ಟಾಲಿವುಡ್ ಖ್ಯಾತ ನಟ ವಿಜಯ್ ದೇವರಕೊಂಡ ಮೊಟ್ಟ ಮೊದಲ ಬಾರಿಗೆ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಭಾರತೀಯ ಚಿತ್ರರಂಗದ ಪ್ರಖ್ಯಾತ ನಿರ್ದೇಶಕ ಪೂರಿ ಜಗನ್ನಾಥ್ ಅವರು ಸ್ವತಃ ನಿರ್ಮಾಣ ಮತ್ತು ನಿರ್ದೇಶನ ಮಾಡುತ್ತಿರುವ ‘ಲೈಗರ್’ ಎಂಬ ಚಿತ್ರದಲ್ಲಿ ವಿಜಯ್ ದೇವರ ಕೊಂಡ ಡಾನ್ ಮಗನ ಪಾತ್ರವನ್ನು ನಿರ್ವಹಿಸಲಿದ್ದಾರೆ. ಈ ಲೈಗರ್ ಸಿನಿಮಾದ ನಾಯಕಿಯಾಗಿ ಬಾಲಿವುಡ್ ನಟಿಯಾಗಿರುವ ಅನನ್ಯಾಪಾಂಡೆ ಬಣ್ಣ ಹಚ್ಚಲಿದ್ದಾರೆ ಎಂದು ನಿರ್ದೇಶಕ ಪೂರಿ ಜಗನ್ನಾಥ್ ತಿಳಿಸಿದ್ದಾರೆ, ಇದಕ್ಕೂ ಮುನ್ನ ಈ ಚಿತ್ರಕ್ಕೆ ಫೈಟರ್ ಎಂಬ ಹೆಸರಿಟ್ಟದ್ದರು. ಆದರೆ ಹಾಗಗಲೇ ಹೃತಿಕ್ ರೋಷನ್ ನಟಿಸುತ್ತಿರುವ ಚಿತ್ರವೊಂದಕ್ಕೆ ಫೈಟರ್ ಎಂದು ಟೈಟಲ್ ನೋಂದಣೆ ಮಾಡಲಾಗಿತ್ತು. ಆದ ಕಾರಣ ಫೈಟರ್ ಟೈಟಲ್ ಬಿಟ್ಟು ಲೈಗರ್ ಎಂದು ಪೂರಿಜಗನ್ನಾಥ್ ತಮ್ಮ ಸಿನಿಮಾಗೆ ಟೈಟಲ್ ಫಿಕ್ಸ್ ಮಾಡಿದ್ದಾರೆ. ಇನ್ನು ಈ ಲೈಗರ್ ಎಂದರೆ ಹುಲಿ ಮತ್ತು ಸಿಂಹಕ್ಕೆ ಜನನವಾದ ಮರಿಯನ್ನು ಲೈಗರ್ ಎಂದು ಕರೆಯುತ್ತಾರಂತೆ. ಇನ್ನು ಈ ಚಿತ್ರಕ್ಕೆ ಪೂರಿಜಗನ್ನಾಥ್ ಅವರ ಜೊತೆ ಕರಣ್ ಜೋಹರ್ ಮತ್ತು ಚಾರ್ಮಿ ಕೂಡ ಬಂಡವಾಳ ಹೂಡಿಕೆ ಮಾಡಲಿದ್ದಾರೆ.

ಈ ಲೈಗರ್ ಸಿನಿಮಾವನ್ನು ಪ್ಯಾನ್ ಇಂಡಿಯಾ ಸಿನಿಮಾವಾಗಿ ಮೂಡಿಬರುತ್ತದೆ ಎಂದು ತಿಳಿಸಿದ್ದಾರೆ. ಕರಣ್ ಜೋಹಾರ್ ಇದಕ್ಕೂ ಮೊದಲು ವಿಜಯ್ ದೇವರಕೊಂಡ ಅವರಿಗೆ ತಮ್ಮ ಸಿನಿಮಾದಲ್ಲಿ ಅಭಿನಯಿಸಲು ಅವಕಾಶ ಕೊಟ್ಟಿದ್ದಿರಂತೆ, ಆದರೆ ಈ ಆಫರನ್ನು ವಿಜಯ್ ದೇವರ ಕೊಂಡ ತಿರಸ್ಕಾರ ಮಾಡಿದ್ದರು ಎಂದು ತಿಳಿದು ಬಂದಿದೆ. ಇನ್ನು ಈ ಲೈಗರ್ ಚಿತ್ರದಲ್ಲಿ ಪ್ರಮುಖವಾಗಿ ಬಾಲಿವುಡ್ ನಟ ಸುನೀಲ್ ಶೆಟ್ಟಿ ಡಾನ್ ಪಾತ್ರ ನಿರ್ವಹಿಸಲಿದ್ದು, ಇದರಲ್ಲಿ ವಿಜಯ್ ದೇವರ ಕೊಂಡ ಅವರ ತಂದೆಯ ಪಾತ್ರವನ್ನು ನಿರ್ವಹಿಸಲಿದ್ದಾರಂತೆ. ಇನ್ನು ಈ ಲೈಗರ್ ಚಿತ್ರ ಅಪ್ಪ ಮಗನ ಭಾಂಧವ್ಯವನ್ನು ಪ್ರತಿನಿಧಿಸುತ್ತದೆ ಎಂದು ತಿಳಿದು ಬಂದಿದೆ, ಆದರೆ ಸುನೀಲ್ ಶೆಟ್ಟಿಯವರ ಪಾತ್ರ ಕೇವಲ ಹದಿನೈದು ನಿಮಿಷಗಳ ಕಾಲ ಮಾತ್ರ ಇರುತ್ತದೆ ಎಂದು ಚಿತ್ರದ ನಿರ್ದೇಶಕ ಪೂರಿಜಗನ್ನಾಥ್ ತಿಳಿಸಿದ್ದಾರೆ.

ಈಗಾಗಲೇ ಹೈದರ್ ಬಾದ್ ನಲ್ಲಿ ಹಾಕಲಾಗಿರುವ ಬೃಹತ್ ಸೆಟ್ ನಲ್ಲಿ ವಿಜಯ್ ದೇವರಕೊಂಡ ಬಾಕ್ಸರ್ ಅಗಿ ಫೈಟ್ ಮಾಡುವ ದೃಶ್ಯ ಸೆರೆಯಿಡಿಯುತ್ತಿದ್ದಾರೆ ಎನ್ನಲಾಗಿದೆ. ಇದಾದ ನಂತರ ಬ್ಯಾಂಕಾಂಕ್ ನಲ್ಲಿ ಚಿತ್ರೀಕರಣ ಮಾಡಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ. ಇನ್ನು ಈ ಲೈಗರ್ ಚಿತ್ರ ಪ್ಯಾನ್ ಇಂಡಿಯಾದಲ್ಲಿ ರಿಲೀಸ್ ಆಗುತ್ತಿದ್ದು ಪಂಚ ಭಾಷೆಗಳ ಅವತರಣಿಕೆಯಲ್ಲಿ ಬಿಡುಗಡೆ ಗೊಳ್ಳಲಿದೆ. ಇನ್ನು ಕನ್ನಡದಲ್ಲಿಯೂ ಸಹ ಈ ಲೈಗರ್ ಚಿತ್ರ ದೊಡ್ಡ ಮಟ್ಟದಲ್ಲಿ ಬಿಡುಗಡೆಯಾಗುತ್ತಿದ್ದು, ಈ ಚಿತ್ರದ ಕನ್ನಡ ಅವತರಣಿಕೆಯಲ್ಲಿ ಡಬ್ಬಿಂಗ್ ಅನ್ನು ಸ್ವತಃ ವಿಜಯ್ ದೇವರಕೊಂಡ ಅವರೇ ನೀಡುತ್ತಾರೋ ಅಥವಾ ಬೇರೆ ಕಂಠದಾನ ಕಲಾವಿದರಿಂದ ಧ್ವನಿ ಪಡೆಯುತ್ತಾರೋ ಕಾದು ನೋಡಬೇಕಾಗಿದೆ.