ಶೀರ್ಷಿಕೆಯನ್ನಿಟ್ಟುಕೊಂಡು ಮೂಡಿ ಬರಲಿದೆ. ಈಗಾಗಲೇ ತೆಲುಗು ಕಿರುತೆರೆ ವೀಕ್ಷಕರನ್ನ ಮನರಂಜಿಸಿ ಯಶಸ್ವಿಯಾಗಿರುವ ಈ ವೈದೇಹಿ ಪರಿಣಯಂ ಧಾರಾವಾಹಿ ಕನ್ನಡದಲ್ಲಿ ವೈದೇಹಿ ಪರಿಣಯ ಆಗಿ ಎಷ್ಟರ ಮಟ್ಟಿಗೆ ಯಶಸ್ಸು ಕಾಣಲಿದೆ ಎಂಬುದನ್ನ ಕಾದು ನೋಡಬೇಕಾಗಿದೆ. ಇನ್ನು ಈ ಧಾರಾವಾಹಿಯಲ್ಲಿ ಪ್ರಮುಖ ಪಾತ್ರಧಾರಿಯಾಗಿ ಪವನ್ ರವೀಂದ್ರ, ಅಂಜನಾ, ಕರುಣಾ ಭೂಷಣ್, ಯುಕ್ತ ಮಲ್ನಾಡ್ ಬಣ್ಣ ಹಚ್ಚಿದ್ದಾರೆ. ಈ ಧಾರಾವಾಹಿಗೆ ತೆಲುಗಿನಲ್ಲಿ ಶ್ರೀಕಾಂತ್ , ಶ್ರೀನಿವಾಸ್, ಮಲ್ಲೇಲ ಬಂಡವಾಳ ಹೂಡಿಕೆ ಮಾಡಿದ್ದಾರೆ. ಒಟ್ಟಾರೆಯಾಗಿ ಕೋವಿಡ್ ಸಂಕಷ್ಟದ ಸಂಧರ್ಭದಲ್ಲಿ ನಷ್ಟಕ್ಕೆ ಒಳಗಾಗಿದ್ದ ಕಿರುತೆರೆ ಮತ್ತು ಸಿನಿಮಾ ಕ್ಷೇತ್ರಗಳು ಗರಿಗೆದರಿದೆ. ಸದಾ ಒಂದಲ್ಲ ಒಂದು ಚಟುವಟಿಕೆಗಳಲ್ಲಿ ಕಿರುತೆರೆ ಕ್ಷೇತ್ರ ತೊಡಗಿ ಸಖತ್ ಬಿಝಿ಼ ಆಗಿದೆ. ಇನ್ನು ಈ ವೈದೇಹಿ ಪರಿಣಯ ಕನ್ನಡದಲ್ಲಿ ಕನ್ನಡ ಕಿರುತೆರೆ ಪ್ರೇಕ್ಷಕರನ್ನ ಮನರಂಜಿಸಲು ಬರುತ್ತಿದೆ.

%d bloggers like this: