ಕನ್ನಡತಿ ಧಾರಾವಾಹಿಯ ನಾಯಕ ಕಿರಣ್ ರಾಜ್ ಅವರು ಬರಿ ನಟ ಅಷ್ಟೇ ಅಲ್ಲ

ಸದ್ಯಕ್ಕೆ ಕನ್ನಡ ಕಿರುತೆರೆಯಲ್ಲಿ ಜನಪ್ರಿಯ ಧಾರವಾಹಿಯಾಗಿ ಮೂಡಿ ಬರುತ್ತಿರುವುದು ‘ಕನ್ನಡತಿ’ ಧಾರವಾಹಿ, ಕಿರುತೆರೆಯ ನೋಡುಗರಿಗೆ ಹಾಟ್ ಫೇವರೆಟ್ ಆಗಿರುವ ಕನ್ನಡತಿ ಧಾರವಾಹಿಯ ನಾಯಕ ಹರ್ಷ. ಅಂದರೆ ಹರ್ಷ ಪಾತ್ರ ನಿರ್ವಹಿಸುತ್ತಿರುವ ಕಿರಣ್ ರಾಜ್ ಹೆಂಗಳೆಯರ ಮನ ಗೆದ್ದಿದ್ದಾರೆ, ಮೊದಲೆಲ್ಲಾ ಸೀರಿಯಲ್ ಗಳನ್ನು ಮನೆಯ ಹೆಂಗಸರು ಮಾತ್ರ ನೋಡುತ್ತಾರೆ ಎಂಬ ಮಾತಿತ್ತು. ಆದರೆ ಈಗಸ್ಪುರದ್ರೂಪಿಯಾದ ಕಿರಣ್ ರಾಜ್ ಅವರನ್ನು ನೋಡುವುದಕ್ಕೆ ಅಂತಾನೇ ಹುಡುಗಿಯರು ಕನ್ನಡತಿ ಧಾರವಾಹಿಯನ್ನು ನೋಡುತ್ತಿದ್ದಾರೆ ಹಾಗು ಅಷ್ಟರ ಮಟ್ಟಿಗೆಹುಡುಗಿಯರು ಇವರ ಫಾಲೋವರ್ಸ್ ಆಗಿದ್ದಾರೆ. ಇನ್ನು ಕಿರಣ್ ರಾಜ್ ಅವರ ಅಭಿನಯ, ಡೈಲಾಗ್, ಚುರುಕಾದ ಆ ಕಣ್ಣೋಟಗಳಿಂದಲೇ ಪ್ರೇಕ್ಷಕರನ್ನು ಸೆಳೆಯುತ್ತಾರೆ. ಇದಕ್ಕೂ ಮೊದಲು ಕಿರಣ್ ರಾಜ್ ಹಿಂದಿಯ ಹಲವಾರು ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದ್ದರು.

ಕನ್ನಡದಲ್ಲಿ ಮೊಟ್ಟ ಮೊದಲ ಬಾರಿಗೆ ರಿಯಾಲಿಟಿ ಶೋದಲ್ಲಿ ಭಾಗವಹಿಸಿದ್ದು ಡ್ಯಾನ್ಸ್ ಡ್ಯಾನ್ಸ್ ಮತ್ತು ಲೈಫೂ ಸೂಪರ್ ಗುರೂ ಎಂಬ ಶೋಗಳ ಮುಖಾಂತರ ಕನ್ನಡ ಕಿರುತೆರೆಯಲ್ಲಿ ಕಾಣಿಸಿಕೊಂಡರು, ರಿಯಾಲಿಟಿ ಶೋ ಗಳ ನಂತರ ಕಿರಣ್ ರಾಜ್ ಮೊದಲ ಧಾರವಾಹಿ ದೇವತೆ. ತದನಂತರ ಚಂದ್ರಮುಖಿ, ಕಿನ್ನರಿ ಧಾರವಾಹಿ. ಕಿನ್ನರಿ ಧಾರವಾಹಿಯಲ್ಲಿ ಒಂದಷ್ಟು ಗಮನ ಸೆಳೆದ ಕಿರಣ್ ರಾಜ್ ಕನ್ನಡತಿ ಧಾರವಾಹಿಯಲ್ಲಿ ಅವಕಾಶ ಗಿಟ್ಟಿಸಿಕೊಂಡರು. ಕೇವಲ ಧಾರವಾಹಿಗಳಲ್ಲಿ ನಟಿಸಿದ್ದಲ್ಲದೆ ಮಾರ್ಚ್22 ಚಿತ್ರ ಹಾಗೂ ಅಸತೋಮ ಸಧ್ಗಮಯ ಚಿತ್ರದಲ್ಲಿ ನಟಿಸಿದ್ದಾರೆ.

ನಟ ಕಿರಣ್ ರಾಜ್ ಅವರಿಗೆ ಕನ್ನಡತಿ ಧಾರವಾಹಿಯ ಫೇಮ್ ನಿಂದಾಗಿ ಬೆಳ್ಳಿತೆರೆಯಲ್ಲಿ ಮಿಂಚಲು ಸಾಕಷ್ಟು ಅವಕಾಶಗಳು ಇವರಿಗೆ ಸಿಗುತ್ತಿವೆ, ಈಗಾಗಲೇ ಕನ್ನಡ ಚಿತ್ರರಂಗದಲ್ಲಿ ಶೈನ್ ಆಗುವ ಎಲ್ಲಾ ರೀತಿಯ ಲಕ್ಷಣಗಳು ಇವರಲ್ಲಿ ಕಾಣುತ್ತಿದೆ. ಇವರ ಅಭಿನಯದಲ್ಲಿ ಮೂಡಿಬರುತ್ತಿರುವ ಕೆಆರ್ ಚಿತ್ರದ ಒಂದಷ್ಟು ಪೋಸ್ಟರ್ ಗಳು ಭರವಸೆ ಮೂಡಿಸಿವೆ. ಕಿರಣ್ ರಾಜ್ ಅವರು ಕೇವಲ ನಟರಲ್ಲ ಇವರು ಉದ್ಯಮಿಯು ಕೂಡ ಹೌದು. ಆರ್.ಆರ್ ನಗರದಲ್ಲಿರುವ ಡಯಟ್ ಆನ್ ಟೇಬಲ್ ಎಂಬ ರೆಸ್ಟೋರೆಂಟ್ ಅನ್ನು ಕಿರಣ್ ರಾಜ್ ನಡೆಸುತ್ತಿದ್ದಾರೆ. ಇಷ್ಟಾಗಿದ್ದರೆ ಕಿರಣ್ ರಾಜ್ ಅವರು ಕೇವಲ ನಟ, ಉದ್ಯಮಿ ಎನಿಸಿಕೊಳ್ಳತ್ತಿದ್ದರು ಆದರೆ ಇವರಲ್ಲಿ ಸಾಮಾಜಿಕ ಕಳಕಳಿಯ ಮನೋಭಾವ ಇವರನ್ನು ಇನ್ನೊಂದು ಹಂತಕ್ಕೆ ಕರೆದೊಯ್ದಿದೆ.

ಕೋವಿಡ್ ಸಂಧರ್ಭದಲ್ಲಿ ಕಿರಣ್ ರಾಜ್ ಅವರು ಎಷ್ಟೋ ಕೂಲಿ ಕಾರ್ಮಿಕರು, ಬಡವರಿಗೆ ತಿಂಗಳು ಗಟ್ಟಲೇ ಆಹಾರದ ಪೊಟ್ಟಣಗಳನ್ನು ನೀಡಿ ಸಹಾಯ ಮಾಡಿದ್ದರು. ಅದಲ್ಲದೆ ಸಂಕಷ್ಟದ ಕಾಲದಲ್ಲಿ ಅವರ ಬದುಕಿಗೆ ಬೇಕಾದ ಎಲ್ಲಾ ಮೂಲಭೂತ ಅವಶ್ಯಕತೆಯ ಧಾನ್ಯಗಳ ಕಿಟ್ ಗಳನ್ನು ಮನೆ ಮನೆಗೆ ಹೋಗಿ ಪೂರೈಸಿದ್ದರು. ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಇವರ ಸೇವಾಕಾರ್ಯಕ್ಕೆ ಭಾರಿ ಮೆಚ್ಚುಗೆ ಪಡೆದಿತ್ತು. ಕಿರಣ್ ರಾಜ್ ಅವರು ತಮ್ಮ ಬದುಕಿನಲ್ಲಿ ಒಂದಷ್ಟು ಆದರ್ಶ ಸಿದ್ದಾಂತಗಳನ್ನು ರೂಢಿಸಿಕೊಂಡಿದ್ದಾರೆ.

ತಮ್ಮ ಆದಾಯದ ಶೇಕಡ 40ರಷ್ಟು ಭಾಗವನ್ನು ಸಮಾಜ ಸೇವೆಗೆ ಬಳಸುತ್ತಿದ್ದಾರೆ, ನಿಜಕ್ಕೂ ಕೂಡ ಸೇವಾ ಮನೋಭಾವ ಇವರ ಸಾಮಾಜಿಕ ಕಳಕಳಿ ಶ್ಲಾಘನೀಯವಾಗಿದೆ. ಕಿರಣ್ ರಾಜ್ ಅವರು ಕಿರಣ್ ಫೌಂಡೇಷನ್ ಎಂಬ ಸಂಸ್ಥೆ ಸ್ಥಾಪಿಸಿ ಇದರ ಮೂಲಕ ಹಲವಾರು ಜನಪರ ಕಾರ್ಯಗಳನ್ನು ಮಾಡುತ್ತಿದ್ದಾರೆ. ನಿರ್ಗತಿಕರಿಗೆ, ಬಡವರಿಗೆ ಬಟ್ಟೆಬರೆ, ಆಹಾರವನ್ನು ತಾವೇ ಖುದ್ದಾಗಿ ನೆರವಾಗುತ್ತಿರುವುದು ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ. ಸದ್ಯದ ಮಟ್ಟಿಗೆ ಕಿರುತೆರೆ ಸ್ಟಾರ್ ನಟರೆಂದರೆ ತಕ್ಷಣಕ್ಕೆ ನೆನಪಾಗುವುದು ಕನ್ನಡತಿ ಧಾರವಾಹಿಯ ಕಿರಣ್ ರಾಜ್ ಮುಂದಿನ ದಿನಗಳಲ್ಲಿ ಕನ್ನಡದ ಸಾಲು ಸಾಲು ಚಿತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇವರ ಅಭಿನಯದಲ್ಲಿ ಮೂಡಿಬರುತ್ತಿರುವ ಕೆಆರ್. ಚಿತ್ರದ ಟೀಸರ್ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಮೆಚ್ಚುಗೆ ಪಡೆದಿದ್ದು ಕನ್ನಡ ಚಿತ್ರರಂಗದಲ್ಲಿ ಭರವಸೆ ನಾಯಕರಾಗಲಿದ್ದಾರೆ.

%d bloggers like this: