ಕನ್ನಡತಿ ಧಾರವಾಹಿಯ ನಟಿ ‘ವರುಗೆ’ ಇಂದು ವಿಶೇಷ ದಿನ

ಕನ್ನಡದ ಕಿರುತೆರೆ ನಟಿ ಇದೀಗ ಕಾಲಿವುಡ್ ಗೆ ಎಂಟ್ರಿ ಕೊಟ್ಟಿದ್ದಾರೆ, ಹೌದು ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಕನ್ನಡತಿ ಧಾರವಾಹಿಯಲ್ಲಿ ಬರುವ ವರು ಪಾತ್ರಧಾರಿ ನಟಿ ಸಾರಾ ಅಣ್ಣಯ್ಯ ಅವರು ಇದೀಗ ತಮಿಳಿನ ಪಬ್ ಗೋವಾ ಎಂಬ ವೆಬ್ ಸಿರೀಸ್ ನಲ್ಲಿ ಅಭಿನಯಿಸಿದ್ದಾರೆ. ಲಕ್ಷ್ಮಿನಾರಾಯಣ್ ರಾಜು ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ತಮಿಳಿನ ಪಬ್ ಗೋವಾ ವೆಬ್ ಸೀರೀಸ್ ಅನ್ನು ಓಟಿಟಿ ಪ್ಲಾಟ್ ಫಾರ್ಮ್ ಜೀ಼5ನಲ್ಲಿ ಬಿಡುಗಡೆಗೊಳ್ಳುತ್ತಿದೆ. ಈ ವೆಬ್ ಸೀರೀಸ್ ನಲ್ಲಿ ಕನ್ನಡದ ನಟಿಯೊಬ್ಬರು ನಟಿಸಿರುವುದು ನಿಜಕ್ಕೂ ಖುಷಿಯ ವಿಚಾರವಾಗಿದೆ. ಕನ್ನಡತಿ ಧಾರವಾಹಿಯ ನಟಿ ಸಾರಾ ಅಣ್ಣಯ್ಯ ಅವರು ವೈಜ್ಞಾನಿಕ ಕಾದಂಬರಿ ಆಧಾರಿತ ವೆಬ್ ಸೀರೀಸ್ ನಲ್ಲಿ ನಟಿಸಿ ಖುಷಿಯಾಗಿದ್ದಾರೆ. ಸಾರಾ ಅಣ್ಣಯ್ಯ ಅವರ ಬಗ್ಗೆ ಇನ್ನೊಂದು ವಿಷಯವೆಂದರೆ ಅವರು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಅವರು ಅಪ್ಲೋಡ್ ಮಾಡುತ್ತಿರುವ ಫೋಟೋಗಳ ಬಗ್ಗೆ ಅಭಿಮಾನಿಗಳು ಗರಂ ಆಗಿದ್ದಾರೆ. ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಫೋಟೋಶೂಟ್ ಮಾಡಿರುವ ಚಿತ್ರಗಳು ನೀವು ಈತರ ಫೋಟೋಗಳನ್ನು ಹಾಕಬೇಡಿ ಎಂದು ಮನವಿ ಮಾಡಿದ್ದಾರೆ. ಇನ್ನು ಕನ್ನಡತಿ ಧಾರಾವಾಹಿಯು ಕನ್ನಡದ ಅತ್ತ್ಯುತ್ತಮ ಧಾರಾವಾಹಿಗಳಲ್ಲಿ ಒಂದಾಗಿದ್ದು ಕಥೆಯು ದಿನೇದಿನೇ ರೋಚಕವಾಗುತ್ತಿದೆ, ಈ ಧಾರಾವಾಹಿಯಲ್ಲಿ ನಟ ಕಿರಣ್ ಅವರು ನಟಿಸುತ್ತಿದ್ದು ಅವರ ಜೊತೆ ನಟಿ ಭುವಿ ಅವರು ನಟಿಸುತ್ತಿದ್ದು ಈ ಧಾರಾವಾಹಿಯಲ್ಲಿ ಇನ್ನೊಬ್ಬ ನಟಿ ಇದೆ ಸಾರಾ ಅಣ್ಣಯ್ಯ ಅವರು ಕಥೆಯ ಎರಡನೇ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಕನ್ನಡತಿ ಧಾರಾವಾಹಿಯು ಕಲರ್ಸ್ ಕನ್ನಡ ಚಾನೆಲ್ ಅಲ್ಲಿ ಪ್ರತಿದಿನ ರಾತ್ರಿ ಏಳುವರೆಯಿಂದ ಎಂಟು ಗಂಟೆಯ ತನಕ ಪ್ರಸಾರವಾಗುತ್ತದೆ.

%d bloggers like this: